ನೆಲದ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದು

KannadaprabhaNewsNetwork | Published : Apr 20, 2025 1:51 AM

ಸಾರಾಂಶ

ಮಣ್ಣಿನ ಮಡಿಕೆಗಳನ್ನು ಬಳಸಿ, ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಅತ್ಯಂತ ಬಲು ರುಚಿಕರವಾಗಿರುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ನೆಲದ ಮೇಲೆ ಕುಳಿತು ಅನ್ನ ಪೂರ್ಣೇಶ್ವರಿಯನ್ನು ಸ್ಮರಿಸಿ ಊಟ ಮಾಡುತ್ತಿದ್ದರು. ನಮ್ಮ ಪೂರ್ವಜರು ನಡೆಸಿಕೊಂಡ ಬಂದ ರೀತಿ ಉತ್ತಮವಾದುದು. ನೆಲದ ಮೇಲೆ ಕುಳಿತು ಒಟ್ಟಿಗೆ ಊಟ ಮಾಡುವುದರಿಂದ ಅನೇಕ ಆರೋಗ್ಯಕರ ಅನುಕೂಲತೆಗಳು ಇವೆ ಎಂದರು. ಗ್ರಾಮೀಣ ಸೊಗಡಿನ ಅಕ್ಕಿ ಶಾವಿಗೆ ರಾಗಿ ಶಾವಿಗೆ ಚಿಲ್ಕ್ ಅವರೇ ಸಾರು ಮತ್ತು ಬೆಲ್ಲ ತೆಂಗಿನ ಕಾಯಿ ಹಾಲು ಇವುಗಳನ್ನು ನಮ್ಮ ರಂಗಲೋಕದ ಸದಸ್ಯರು, ಮಾತೆಯರು, ಮಕ್ಕಳು ಎಲ್ಲರೂ ಸೇರಿ ಬಹಳ ಶ್ರಮದಾಯಕವಾಗಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ನಮಗೆಲ್ಲರಿಗೂ ಉಣ ಬಡಿಸಲು ತಯಾರು ಮಾಡಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನೆಲದ ಮೇಲೆ ಕುಳಿತು ೫ ಬೆರಳುಗಳನ್ನು ಬಳಸಿ ಊಟ ಮಾಡುವುದು ಆರೋಗ್ಯಕರ ಎಂದು ಪಟ್ಟಣದ ಆಯುರ್ವೇದ ವೈದ್ಯೆ ಡಾ.ತ್ರಿವೇಣಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಘವೇಂದ್ರ ಸಾಮಿಲ್ ರಸ್ತೆಯಲ್ಲಿರುವ ರಂಗಲೋಕದಲ್ಲಿ ಪ್ರತಿಮಾ ಟ್ರಸ್ಟ್ ಹಾಗೂ ಸಮಾನ ಮನಸ್ಕರ ಸಮಿತಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಗ್ರಾಮೀಣ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕತೆ ಎಂಬ ಕಾರ್ಯಕ್ರಮವನ್ನು ಶಾವಿಗೆ ಒತ್ತುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶಾವಿಗೆ ಒತ್ತುವ ಮೂಲಕ ಕಾರ್ಯಕ್ರಮ ಉದ್ಘಾಟನೆ:

ಮಣ್ಣಿನ ಮಡಿಕೆಗಳನ್ನು ಬಳಸಿ, ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಅತ್ಯಂತ ಬಲು ರುಚಿಕರವಾಗಿರುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ನೆಲದ ಮೇಲೆ ಕುಳಿತು ಅನ್ನ ಪೂರ್ಣೇಶ್ವರಿಯನ್ನು ಸ್ಮರಿಸಿ ಊಟ ಮಾಡುತ್ತಿದ್ದರು. ನಮ್ಮ ಪೂರ್ವಜರು ನಡೆಸಿಕೊಂಡ ಬಂದ ರೀತಿ ಉತ್ತಮವಾದುದು. ನೆಲದ ಮೇಲೆ ಕುಳಿತು ಒಟ್ಟಿಗೆ ಊಟ ಮಾಡುವುದರಿಂದ ಅನೇಕ ಆರೋಗ್ಯಕರ ಅನುಕೂಲತೆಗಳು ಇವೆ ಎಂದರು.

ಹಸಿದ ಹೊಟ್ಟೆಯಲ್ಲಿ ನೀರು ಕುಡಿಯಬಾರದು, ಊಟವಾದ ತಕ್ಷಣ ನೀರು ಕುಡಿಯಬಾರದು ಹಾಗೆ ಮಾಡಿದರೆ ವಾತ, ಪಿತ್ತ, ಕಫದಲ್ಲಿ ವ್ಯತ್ಯಾಸವಾಗಿ ಅನಾ ರೋಗ್ಯ ಕಾಡುತ್ತದೆ. ಜೀರ್ಣಕ್ರಿಯೆ ವ್ಯತ್ಯಾಸವಾಗುತ್ತದೆ. ನಾವು ತಿಂದ ಆಹಾರ ಚೆನ್ನಾಗಿ ಪಚನವಾಗಬೇಕಾದರೆ ಹಿಂದಿನವರು ರೂಢಿಸಿಕೊಂಡು ಬಂದ ತಾಂಬೂಲ ಸೇವಿಸುವುದು ಪಚನ ಕ್ರಿಯೆಗೆ ಸಹಕಾರಿಯಾಗಿರುವುದರಿಂದ ಕಡ್ಡಾಯವಾಗಿ ತಾಂಬೂಲ ಸೇವಿಸಬೇಕು. ಆರೋಗ್ಯ ಕೆಟ್ಟ ಮೇಲೆ ಪ್ರಯಾಸ ಪಡುವ ಬದಲು ಆರೋಗ್ಯ ಚೆನ್ನಾಗಿರುವಾಗಲೇ ಊಟದ ಜತೆಗೆ ವೈಜ್ಞಾನಿಕವಾದ ಆಯುರ್ವೇದ ನೀತಿಗಳನ್ನು ಜೋಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಮಾ ಟ್ರಸ್ಟ್‌ನ ಅಧ್ಯಕ್ಷ ತೆಂಕನಹಳ್ಳಿ ಉಮೇಶ್ ಮಾತನಾಡಿ, ಗ್ರಾಮೀಣ ಸೊಗಡಿನ ಅಕ್ಕಿ ಶಾವಿಗೆ ರಾಗಿ ಶಾವಿಗೆ ಚಿಲ್ಕ್ ಅವರೇ ಸಾರು ಮತ್ತು ಬೆಲ್ಲ ತೆಂಗಿನ ಕಾಯಿ ಹಾಲು ಇವುಗಳನ್ನು ನಮ್ಮ ರಂಗಲೋಕದ ಸದಸ್ಯರು, ಮಾತೆಯರು, ಮಕ್ಕಳು ಎಲ್ಲರೂ ಸೇರಿ ಬಹಳ ಶ್ರಮದಾಯಕವಾಗಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ನಮಗೆಲ್ಲರಿಗೂ ಉಣ ಬಡಿಸಲು ತಯಾರು ಮಾಡಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳು ಎಂದರು.

ಈ ವೇಳೆ ತಾಲೂಕಿನ ಬದ್ದಿಕೆರೆ ಗ್ರಾಮದ ನಿವೃತ್ತ ಪ್ಯಾರಾ ಮಿಲಿಟರಿ ಯೋಧ ಗೋವಿಂದೇಗೌಡ ಇವರನ್ನು ದೇಶದ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಕಾರಣಕ್ಕಾಗಿ ಪ್ರತಿಮಾ ಟ್ರಸ್ಟ್ ಮತ್ತು ಸಮಾನ ಮನಸ್ಕ ಸಮಿತಿ ಮಾತೆಯರು ಸೇರಿ ಸನ್ಮಾನಿಸಿದರು. ಸೌದೆ ಒಲೆಯಲ್ಲಿ ತಯಾರಿಸಿದ ಶಾವಿಗೆ, ಬೆಲ್ಲದ ಕಾಯಿ ಹಾಲು, ಚಿಲ್ಕವರೆ ಸಾರು, ಮುದ್ದೆ ಇವುಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಭಿಕರೆಲ್ಲರೂ ಸಂತೋಷದಿಂದ ಸವಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಆದಿಶೇಷ ಕುಮಾರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚ.ನಂ.ಅಶೋಕ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೆನಹಳ್ಳಿ ಲೋಕೇಶ್, ಪ್ರತಿಮಾ ಟ್ರಸ್ಟ್‌ನ ಸಂಚಾಲಕ ಹಾಗೂ ಪತ್ರಕರ್ತ ಎ.ಎಲ್.ನಾಗೇಶ್, ಕಾರ್ಯದರ್ಶಿ ಬಿ.ಜಗದೀಶ್ ಚಂದ್ರ, ಸದಸ್ಯರಾದ ಬಿ.ಎನ್.ಪ್ರಕಾಶ್, ಎಚ್.ಆರ್‌.ದೇವರಾಜು, ಸಾವಯವ ಕೃಷಿಕ ಬೆಕ್ಕ ರಾಘವೇಂದ್ರ, ಕಲಾವಿದರಾದ ಕೋಟೆ ಯಶೋಧೆ ಜೈನ್, ಕುಸುಮಾ, ಲತಾ, ಪುರಸಭಾ ಸಿಇಒ ಶಾರದಮ್ಮ, ಸುಜಾತ ಗೋವಿಂದೇಗೌಡ, ರೂಪ, ಸಂತೋಷ, ವನಜಾಕ್ಷಿ ಧಮೇಂದ್ರ ನೇತ್ರಾ ನವೀನ್ ಇದ್ದರು.

Share this article