ಕನ್ನಡಪ್ರಭ ವಾರ್ತೆ ಬೆಂಗಳೂರು
ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಉಸ್ತುವಾರಿ ಶ್ರೀ ಗೋಪಾಲ ಜಿ ಅವರು ಜಗದ್ಗುರು ರೇಣುಕಾಚಾರ್ಯರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಹರಿಹರರ ಸಮನ್ವಯ, ಶಿವ ಮತ್ತು ಶ್ರೀರಾಮರ ಪರಸ್ಪರ ಗೌರವವನ್ನು ಕುರಿತು ಮಾತನಾಡಿದ ಅವರು, ಶ್ರೀ ಜಗದ್ಗುರು ರೇಣುಕರು ಬೋಧಿಸಿದ ಪರರ ಹಿತವೇ ನಿಜವಾದ ಧರ್ಮವೆಂಬ ವಿಷಯವನ್ನು ಕುರಿತು ಸಭಿಕರಿಗೆ ಮನಮುಟ್ಟುವಂತೆ ತಿಳಿಸಿದರು.
ಆಯೋಧ್ಯಾ ಕ್ಷೇತ್ರದ ಇತಿಹಾಸ ಮತ್ತು ಮಹತ್ಮವನ್ನು ವಿವರಿಸಿ ಶ್ರೀರಾಮ ಮಂದಿರದ ಸಂಪೂರ್ಣಕಾರ್ಯ ಇನ್ನೆರಡು ವರ್ಷಗಳಲ್ಲಿ ಮುಗಿಯುತ್ತದೆ ಎಂದು ತಿಳಿಸಿದರು.ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಶ್ರೀ ಬಸವಜಯಚಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಬೆಂಗಳೂರಿನಿಂದ ಬಂದ ನೂರಾರು ಯಾತ್ರಿಗಳು ಮತ್ತು ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಯಾತ್ರಾರ್ಥಿಗಳು ಭಾಗವಸಿದ್ದರು.