ಹಳೇಬೀಡು ಗ್ರಾಪಂಗೆ ಇಟಗಿ ಗ್ರಾಪಂ ಭೇಟಿ

KannadaprabhaNewsNetwork |  
Published : Oct 10, 2023, 01:01 AM IST
9ಕೆಕೆಆರ್1:ಕುಕನೂರು ತಾಲೂಕಿನ ಇಟಗಿ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮ ಪಂಚಾಯತಿಗೆ ಬೇಟಿ ನೀಡಿದರು. | Kannada Prabha

ಸಾರಾಂಶ

ಕುಕನೂರು ತಾಲೂಕಿನ ಇಟಗಿ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಪಂಗೆ ಭೇಟಿ ನೀಡಿದರು.

ಕುಕನೂರು: ತಾಲೂಕಿನ ಇಟಗಿ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಪಂಗೆ ಭೇಟಿ ನೀಡಿದರು.ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ಕ್ರಿಯಾ ಯೋಜನೆಯಡಿ ಗ್ರಾಪಂಗಳ ಪರಸ್ಪರ ಕಲಿಕಾ ಕಾರ್ಯಕ್ರಮದಲ್ಲಿ ಇಟಗಿ ಗ್ರಾಪಂ ಆಯ್ಕೆಯಾಗಿದ್ದು, ಉತ್ತಮ ಸಾಧನೆಗೈದ ಗ್ರಾಪಂಗೆ ಭೇಟಿ ಅವಕಾಶ ಹಿನ್ನೆಲೆ, ಇಟಗಿ ಗ್ರಾಪಂ ಆಡಳಿತ ಮಂಡಳಿ ಹಳೇಬೀಡು ಗ್ರಾಪಂಗೆ ಭೇಟಿ ನೀಡಿ ಗ್ರಾಪಂನ ಆಡಳಿತ ಕಾರ್ಯ ವೈಖರಿ ಬಗ್ಗೆ ಅಧ್ಯಯನ ಮಾಡಿದ್ದಾರೆ. ಗ್ರಾಪಂಗಳು ಉತ್ತಮ ಕಾರ್ಯಸಾಧನೆ ಮಾಡುವಲ್ಲಿ ಅನುಸರಿಸಿರುವ ಕಾರ್ಯತಂತ್ರಗಳನ್ನು ಅಧ್ಯಯನ ಮಾಡಿ ತಿಳಿಯುವ ಮತ್ತು ಇಂತಹ ಅಂಶಗಳನ್ನು ತಮ್ಮ ಗ್ರಾಪಂಗಳಲ್ಲಿ ಅಳವಡಿಸುವಲ್ಲಿ ಕಾರ್ಯತಂತ್ರ ರೂಪಿಸಿ ಅನುಸರಣೆ ಮಾಡುತ್ತ ಸಾಧನೆ ಹಾದಿಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಸಲುವಾಗಿ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ