ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಟಿಪ್ಪು ಸುಲ್ತಾನ ಉದ್ಯಾನನದಲ್ಲಿ ಸೇರಿದ ಪಕ್ಷದ ಮುಖಂಡರು ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಸಿಇಸಿ ಹಾಗೂ ಎಸ್‌ಐಆರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಗರಿಕರ ಮತದಾನದ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಗಳ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳು ಅಳಿಸಲ್ಪಡುವ ಆತಂಕ, ಹೆಸರುಗಳನ್ನು ಮರುಸೇರ್ಪಡೆಗೊಳಿಸುವ ಪ್ರಕ್ರಿಯೆ ಯಲ್ಲಿನ ತೊಂದರೆಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಅಜೀಜ್ ಜಾಗೀರದಾರ್, ನಾಗರಾಜ್ ಪೂಜಾರ್, ಜಿಲಾನಿ ಯರಗೇರಾ, ಆರ್ಎಚ್ ಕಲ್ಮಗಿ, ಬಸವರಾಜ್ ಬೆಳಮುಗಿ, ಭೀಮಯ್ಯ, ಜಗದೀಶ್, ಹನೀಫ್ ಅಬಕಾರಿ, ಖಾದರ್, ವೀರೇಶ್, ಜೋಳಯ್ಯ, ನರಸಪ್ಪ, ಈರಣ್ಣ, ಎಲ್ಲಪ್ಪ, ಮಹೇಂದ್ರ, ಹನುಮಂತ ಸೇರಿದಂತೆ ಇತರರು ಇದ್ದರು.
ಬಾಕ್ಸ್:
ದೆಹಲಿಯಲ್ಲಿ ಪ್ರತಿಭಟನಾ ನಿರತರ ಬಂಧನ ಖಂಡಿಸಿ, ಸಿಇಸಿ ರಾಜೀನಾಮೆ ಹಾಗೂ ಎಸ್ಐಆರ್ ರದ್ದತಿಗೆ ಒತ್ತಾಯಿಸಿ ರಾಯಚೂರು ನಗರ ಮತ್ತು ಮಾನ್ವಿ ಪಟ್ಟಣದಲ್ಲಿ ಮಶಾಲ್ ರ್‍ಯಾಲಿಯನ್ನು ನಡೆಸಲಾಯಿತು. ಎಸ್ಐಆರ್ ವಿರೋಧಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಇದ್ದರು.
ಬಾಕ್ಸ್....
ಮೇಲಿನ ದಾಳಿಗೆ ಖಂಡನೆ
ಸೋಮವಾರ ಹೇಳಿಕೆ ನೀಡಿರುವ ಅವರು, ಮೋದಿ ಸರ್ಕಾರಕ್ಕೆ ಭಯ ಶುರುವಾಗಿದೆ. ಎಸ್ಐಆರ್ ರದ್ದುಗೊಳಿಸುವಂತೆ ನಡೆದಿರುವ ಹೋರಾಟವನ್ನು ಹತ್ತಿಕ್ಕುವುದ ರೊಂದಿಗೆ ಪ್ರಜಾತಂತ್ರವನ್ನು ಹತ್ಯೆಗೊಳಿಸಲಾಗುತ್ತಿದೆ. ಬಿಜೆಪಿಯ ಸರ್ವಾಧಿಕಾರದ ಈ ಧೋರಣೆಯನ್ನು ದೇಶದ ಎಲ್ಲ ನಾಗರಿಕರು ಖಂಡಿಸಿ ಹೋರಾಡಬೇಕಾ ಗಿದೆ. ದೆಹಲಿ, ಮಧ್ಯಪ್ರದೇಶ, ಜಾನ್ಸಿ ಇತರೆ ಸ್ಥಳಗಳಲ್ಲಿ ರೈಲು, ವಿಮಾನಗಳಿಗೆ ನುಗ್ಗಿ ವಿದ್ಯಾರ್ಥಿ- ಯುವಜನರನ್ನು ಬಂಧಿಸಲಾಗಿದೆ. ಮೋದಿ ಸರ್ಕಾರದ ಹಿಟ್ಲರ್ ಶಾಯಿ ಸರ್ವಾಧಿಕಾರಿ ಕೃತ್ಯಗಳನ್ನು ದೇಶದ ಜನರು ಸಹಿಸಲಾರರು. ತಕ್ಕ ಪಾಠ ಕಲಿಸಲಿದ್ದಾರೆ ಎಂದು ದೂರಿದ್ದಾರೆ. ದುರುದ್ದೇಶ ಪೂರಿತ, ವ್ಯವಸ್ಥಿತ, ವಂಚನೆ ಯಿಂದ ನಡೆದ ಎಸ್ಐಆರ್ ರದ್ದುಗೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ಉಲ್ಲಂಘಿಸಿ, ಆಯೋಗದ ಸದಸ್ಯರನ್ನು ಕತ್ತಲಲಿಟ್ಟು ಏಕಾಧಿಪತಿ ಯಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿದ ಗ್ಯಾನೇಶ ಕುಮಾರ್ ಅವರನ್ನು ಸೇವೆಯಿಂದ ಕಿತ್ತೆಸೆದು ಬಂಧಿಸಬೇಕು. ಚುನಾವಣೆಯ ಪ್ರಕ್ರಿಯೆಯಲ್ಲಿ ನಡೆದ ಮೋಸ, ವಂಚನೆ, ಪಿತೂರಿಗಳ ಕುರಿತು ಸಮಗ್ರ ತನಿಖೆಯಾಗಬೇಕು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
12ಕೆಪಿಆರ್ಸಿಆರ್ 01: ರಾಯಚೂರಿನಲ್ಲಿ ಸಿಇಸಿ ರಾಜೀನಾಮೆ ಹಾಗೂ ಎಸ್ಐಆರ್ ರದ್ದತಿಗೆ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ಜೈಲ್ ಭರೋ ಹೋರಾಟವನ್ನು ನಡೆಸಲಾಯಿತು.
12ಕೆಪಿಎಸ್ಎನ್ಡಿ3: ಡಿ.ಎಚ್.ಪೂಜಾರ್