ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಪಾಲಕರ ಕರ್ತವ್ಯ

KannadaprabhaNewsNetwork |  
Published : Nov 25, 2023, 01:15 AM IST
ಪೊಟೋ-ಸಮೀಪದ ಹುಲ್ಲೂರಿನ ಅಮೋಘ ಸಿದ್ದೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.   | Kannada Prabha

ಸಾರಾಂಶ

ಲಕ್ಷ್ಮೇಶ್ವರಕ್ಕೆ ಸಮೀಪದ ಹುಲ್ಲೂರ ಗ್ರಾಮದ ಅಮೋಘ ಸಿದ್ದೇಶ್ವರ ನೂತನ ದೇವಾಲಯವನ್ನು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪನವರು ಲೋಕಾರ್ಪಣೆ ಮಾಡಿದರು.

ಅಮೋಘ ಸಿದ್ದೇಶ್ವರ ನೂತನ ದೇವಾಲಯ ಲೋಕಾರ್ಪಣೆಗೈದ ಕೆ.ಎಸ್‌. ಈಶ್ವರಪ್ಪಲಕ್ಷ್ಮೇಶ್ವರ: ಭಾರತೀಯ ಸಂಸ್ಕೃತಿಯು ಜಗತ್ತಿನ ಯಾವ ದೇಶದಲ್ಲಿ ಕಂಡು ಬರುವುದಿಲ್ಲ, ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಶುಕ್ರವಾರ ಸಮೀಪದ ಹುಲ್ಲೂರ ಗ್ರಾಮದ ಅಮೋಘ ಸಿದ್ದೇಶ್ವರ ನೂತನ ದೇವಾಲಯವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರ ಜೀವನ ಉಜ್ವಲವಾಗಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಭಾರತೀಯ ಸಂಸ್ಕೃತಿಯ ಎಲ್ಲ ಸಂಸ್ಕೃತಿಗಿಂತ ವಿಶಿಷ್ಟವಾಗಿದೆ. ಭಾರತೀಯ ಧರ್ಮ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುವುದು ಅಗತ್ಯವಾಗಿದೆ. ಮಹಿಳೆಯರಿಗೆ ಗೌರವ ನೀಡುವ ಕಾರ್ಯವನ್ನು ಭಾರತೀಯ ಸಂಸ್ಕೃತಿಯು ನಮಗೆ ಕಲಿಸಿಕೊಡುತ್ತಿದೆ ಎಂದು ಹೇಳಿದರು.

ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಬೆಳೆಸುವ ಕಾರ್ಯ ಪಾಲಕರು ಮಾಡಬೇಕು ಎಂದು ಹೇಳಿದ ಅವರು ಮುಂದಿನ ವರ್ಷದಲ್ಲಿ ಈ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತಲೆ ಎತ್ತುವಂತಾಗಬೇಕು ಎಂದು ಹೇಳಿದರು. ಈ ವೇಳೆ ಜಿ.ಎಸ್. ಗಡ್ಡದೇವರಮಠ, ಕೆ.ಎಸ್. ಕಾಂತೇಶ ಸೇರಿದಂತೆ ಅನೇಕರು ಮಾತನಾಡಿದರು. ಸಮಾರಂಭದಲ್ಲಿ ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮಿಗಳು, ಮೈಲಾರ ಕ್ಷೇತ್ರದ ವೆಂಕಯ್ಯ ಸ್ವಾಮಿಗಳು, ಅಮೋಘ ಸಿದ್ದೇಶ್ವರ ಮಠದ ಪಂಚಾಕ್ಷರಯ್ಯ ಅಮೋಘಿಮಠ, ಬಸಣ್ಣ ಬೆಟಗೇರಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡದೇವರಮಠ, ನಿಂಗಪ್ಪ ಬನ್ನಿ, ಶೇಕಣ್ಣ ಕಾಳೆ, ವಾಸಣ್ಣ ಕುರಡಗಿ, ಫಕ್ಕೀರಪ್ಪ ಹೆಬಸೂರ, ನೀಲಪ್ಪ ಶರಸೂರಿ, ಮುದಕಣ್ಣ ಗದ್ದಿ, ಭಾಗ್ಯಶ್ರೀ ಬಾಬಣ್ಣ, ಶಿವಾನಂದ ಪೂಜಾರ, ವಿರೇಂದ್ರಗೌಡ ಪಾಟೀಲ, ಯಲ್ಲಪ್ಪ ಸೂರಣಗಿ, ರಾಮಣ್ಣ ಡಂಬಳ, ಬಸಣ್ಣ ಹೊಳಲಾಪೂರ, ಸುರೇಶ ಗೌಳಿ, ಮಂಜುನಾಥ ಗಂಟಿ, ವಿರುಪಾಕ್ಷಪ್ಪ ಪಡಗೇರಿ, ತಿಪ್ಪಣ್ಣ ಸಂಶಿ, ಐ.ಕೆ. ಹೊನ್ನಪ್ಪನವರ, ದೇವಪ್ಪ ಮತ್ತೂರ, ಶೇಖಪ್ಪ ಸಾಸಲವಾಡ, ಗೂಳಪ್ಪ ಕರಿಗಾರ ಸೇರಿದಂತೆ ಅನೇಕರು ಇದ್ದರು. ಸೋಮಣ್ಣ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಗೌಳಿ ಸ್ವಾಗತಿಸಿದರು. ಮಂಜುನಾಥ ಕೊಕ್ಕರಗುಂದಿ ನಿರೂಪಿಸಿದರು. ಅಮೋಘ ಸಿದ್ದೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ 15 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ