ಜಿಲ್ಲೆಯಲ್ಲೇ ಜಗಳೂರಲ್ಲಿ ಹೆಚ್ಚು ಯೂರಿಯಾ ಬಿಕರಿ: ಶ್ವೇತಾ

KannadaprabhaNewsNetwork |  
Published : Aug 12, 2025, 12:30 AM IST
11ಜೆ.ಎಲ್.ಆರ್. 1: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಡಳಿತಾಧಿಕಾರಿ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಿ. ಕೊಟ್ರೇಶ್ ಮತ್ತು ತಾಪಂ ಇಒ ಕೆಂಚಪ್ಪ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ತಾಲೂಕಿನಲ್ಲಿ ಈಗಾಗಲೇ ಎಲ್ಲ ಗೊಬ್ಬರ ಮಾರಾಟ ಅಂಗಡಿ ಮತ್ತು ಎಫ್ಪಿಒ, ವಿಎಸ್ಎನ್‌ಗಳಲ್ಲಿ 5842 ಟನ್ ಯೂರಿಯಾ ಮಾರಾಟವಾಗಿದೆ. ಒಟ್ಟು ಮುಂಗಾರು ಬೇಡಿಕೆ 5562 ಟನ್‌ಗಳಿದ್ದು ಪ್ರಸ್ತುತ ವರ್ಷ 342 ಟನ್ ಹೆಚ್ಚು ಮಾರಾಟವಾಗಿವೆ ಎಂದು ಕೃಷಿ ಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ ಹೇಳಿದರು.

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ಈಗಾಗಲೇ ಎಲ್ಲ ಗೊಬ್ಬರ ಮಾರಾಟ ಅಂಗಡಿ ಮತ್ತು ಎಫ್ಪಿಒ, ವಿಎಸ್ಎನ್‌ಗಳಲ್ಲಿ 5842 ಟನ್ ಯೂರಿಯಾ ಮಾರಾಟವಾಗಿದೆ. ಒಟ್ಟು ಮುಂಗಾರು ಬೇಡಿಕೆ 5562 ಟನ್‌ಗಳಿದ್ದು ಪ್ರಸ್ತುತ ವರ್ಷ 342 ಟನ್ ಹೆಚ್ಚು ಮಾರಾಟವಾಗಿವೆ ಎಂದು ಕೃಷಿ ಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಡಳಿತಾಧಿಕಾರಿ ಮತ್ತು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ್ ಮತ್ತು ತಾಪಂ ಇಒ ಕೆಂಚಪ್ಪ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.

ಇರುವರೆಗೂ 11086.55 ಟನ್ ಡಿಎಪಿ, ಎಂಒಪಿ, ಎಸ್ಎಸ್ಪಿ ವಿವಿಧ ಸಂಯುಕ್ತ ಗೊಬ್ಬಗಳು ಮಾರಾಟವಾಗಿವೆ. ಸಭೆಯಲ್ಲಿ ಯೂರಿಯಾ ಗೊಬ್ಬರದ ಪೂರೈಕೆ ಮತ್ತು ಬಳಕೆ ಬಗ್ಗೆ ಗಂಭೀರ ಚರ್ಚೆ ನಡೆಯಿತು. ದಾವಣಗೆರೆ ಜಿಲ್ಲೆಯಲ್ಲಿಯೇ ಹೆಚ್ಚು ಯೂರಿಯಾ ಬಳಿಸಿದ ತಾಲೂಕು ಜಗಳೂರು ಆಗಿದೆ ಎಂದರು.

ಆಗ ಆಡಳಿತಾಧಿಕಾರಿ ಕೊಟ್ರೇಶ್ ರೈತರಿಗೆ ಬೇಕಾಗುವ ಗೊಬ್ಬರ ಪೂರೈಕೆ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪೂರೈಸಲು ಸೂಚಿಸಿದರು.

ಅರಣ್ಯ ಇಲಾಖೆ ವರದಿ ಮಂಡಿಸುವಾಗ ರಂಗಯ್ಯನ ದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿ ದಾಳಿಗೆ ರೈತರ ಜಮೀನುಗಳಲ್ಲಿ ಬೆಳೆದ ಮೆಕ್ಕೆಜೋಳ, ಶೇಂಗಾ ಬೆಳೆಗಳನ್ನು ಹಾಳು ಮಾಡಿದ ರೈತರಿಗೆ ಹಾನಿಯಾದ ಬೆಳೆ ದ್ರೂಢೀಕರಿಸಿ ಹಾನಿಗೆ ತಕ್ಕಂತೆ ಪರಿಹಾರ ನೀಡುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದಾಗ ಎಕರೆಗೆ ಎಷ್ಟು ನಿಗದಿ ಮಾಡಿದ್ದೀರಿ. ಸಾಕಷ್ಟು ಹಂದಿಗಳು ನಷ್ಟ ಮಾಡಿದ್ದು ಮಾನದಂಡಳು ರೈತರ ನಷ್ಟಕ್ಕೆ ಪೂರಕವಾಗಿವೆಯೇ ಎಂದು ಆಡಳಿತಾಧಿಕಾರಿ ಪ್ರಶ್ನಿಸಿದರು.

ವಲಯ ಅರಣ್ಯಾಧಿಕಾರಿ ನಿತಿನ್ ಬಲ್ಲವರ್, ರೈತರ ಹೊಲದಲ್ಲಿ ಹಂದಿಗಳು ಹಾಳು ಮಾಡಿದ ಬೆಳೆ ದ್ರೂಢೀಕರಣ, ಫೋಟೋ ಮತ್ತು ವಿಎಗಳಿಂದ ವರದಿ ತಂದು ರೈತರು ಅರ್ಜಿ ಹಾಕಿದರೆ ಪರಿಶೀಲಿಸಿ ರೈತರಿಗೆ ಇಲಾಖೆಯಿಂದ ನಿಗದಿಪಡಿಸಿದ ಪರಿಹಾರ ನೀಡಲು ಶಿಫಾರಸು ಮಾಡುತ್ತೇವೆ ಎಂದರು.

ಆಗ ಆರ್‌ಎಫ್ಒ ನಿತಿನ್ ಬಲ್ಲವರ್, ಅದು ಇಲಾಖಾ ಮಟ್ಟದಲ್ಲಿ ಮಾನದಂಡಗಳಂತೆ ನಡೆಯುತ್ತದೆ. ಇದರಿಂದ ಕುರಿಗಾಯಿಗಳಿಗೆ ತೊಂದರೆ ಜೊತೆಗೆ ಕಾಡಂಚಿನ ಜನರಿಗೂ ಕಠಿಣ ನಿಯಮಗಳು ಹೇರುವುದರಿಂದ ಸಂಘರ್ಷಗಳು ಹೆಚ್ಚಾಗುತ್ತವೆ'''''''' ಎಂದರು. ಆಗ ಕೆಲವರು ಕರಡಿಗಳಿಗಾಗಿ ಹಲಸು ಸೇರಿದಂತೆ ಹಣ್ಣುಗಳ ಗಿಡಗಳನ್ನು ಅಣಬೂರು ಅರಣ್ಯ ವ್ಯಾಪ್ತಿಯಲ್ಲಿ ನೆಟ್ಟು ಪೋಷಿಸಿ ನೀರಿನ ವ್ಯವಸ್ಥೆ ಮಾಡಿದರೆ ಆಹಾರ ಹುಡುಕಿಕೊಂಡು ರೈತರ ಜಮೀನುಗಳಿಗೆ ಕರಡಿಗಳು ಬರುವುದು ಕಡಿಮೆಯಾಗಿ ಮಾನವ ಜೊತೆ ಸಂಘರ್ಷಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು. ಅದಕ್ಕೆ ಆರ್ಎಫ್ಒ ನಿತಿನ್ ಪ್ರಯತ್ನಿಸುವುದಾಗಿ ಹೇಳಿದರು.

ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಕೆ, ರೇಷ್ಮೆ, ಸಹಕಾರ, ಗ್ರಾಮೀಣ ಕುಡಿಯುವ ನೀರು, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಮ್ಮ ಇಲಾಖೆ ವರದಿ ಮಂಡಿಸಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು