ಸೈಬರ್ ಅಪರಾಧಗಳಲ್ಲಿ ಶಿಕ್ಷಿತರ ಬಲಿ ಆಗುತ್ತಿರುವುದು ಖೇದಕರ: ಎಸ್ಪಿ ದೀಪನ್

KannadaprabhaNewsNetwork |  
Published : Aug 10, 2026, 02:45 AM IST
ಭಟ್ಕಳದ ಗುರುಸುಧೀಂದ್ರ ಕಾಲೇಜಿನಲ್ಲಿ ಎಸ್ಪಿ ದೀಪನ್ ಎಂ.ಎನ್. ಬಿ.ಎಸ್ಸಿ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ ತರಗತಿಯನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಲ್ಲಿನ ಪ್ರತಿಷ್ಠಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್‌ ತರಗತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಉದ್ಘಾಟಿಸಿದರು.

ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ ತರಗತಿಗೆ ಚಾಲನೆಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿನ ಪ್ರತಿಷ್ಠಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್‌ ತರಗತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಹೆಚ್ಚು ಹೆಚ್ಚು ಶಿಕ್ಷಿತರೇ ಬಲಿಯಾಗುತ್ತಿರುವುದು ಖೇದಕರ. ಹಿಂದಿನ ಅಪರಾಧಕ್ಕೂ ಇಂದಿನ ಅಪರಾಧಕ್ಕೂ ಬಹಳ ವ್ಯತ್ಯಾಸವಿದೆ. ಇಂದು ಫಿಂಗರ್ ಪ್ರಿಂಟ್ ತೆಗೆಯುವುದು, ಅಪರಾಧಿಗಳು ಬಿಟ್ಟು ಹೋದ ಕುರುಹುಗಳನ್ನು ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿದೆ. ದೇಶದಲ್ಲಿಯೇ ಪೊಲೀಸ್ ಇಲಾಖೆ ಬಹಳ ಬದಲಾವಣೆಯಾಗುತ್ತಿದೆ. ಇಂದು ಒಂದು ಪ್ರಕರಣ ಸಂಭವಿಸಿದರೆ ಅದನ್ನು ಅನೇಕ ರೀತಿಯ ತಾಂತ್ರಿಕ ವಿಚಾರಗಳಿಂದ ತನಿಖೆ ಮಾಡಬೇಕಾಗುತ್ತದೆ. ಕೇವಲ ತನಿಖೆ ಮಾಡುವುದಷ್ಟೇ ಅಲ್ಲ, ತನಿಖೆ ಮಾಡಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಯಾಗುವುದು ಮುಖ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಸಾಕ್ಷಿ ಸಂಗ್ರಹ ಮಾಡುವುದೂ ಕೂಡಾ ಕಷ್ಟಕರವಾಗಿದೆ. ಅಪರಾಧಿಗಳೂ ಕೂಡಾ ಬೇರೆ ಬೇರೆ ವಿಧಾನಗಳನ್ನು ಬಳಸುತ್ತಾರೆ ಎಂದರು.

ಫೋರೆನ್ಸಿಕ್ ಸೈನ್ಸ್‌ನಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಯಾವುದೇ ಒಂದು ವಸ್ತು ದೊರೆತರೆ ಅದರ ಸಂಪೂರ್ಣ ಮಾಹಿತಿ ಕಲೆ ಹಾಕಬಹುದು, ಒಂದು ಅಕ್ಷರ, ಸಹಿ, ಪತ್ರ ಇದ್ದರೆ ಅವುಗಳ ಕಾಲ ಕೂಡಾ ಹೇಳಬಹುದು ಎಂದರು.

ಇಂದಿನ ಎಐ ಯುಗದಲ್ಲಿ ಯಾವುದು ಸತ್ಯವಾದದ್ದು, ಯಾವುದು ಕೃತಕ ಎನ್ನುವುದನ್ನು ಕಂಡು ಹಿಡಿಯುವುದೇ ಕಷ್ಟಕರವಾಗಿದೆ ಎಂದ ಅವರು ವಿಜ್ಞಾನ ಮುಂದುವರಿದಿದೆ. ಯಾವುದೇ ಕಂಪ್ಯೂಟರ್‌ಗೆ ಮನುಷ್ಯನ ಮೆದುಳು ಸಾಟಿಯಲ್ಲ, ಕಂಪ್ಯೂಟರ್‌ಗಿಂತ ಹಲವು ಪಟ್ಟು ಮೆದುಳು ಚುರುಕು ಎಂದರು.

ಅಧ್ಯಕ್ಷತೆಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಶ್ಯಾನಭಾಗ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಹೆ ಯುನಿವರ್ಸಿಟಿಯ ಫ್ರೊಫೆಸರ್ ಡಾ. ಶ್ರೀಕಾಂತ ಪ್ರಭು, ಎಂ.ಐ.ಟಿ. ಮಣಿಪಾಲದ ಸೈಬರ್ ಸೆಕ್ಯುರಿಟಿ ರಿಸೋರ್ಸ ಪರ್ಸನ್ ಡಾ. ನಾಗರಾಜ ಕಾಮತ್, ಡಿವೈಎಸ್ಪಿ ಗಿರೀಶ್ ಬಿ., ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಮೆನೇಜಿಂಗ್ ಟ್ರಸ್ಟಿ ರಾಜೇಶ ನಾಯಕ, ಟ್ರಸ್ಟೀ ಮೆನೇಜರ್ ನಾಗೇಶ ಭಟ್ಟ, ಟ್ರಸ್ಟಿಗಳಾದ ರಮೇಶ ಖಾರ್ವಿ, ಶ್ರೀಧರ ಶ್ಯಾನಭಾಗ, ಗುರುದತ್ತ ಶೇಟ್, ಪ್ರಾಂಶುಪಾಲ ಶ್ರೀನಾಥ ಪೈ ಮುಂತಾದವರಿದ್ದರು.

ಎಸ್.ಜಿ.ಎಸ್. ಸಪ್ತಸ್ವರ ತಂಡ ಪ್ರಾರ್ಥನೆ ಹಾಡಿದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಮೆನೇಜಿಂಗ್ ಟ್ರಸ್ಟಿ ರಾಜೇಶ ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ರವೀಂದ್ರ ಕೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಿಯ ಪಿಂಟೋ ಹಾಗೂ ದೇವೆಂದ್ರ ಕಿಣಿ ನಿರ್ವಹಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿ ಉಳಿವಿಗೆ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆ: ಎಎ. ಸೂಫಿ
ಸಂಘಟನಾ ಸೃಜನ್: ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್ ಮುಖಂಡರ ಸಭೆ