ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ 15ರಂದು ಹಲಸು ಮೇಳ - ಆಹಾರೋತ್ಸವ

KannadaprabhaNewsNetwork |  
Published : Jun 12, 2025, 05:07 AM IST
32 | Kannada Prabha

ಸಾರಾಂಶ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಹಲಸು ಮೇಳ - ಆಹಾರೋತ್ಸವ ಜೂ.15ರಂದು ಬೆಳಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6ರ ವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಹಲಸು ಮೇಳ - ಆಹಾರೋತ್ಸವ ಜೂ.15ರಂದು ಬೆಳಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6ರ ವರೆಗೆ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಈ ಮೇಳ ನಡೆಯಲಿದೆ.

ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹಲಸು ಮೇಳ - ಆಹಾರೋತ್ಸವ ಏರ್ಪಡಿಸಲಾಗಿದೆ. ಮಾತೆಯರು, ಮಹನೀಯರು ತಯಾರಿಸಿದ ಅತ್ಯುತ್ತಮ ಆಹಾರವನ್ನು ಆರೋಗ್ಯಪೂರ್ಣ ಜೀವನಕ್ಕಾಗಿ ಪಡೆದುಕೊಳ್ಳಬಹುದಾಗಿದೆ.

ಮಂಗಳೂರು ಹವ್ಯಕ ಮಂಡಲದ ಕಾರ್ಯಕರ್ತರು ಸೇವಾ ರೂಪದಲ್ಲಿ ಈ ಹಲಸು ಮೇಳ ಆಹಾರೋತ್ಸವವನ್ನು ಆಯೋಜಿಸುತ್ತಿದೆ.

ಈ ಮೇಳದಲ್ಲಿ ಹಲಸು, ಮಾವು, ಬಾಳೆಯ ವಿವಿಧ ರೀತಿಯ ತಿಂಡಿಗಳು ಸಿಗಲಿವೆ. ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಕಾಯಿ ದೋಸೆ/ಶುಂಠಿ ಚಟ್ನಿ, ಹಲಸಿನ ಹಣ್ಣಿನ ದೋಸೆ, ಹಲಸಿನಹಣ್ಣಿನ ಜಿಲೇಬಿ, ಸೊಳೆ ರೊಟ್ಟಿ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಸೋಂಟೆ, ಹಲಸಿನ ಕಾಯಿ ಬೋಂಡ, ಬಾಳೆಕಾಯಿ ಚಿಪ್ಸ್, ಹಲಸಿನ ಕಾಯಿ ಹಪ್ಪಳ, ಹಲಸಿನ ಹಣ್ಣಿನ ಹಪ್ಪಳ, ಬಾಳೆಹಣ್ಣಿನ ಹಲ್ವ, ಹಲಸಿನ ಹಣ್ಣಿನ ಹಲ್ವ, ಹಲಸಿನ ಬೀಜದ ಅದ್ದಿಹಿಟ್ಟು, ಮಾವಿನ ಹಣ್ಣಿನ ಮಾಂಬಳ, ಹಲಸಿನ ಹಣ್ಣಿನ ಸೊಳೆ, ಹಲಸಿನ ಕಾಯಿ ಸೊಳೆ, ಗುಜ್ಜೆ ಪಲಾವ್, ಹಲಸಿನ ಹಣ್ಣು ಕೊಟ್ಟಿಗೆ, ಹಲಸಿನ ಹಣ್ಣು ಗೆಣಸಲೆ, ಬಾಳೆಕಾಯಿ ದೋಸೆ, ಹಲಸಿನ ಕಾಯಿ ಪೋಡಿ, ಹಲಸಿನ ಹಣ್ಣಿನ ಬನ್ಸ್, ಹೋಳಿಗೆ, ಹಲಸಿನ ಹಣ್ಣಿನ ಗುಳಿಅಪ್ಪ, ಚಕ್ಕುಲಿ, ಹಲಸಿನ ಬೀಜದ ಸೂಪ್, ಹಲಸಿನಕಾಯಿ ಪಲಾವ್, ಅತಿರಸ, ಸಕ್ಕರೆ ಬೆರಟಿ, ಕಾಫಿ, ಟೀ, ಕಷಾಯ, ಮಾವಿನಹಣ್ಣು, ಮಾವಿನಹಣ್ಣಿನ ರಸಾಯನ, ಮಸಾಲೆ ಮಜ್ಜಿಗೆ ನೀರು ಪಡೆಯಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ