ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದ್ರೂ ಆಶ್ಚರ್ಯವಿಲ್ಲ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Oct 15, 2026, 01:30 AM IST
 ಬಿ.ವೈ.ವಿಜಯೇಂದ್ರ | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಷಡ್ಯಂತ್ರ ನಡೀತಿದೆ. ಕಾಂಗ್ರೆಸ್‌ನಲ್ಲಿ ಯಾವ ರೀತಿ ಆಂತರಿಕ ಕಚ್ಚಾಟ ಆಗುತ್ತಿದೆ ಎಂದರೆ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದ್ರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಷಡ್ಯಂತ್ರ ನಡೀತಿದೆ. ಕಾಂಗ್ರೆಸ್‌ನಲ್ಲಿ ಯಾವ ರೀತಿ ಆಂತರಿಕ ಕಚ್ಚಾಟ ಆಗುತ್ತಿದೆ ಎಂದರೆ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದ್ರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಹೊಸನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವ ಷಡ್ಯಂತ್ರ, ಕುತಂತ್ರ ಒಂದೊಂದೇ ಬಹಿರಂಗ ಆಗುತ್ತಿದೆ. ನಾನು ಹೇಳೋದು ನಿಮಗೆ ಉಡಾಫೆ ಅನಿಸಬಹುದು. ಆದರೆ, 3ನೇ ಸಿಎಂ ಬಂದ್ರೂ ಆಶ್ಚರ್ಯವಿಲ್ಲ. ಆ ರೀತಿ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿದೆ ಎಂದರು.

ಯಾವ ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ, ಅದೇ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವ ಷಡ್ಯಂತ್ರ-ಕುತಂತ್ರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಇದರ ಪರಿಣಾಮವೇ ಸ್ಟಿಂಗ್ ಆಪರೇಶನ್. ಇದು ಸಿದ್ದರಾಮಯ್ಯ ಕೂಡ ಹೈಕೋರ್ಟ್‌ಗೆ ಹೋಗಿ ಸ್ಟೇ ತಗೋಳುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ನಾನು ಮತ್ತೇ ಮತ್ತೆ ಹೇಳುತ್ತಿದ್ದೇನೆ. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಆ ರೀತಿಯ ಆಂತರಿಕ ಸಮಸ್ಯೆ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿದೆ. ಇದು ಯಾವ ಹಂತಕ್ಕೆ ಬೇಕಾದ್ರೂ ಬಂದು ಮುಟ್ಟಬಹುದು ಎಂದು ಎಚ್ಚರಿಕೆ ನೀಡಿದರು.

ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಗಳು, ಶಾಸಕರು ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಟಿಂಗ್ ನಿರ್ಮಾತೃಗಳಿದ್ದಾರೆ. ಯಾವ್ಯಾವ ಸಚಿವರ ಮೇಲೆ ಸ್ಟಿಂಗ್ ಆಗಿದೆ ಎಂದು ಸಚಿವರೇ ಭಯಭೀತರಾಗಿರೋದು ಸತ್ಯ.

ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಮಾಡ್ತಿದ್ದಾರೆ. ಮಾಜಿ ಸಚಿವ ರಾಜಣ್ಣರ ಹೇಳಿಕೆಯನ್ನು ಎಲ್ಲರೂ ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು, ಮಾಜಿ ಸಚಿವರು ಇದನ್ನು ಅಲ್ಲಗೆಳೆಯುತ್ತಿಲ್ಲ. ಇದರ ಪ್ರೊಡ್ಯೂಸರ್, ಡೈರೆಕ್ಟರ್ ಯಾರು ಅಂತಾ ಕಾಂಗ್ರೆಸ್ ಪಕ್ಷದವರೇ ತಿಳಿಸುತ್ತಾರೆ. ಆಗ ಸತ್ಯ ಏನೆಂದು ಗೊತ್ತಾಗುತ್ತೆ ಎಂದು ಕುಟುಕಿದರು.

ಬಿಜೆಪಿಗೆ ಕಾಂಗ್ರೆಸ್‌ ಶಾಸಕರು ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರರ್ಥ ನಾವು ಈ ಸರ್ಕಾರವನ್ನ ಕೆಡವಿ ಅಧಿಕಾರಕ್ಕೆ ಬರ್ತೇವೆ ಅಂತಾ ಹೇಳ್ತಿಲ್ಲ. ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ಕಾಂಗ್ರೆಸ್ ಸರ್ಕಾರವೇ ಇನ್ನೂ ಒಂದುವರೆ ವರ್ಷ ಅಧಿಕಾರ ನಡೆಸಲಿ. ನಾಳೆ ಚುನಾವಣಾ ಘೋಷಣೆಯಾದ್ರೂ ಕನಿಷ್ಟ 20 ರಿಂದ 25 ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರ್ತಾರೆ. ಆ ರೀತಿಯ ವಾತವರಣ ಇದೆ. ಅವರೆಲ್ಲರೂ ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರುಳಿಗೆ ಹುಲಿ ಬಲಿ, ದಂತರಹಿತ ಆನೆ ಕಳೇಬರ
ಸಾಗರ ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಒತ್ತಾಯ