ಅಭಿನಂದನಾ ಸಮಾರಂಭ
ಪ್ರಶಸ್ತಿಯನ್ನು ಬೆನ್ನಟ್ಟಿ ಹೋಗಬಾರದು, ಪ್ರಶಸ್ತಿಯೇ ವ್ಯಕ್ತಿಯನ್ನು ಹುಡುಕಿಕೊಂಡು ಬಂದಾಗ ಅದಕ್ಕೆ ಹೆಚ್ಚು ಗೌರವ ದೊರೆಯುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025ಸಾಲಿನ ಮಾದ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಅನಂತ ನಾಡಿಗ್ ರನ್ನು ಸನ್ಮಾನಿಸಿ ಮಾತನಾಡಿದರು.ಅನೇಕ ಹಿರಿಯ ಪತ್ರಕರ್ತರು ನಿಷ್ಟೆ ಮತ್ತು ಪ್ರಾಮಾಣಿ ಸೇವೆ ಸಲ್ಲಿಸುತ್ತಾ ಪತ್ರಿಕಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಾಧ್ಯಮ ಅಕಾಡೆಮಿ ಸಭೆಯಲ್ಲಿ ನಾನು ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಪತ್ರಕರ್ತ ಅನಂತ ನಾಡಿಗ್ ಅವರ ಹೆಸರು ಪ್ರಸ್ತಾಪಿಸಿದಾಗ ಎರಡನೆ ಮಾತೇ ಇಲ್ಲದೆ ಸಭೆ ಸಂತೋಷದಿಂದ ಸಮ್ಮತಿಸಿತು. ಮಾಧ್ಯಮ ಅಕಾಡೆಮಿಯ ಈ ಪ್ರಶಸ್ತಿ ಅತ್ಯಂತ ಹಿರಿಯದು. ಅನಂತ ನಾಡಿಗ್ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಕರ್ತರಾಗಿ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ ಎಂದರು. ಪತ್ರಕರ್ತರ ಉಚಿತ ಬಸ್ ಪಾಸ್ ಗೆ ಇರುವ ನಿಯಮ ಸರಳಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.ಡಿಸಿಸಿ ಬ್ಯಾಂಕ್ ಮತ್ತು ಮಾಮ್ ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ ಪತ್ರಕರ್ತರ ಹಿತ ಕಾಪಾಡುವಲ್ಲಿ ನಮ್ಮಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಹೆಚ್ಚು ಕ್ರೀಯಾಶೀಲರಾಗಿದ್ದಾರೆ. ಕೋರೋನಾ ಸಂದರ್ಭ ದಲ್ಲಿ ಅವರು ನಿರ್ವಹಿಸಿದ ಕಾರ್ಯ ಶ್ಲಾಘನೀಯ. ಅನಂತ ನಾಡಿಗ್ ಅವರು ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಹಿರಿಯ ವಕೀಲರು ಮತ್ತು ಪತ್ರಕರ್ತ ಎಸ್.ಸುರೇಶ್ ಚಂದ್ರ ಅವರು ಮಾತನಾಡಿ ಪತ್ರಕರ್ತ ಅನಂತ ನಾಡಿಗ್ ಅವರಿಗೆ ಇನ್ನೂ ಹೆಚ್ಚು ಪ್ರಶಸ್ತಿಗಳು ದೊರಕಲಿ ಎಂದು ಹಾರೈಸುವುದಾಗಿ ಹೇಳಿದರು.ಅನಂತ ನಾಡಿಗ್ ಅವರನ್ನು ಶಿವಾನಂದ ತಗಡೂರು ಸನ್ಮಾನಿಸಿದರು. ಪತ್ರಕರ್ತ ಜಿ.ಟಿ.ರಮೇಶ್ , ಟಿ.ಎಚ್. ಮಂಜುನಾಥ್, ಪುರಸಭೆ ನಾಮಿನಿ ಸದಸ್ಯ ಟಿ.ಡಿ. ಮಂಜುನಾಥ್, ಟಿ.ವಿ.ಜಯ್ಯಣ್ಣ, ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
-11ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪತ್ರಕರ್ತ ಅನಂತ ನಾಡಿಗ್ ಅವರನ್ನು ಸನ್ಮಾನಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಹಿರಿಯ ಪತ್ರಕರ್ತ ಎಸ್.ಸುರೇಶ್ ಚಂದ್ರ ಮತ್ತಿತರು ಇದ್ದರು.