ಜಗಳೂರು ಪಟ್ಟಣ ಪಂಚಾಯಿತಿ ₹3.35 ಲಕ್ಷ ಉಳಿತಾಯ ಬಜೆಟ್

KannadaprabhaNewsNetwork |  
Published : Mar 30, 2025, 03:04 AM IST
 29 ಜೆ.ಜಿಎ.ಲ್ .1) ಜಗಳೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶನಿವಾರ 2025-26 ನೇ ಸಾಲಿನ ಬಜೆಟ್ ಅನ್ನು ಪ.ಪಂ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ ಅವರು ಮಂಡಿಸಿದರು. | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶನಿವಾರ 2025-26 ನೇ ಸಾಲಿನ ಬಜೆಟ್ ಅನ್ನು ಪ.ಪಂ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ 3,35,667 ರು. ಉಳಿತಾಯ ಬಜೆಟ್ ಮಂಡಿಸಿದರು.

ಪ.ಪಂ ಅಧ್ಯಕ್ಷ ನವೀನ್ ಕುಮಾರ್ ಮಂಡನೆ

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶನಿವಾರ 2025-26 ನೇ ಸಾಲಿನ ಬಜೆಟ್ ಅನ್ನು ಪ.ಪಂ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ 3,35,667 ರು. ಉಳಿತಾಯ ಬಜೆಟ್ ಮಂಡಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬಜೆಟ್ ಮಂಡಿಸಿ ಮಾತನಾಡಿ, ಆದಾಯ ನಿರೀಕ್ಷೆ ಮತ್ತು 19,73,17,795 ರು. ವೆಚ್ಚಗಳ ಅಂದಾಜು ಮೊತ್ತದೊಂದಿಗೆ 3,35,667 ರು. ಉಳಿತಾಯ ಬಜೆಟ್ ಮಂಡಿಸಲಾಗಿದೆ. ಸರ್ಕಾರಿ ನಿಯಮದಂತೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ನಿಧಿಯಡಿ ಲಭ್ಯವಾಗುವ ಅನುದಾನ 65,27,105 ರು.ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ ಶೇ.24.10ರ ಯೋಜನೆಯಡಿ 1,573,032 ರು.ಇತರೆ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಶೇ.7.25ರ ಯೋಜನೆಯಡಿ 473,215 ರು. ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಶೇ.5ರ ಯೋಜನೆಯಡಿ 326,355 ರು., ಕ್ರೀಡಾ ಯೋಜನೆಗಾಗಿ ಶೇ.1ರ ಯೋಜನೆಯಡಿ 65,271 ರು.,ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಕ್ಕೆ ಶೇ.1ರಷ್ಟು 65,271 ರು. ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳ ಗೈರು ಸದಸ್ಯರು ಗರಂ: ಪಟ್ಟಣ ಪಂಚಾಯಿತಿ ಆರೋಗ್ಯನಿರೀಕ್ಷಕ ಪ್ರಶಾಂತ್, ಇಂಜಿನಿಯರ್ ಶೃತಿ, ಯೋಜನಾಧಿಕಾರಿ ಕೃಷ್ಣ ನಾಯ್ಕ, ಸೇರಿದಂತೆ ವಿವಿಧ ಸೆಕ್ಷೆನ್ ಅಧಿಕಾರಿಗಳ ಗೈರು ಕಂಡು ಬಜೆಟ್ ಪೂರ್ವಭಾವಿ ಸಭೆ ಸೇರಿದಂತೆ ಆಯಾವ್ಯಯ ಮಂಡನೆ ಸಭೆಗೂ ಸತತ ಗೈರಾಗುವ ಅಧಿಕಾರಿಗಳಿಗೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅಭಿವೃದ್ದಿ ಕಾಮಗಾರಿಗಳ ಮಾಹಿತಿ ಹೇಗೆ ನೀಡಬೇಕು ಎಂದು ಕಿಡಿಕಾರಿದರು.

ಪ.ಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ ,ಎರಡೂ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಮಾಡಬೇಕು. ವಿವಿಧ ವಾರ್ಡ್ ಗಳಲ್ಲಿ ನಾಮಫಲಕ ಅಳವಡಿಸಬೇಕು. ನಾನು ವೈಯಕ್ತಿಕವಾಗಿ ನಾಮಫಲಕ ಹಾಕಿಸಿರುವೆ ಎಂದರು. ಮಾಜಿ ಅಧ್ಯಕ್ಚ ಸಿದ್ದಪ್ಪ ಧ್ವನಿಗೂಡಿಸಿದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ.ಪಂ ಉಪಾಧ್ಯಕ್ಷೆ ಲೋಕಮ್ಮ ಓಬಳೇಶ್ ,ಸದಸ್ಯರಾದ ಶಕೀಲ್ ಅಹಮ್ಮದ್,ಮಹಮ್ಮದ್ ಅಲಿ, ಮಂಜುನಾಥ್,ಆದರ್ಶ ರೆಡ್ಡಿ, ನಾಮನಿರ್ದೇಶಿತ ಸದಸ್ಯರಾದ ತಾನಾಜಿ ಗೋಸಾಯಿ, ಶಾಂತಕುಮಾರ, ಇತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ