ಹೊಸಕೋಟೆ: ಪ್ರತಿ ನಿತ್ಯ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಔಷಧಿ, ರಸಗೊಬ್ಬರ ಕೃಷಿ ಪರಿಕರಗಳನ್ನು ಮಾರಾಟ ಮಾಡುತ್ತಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಹೊಸಕೋಟೆ ಆವರಣದಲ್ಲಿ ರೈತರ ವಾಹನಗಳ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಶರತ್ ಬಚೇಗೌಡ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಪಾರ್ವತಿಪುರದಲ್ಲಿ ನೂತನ ಗೋದಾಮು ಉದ್ಘಾಟಿಸಿ ಮಾತನಾಡಿದರು.ಹೊಸಕೋಟೆ ತಾಲೂಕು ಸೊಸೈಟಿ ವಿವಿಧ ಶಾಖೆಗಳನ್ನು ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪ್ರಮುಖವಾಗಿ ಎಲ್ಲಾ ದಿನ ಬಳಕೆ ವಸ್ತುಗಳು, ಮಕ್ಕಳ ಕಲಿಕಾ ಸಾಮಗ್ರಿಗಳು ಸೇರಿದಂತೆ ಸಂಘದ ಆಡಳಿತ ಕಚೇರಿ ಸಹ ಇಲ್ಲೆ ಇದೆ. ಪ್ರಮುಖವಾಗಿ ಅಂಚೆ ಕಚೇರಿ ಕಟ್ಟಡ ಸಹ ಇದೇ ಆವರಣದಲ್ಲಿರುವ ಕಾರಣ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಾರೆ. ಆದ್ದರಿಂದ ಸೂಕ್ತವಾಗಿ ವಾಹನ ಪಾರ್ಕಿಂಗ್ ಸೇರಿದಂತೆ ಆವರಣದ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ ಮಾತನಾಡಿ, ತಮ್ಮೇಗೌಡರು ಉಚಿತ ಈ ಜಾಗವನ್ನು ಸಂಘಕ್ಕೆ ನೀಡಿದ್ದು, ಇದರಿಂದ ಲಕ್ಷಾಂತರ ರೈತರಿಗೆ ಸಹಾಯವಾಗುತ್ತಿದೆ. ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಹಲವಾರು ಮಹಾ ನಾಯಕರು ಟಿಎಪಿಸಿಎಂಎಸ್ ನಲ್ಲಿ ಆಡಳಿತ ಮಾಡುವ ಮೂಲಕ ಇಂದಿಗೂ ಉತ್ತಮವಾಗಿ ನಡೆಯುತ್ತಿದೆ. ಕಡಿಮೆ ಲಾಭದಲ್ಲಿ ರೈತರಿಗೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಎಲ್ಲರ ನಂಬಿಕೆ ಗಳಿಸಿದ್ದು ತಾಲೂಕಿನ ಹಲವೆಡೆ ಸಂಸ್ಥೆಯ ಗೋದಾಮುಗಳನ್ನು ನಿರ್ಮಿಸಿ ದವಸ ದಾನ್ಯಗಳ ದಾಸ್ತಾನು ಮಾಡುವ ಕೇಂದ್ರಗಳನ್ನಾಗಿ ಮಾಡಲಾಗಿದೆ ಎಂದರು.ಬಮೂಲ್ ನಿರ್ದೇಶಕ ಬಿವಿ ಸತೀಶ್ ಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಎಲ್‌ಅಂಡ್‌ಟಿ ಮಂಜುನಾಥ್, ಹಿರಿಯ ಮುಖಂಡರಾದ ಗೋಪಾಲಗೌಡ, ಸಿ ಮುನಿಯಪ್ಪ, ಬಿವಿ ಬೈರೇಗೌಡ, ಹನುಮಂತೇಗೌಡ, ಶಂಕರ್ ನಾರಾಯಣ್, ರಮಾ ಮಂಜುನಾಥ್, ಪಾರ್ವತಮ್ಮ, ರಾಣಿರಾಮಚಂದ್ರಪ್ಪ, ಕೃಷ್ಣ ಮೂರ್ತಿ ಇತರರು ಹಾಜರಿದ್ದರು.
ಫೋಟೋ: 16 ಹೆಚ್‌ಎಸ್‌ಕೆ 2ಹೊಸಕೋಟೆಯಲ್ಲಿ ಟಿಎಪಿಸಿಎಂಎಸ್ ಸಂಘದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.