ಜಗಳೂರು ಆಸ್ಪತ್ರೆ ಶಿಥಿಲಾವಸ್ಥೆ; ತೆರವಿಗೆ ಸೂಚನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

KannadaprabhaNewsNetwork |  
Published : Jul 12, 2024, 01:39 AM IST
11 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ದಿಢೀರ್ ನೇ ಬೇಟಿ ನೀಡಿ ಆಸ್ಪತ್ರೆಯ ಕಟ್ಟಡ, ಹಾಗೂ ರೋಗಿಗಳ ಯೋಗಕ್ಷೇಮ ವಿಚಾರಿಸಿದ ನಂತರ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಕಟ್ಟಡ, ಹಾಗೂ ರೋಗಿಗಳ ಯೋಗಕ್ಷೇಮ ವಿಚಾರಿಸಿದ ನಂತರ ಅಧಿಕಾರಿಗಳ ಸಭೆ ನಡೆಸಿದರು.

ಕನ್ನಡ ಪ್ರಭವಾರ್ತೆ ಜಗಳೂರು

ಜಗಳೂರು ಸಾರ್ವಜನಿಕ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದು ಕೆಡವಲು ಸೂಚಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಂಜೆ ದಿಢೀರ್‌ ಭೇಟಿ ನೀಡಿ ಆಸ್ಪತ್ರೆ ಕಟ್ಟಡ, ಹಾಗೂ ರೋಗಿಗಳ ಯೋಗಕ್ಷೇಮ ವಿಚಾರಿಸಿ ನಂತರ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ 6 ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 30 ಉಪ ಕೇಂದ್ರಗಳ ಮಾಡಲು ಸೂಚಿಸಲಾಗಿದೆ. ಒಂದು ಉಪಕೇಂದ್ರಕ್ಕೆ ₹65 ಲಕ್ಷ ತೆಗೆದಿರಿಸಲಾಗಿದೆ. ತಾಲೂಕು ವೈಧ್ಯಾಧಿಕಾರಿ ಕಚೇರಿ ಸ್ಥಳಾಂತರಿಸಬೇಕಿದೆ. ಕಚೇರಿ ರಿಪೇರಿಗೆ ₹65 ಲಕ್ಷ ಟೆಂಡರ್ ಮಾಡಿ ಕೆಲಸ ನಿರ್ವಹಿಸಲು ತಿಳಿಸಿದ್ದೇನೆ. ತಕ್ಷಣವೇ ಇಲ್ಲಿನ ಶಾಸಕರು ಜಾಗ ಗುರುತಿಸಿ ಕೊಟ್ಟರೇ ಹೊಸ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಂ.ಆರ್.ಐ.ಸ್ಕ್ಯಾನ್ 2 ತಿಂಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ₹65 ಲಕ್ಷ ವೆಚ್ಚದಲ್ಲಿ ಪ್ರಯೋಗಾಲಯವಿದ್ದು ಇದುವರೆಗೆ ಉದ್ಘಾಟನೆಯಾಗಿಲ್ಲ. ಇದರಿಂದ ರೋಗಿಗಳು ಖಾಸಗಿಯಾಗಿ ತೋರಿಸುವಂತಾಗಿದೆ ಇದಕ್ಕೆ ಕಾರಣ ಏನು ಸರ್ ಎಂದು ಸಚಿವರಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಥಳದಲ್ಲೇ ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿ ಶೀಘ್ರದಲ್ಲೇ ಚಾಲನೆ ನೀಡಿ ವರದಿ ನೀಡುವಂತೆ ಸೂಚಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಮ್ಮ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿಯಾದರೂ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆದ ಆರೋಗ್ಯ ಸಚಿವರು ಕಾರ್ಯವೈಕರಿಗೆ ಪ್ರಶಂಸಿದರಲ್ಲದೇ ಇಲ್ಲಿ ಬೇಕಾದ ವೈದ್ಯರ ಕೊರತೆ ಸೇರಿ ಆಸ್ಪತ್ರೆ ನಿರ್ಮಾಣಕ್ಕೆಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಈ ವೇಳೆ ಆರೋಗ್ಯಇಲಾಖೆ ಕಮಿಷನರ್ ರಣದೀಪ್, ಎನ್ಎಚ್‌ಎಂ, ಎಂಡಿ ನವೀನ್ ಭಟ್, ದಾವಣಗೆರೆ ಜಿಲ್ಲಾವೈದ್ಯಾಧಿಕಾರಿ ಶಣ್ಮುಖಪ್ಪ, ತಾಲೂಕು ವೈದ್ಯಾಧಿಕಾರಿ ಷಣ್ಮುಖಪ್ಪ, ತಹಸೀಲ್ದಾರ್ ಸೈಯಿದ್ ಕಲೀಂವುಲ್ಲಾ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಶಂಶಿರ್ ಅಹಮ್ಮದ್, ಅರಸಿಕೆರೆ ಮಂಜಣ್ಣ, ಪಿ.ಸುರೇಶ್ ಗೌಡ, ಪಲ್ಲಾಗಟ್ಟೆ ಶೇಖರಪ್ಪ ವೈ.ಎನ್ಮಂಜುನಾಥ್ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ