ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ ಅಂಗವಾಗಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಪ್ರತಿ ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನ ತಿಳಿಸಿ. ವಚನಗಳ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿ ರೂಡಿಸಬೇಕು ಎಂದರು.
ಬಸವಣ್ಣನವರ ಆಧ್ಯಾತ್ಮಿಕ, ತತ್ವ, ಆದರ್ಶಗಳನ್ನು ಕೇವಲ ತರಗತಿಗಳಲ್ಲಿ ಆಯ್ಕೆ ಮಾಡಿರುವ ಪಾಠಗಳಲ್ಲಿ ಅಥವಾ ಒಂದೆರಡು ಪುಟಗಳಲ್ಲಿ ತಿಳಿಯಲು ಸಾಧ್ಯವಿಲ್ಲ. ಅವರೊಬ್ಬ ಜ್ಞಾನ ಭಂಡಾರ ವಿದ್ದಂತೆ. ಅವರ ಬಗ್ಗೆ ತಿಳಿಸುವ ಎಲ್ಲಾ ಪುಸ್ತಕಗಳನ್ನು ಅರಿಯಬೇಕು ಎಂದರು.ಈಗಿನ ಕಾಲದಲ್ಲಿ ಸಮಾಜವನ್ನು ಎದುರು ಹಾಕಿಕೊಂಡು ಬದುಕುವುದು ಸುಲಭ. ಆದರೆ, ಬಸವಣ್ಣನವರು ಅಂದಿನ ಕಾಲದಲ್ಲೇ ಜಾತಿ ಪದ್ಧತಿ ವಿರೋಧಿಸಿ ಸಮಾಜವನ್ನು ಎದುರಿಸಿ ಜಾತಿ ಪದ್ಧತಿ ಹೋಗಲಾಡಿಸಲು ಪ್ರತಿಯೊಬ್ಬರಿಗೂ ವಚನಗಳ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದರು ಎಂದರು.
ಸಾಂಸ್ಕೃತಿಕ ಹರಿಕಾರ ಬಸವಣ್ಣನವರ ವಚನಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಅವರು ನೀಡಿದ ವಚನಗಳ ಪುಸ್ತಕಗಳನ್ನು ಜಗತ್ತಿನಾದ್ಯಂತ ನೋಡಬಹುದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಂತ ಶಿಶುನಾಳ ಷರೀಫ್ ರ ಶಿಷ್ಯ ಆಗಿದ್ದು ತನ್ನ ಗುರುಗಳ ಕೈಯಲ್ಲಿ ಹೋಗಳಿಸಿ ಕೊಂಡಂತಹ ಶಿಷ್ಯೆ ಹೇಮರೆಡ್ಡಿ ಮಲ್ಲಮ್ಮ ವಿವಾಹಿತ ಜೀವನವನ್ನು ಹೊಂದಿದ್ದರೂ ಕೂಡ ಯಾವುದಕ್ಕೂ ಹಿಂಜರಿಯದೇ ಆಧ್ಯಾತ್ಮಿಕ ಜೀವನದ ಕಡೆ ಹೆಚ್ಚಾಗಿ ಒಲವು ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಹಾಗೂ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.