ಪೋಷಕರ ನೆರಳನ್ನು ಹಿಂಬಾಲಿಸುವುದು ಮಕ್ಕಳ ಸ್ವಭಾವ: ಡಾ.ಎ.ಟಿ.ಶಿವರಾಮು

KannadaprabhaNewsNetwork | Published : Mar 11, 2025 12:47 AM

ಸಾರಾಂಶ

ಪೋಷಕರ ನೆರಳನ್ನು ಹಿಂಬಾಲಿಸುವುದು ಮಕ್ಕಳ ಸ್ವಭಾವವಾಗಿರುತ್ತದೆ. ಹಾಗೇಯೆ ಪೋಷಕರು ಮಕ್ಕಳ ಮುಂದೆ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು, ಮಕ್ಕಳ ಜತೆ ಸಂವಾದ ಹಾಗೂ ಸಂಭಾಷಣೆ ಉತ್ತಮ ರೀತಿ ಮಾತನಾಡುವುದರಿಂದ ಮಕ್ಕಳ ಏಳ್ಗೆಗೆ ಅದು ಮುಖ್ಯ ಪಾತ್ರ ವಹಿಸುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮೆಣಸಗೆರೆ ಗ್ರಾಮದ ಜ್ಞಾನ ಮುದ್ರ ವಿದ್ಯಾ ಮಂದಿರ ಶಾಲೆಯಲ್ಲಿ ಮಹಾಭಾರತ ದೃಶ್ಯದ ಶಕ್ತಿ ಇದು-ಭಕ್ತಿ ಇದು ಶೀರ್ಷಿಕೆಯಡಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಹಾ ಭಾರತದ ದೃಶ್ಯದ ಪಾಂಡವರು ಮತ್ತು ಕೌರವರು ಗುರುಕುಲದಲ್ಲಿನ ಕಥಾ ಅವರನ್ನು ಅಂದ ಮಕ್ಕಳು ಉತ್ತಮವಾಗಿ ಅಭಿನಯಿಸಿ ಮೆಚ್ಚುಗೆ ಪಡೆದುಕೊಂಡಿತು.

ಅರ್ಜುನ್ ರೇಬಲ್ ಡ್ಯಾನ್ ಸ್ಟುಡಿಯೋದ ನೃತ್ಯ ಸಂಯೋಜಕ ಅರ್ಜುನ್ ರಾಕಿ ನಿರ್ದೇಶನದ ಮಲೈಮಹದೇಶ್ವರ ಹಾಡಿಗೆ ಮಕ್ಕಳು ನೃತ್ಯ ಮಾಡಿದರು.

ಇದಕ್ಕೂ ಮುನ್ನ ಶಾಲಾ ವಾರ್ಷಿಕೋತ್ಸವವನ್ನು ಆದಿಚುಂಚನಗಿರಿ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಟಿ.ಶಿವರಾಮು ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ಸ್ವಭಾವವನ್ನು ಮಕ್ಕಳ ಮುಂದೆ ಹೇಗೆ ಪ್ರದರ್ಶಿಸುತ್ತಾರೊ ಹಾಗೆಯೆ ಮಕ್ಕಳ ಬೆಳವಣಿಗೆಯಾಗಿರುತ್ತದೆ ಎಂದರು.

ಪೋಷಕರ ನೆರಳನ್ನು ಹಿಂಬಾಲಿಸುವುದು ಮಕ್ಕಳ ಸ್ವಭಾವವಾಗಿರುತ್ತದೆ. ಹಾಗೇಯೆ ಪೋಷಕರು ಮಕ್ಕಳ ಮುಂದೆ ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು, ಮಕ್ಕಳ ಜತೆ ಸಂವಾದ ಹಾಗೂ ಸಂಭಾಷಣೆ ಉತ್ತಮ ರೀತಿ ಮಾತನಾಡುವುದರಿಂದ ಮಕ್ಕಳ ಏಳ್ಗೆಗೆ ಅದು ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಮೈಸೂರಿನ ವೈದ್ಯಕೀಯ ಮತ್ತು ಸಂಶೋಧನ ಕೇಂದ್ರದ ಅನಸ್ತೇಶಿಯಾಲಜಿಸ್ಟ್ ಪ್ರಾಧ್ಯಾಪಕಿ ಡಾ.ಟಿ.ಕೆ.ಶಶಿಕಲಾ ಮಾತನಾಡಿ, ಮಕ್ಕಳು ಟಿವಿ ಮತ್ತು ಮೊಬೈಲ್ ದಾಸರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಅಧ್ಯಕ್ಷೆ ಡಾ.ಸೌಮ್ಯಾ ರಾಜೇಶ್ ಮಾತನಾಡಿ, ಪೋಷಕರು ಶಾಲೆ ನಿಯಮಗಳನ್ನು ಪಾಲಿಸುವ ಮೂಲಕ ಮಕ್ಕಳಲ್ಲಿ ಶಿಸ್ತಿಗೆ ಆದ್ಯತೆ ನೀಡಬೇಕು. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.

ಈ ವೇಳೆ ಉಪನಿರ್ದೇಶಕ ಶಿವರಾಮೇಗೌಡ, ನಿವೃತ್ತ ಬಿಇಒ ಎಚ್.ಸಿ. ಕಾಳೀರಯ್ಯ, ಶಾಲೆ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪರೇಗೌಡ, ಛೇರ್ಮನ್ ಪ್ರಭಾವತಿ ಸುರೇಶ್, ಮುಖ್ಯ ಶಿಕ್ಷಕಿ ಶೃತಿ ಸೇರಿದಂತೆ ಶಿಕ್ಷಕ ಹಾಗೂ ಶಿಕ್ಷಕೇತರರು ಭಾಗವಹಿಸಿದ್ದರು.

Share this article