ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಹೊರವಲಯದಲ್ಲಿ ಮುಖ್ಯಮಂತ್ರಿಗಳು ಮೂಲಸೌಕರ್ಯ ಯೋಜನೆಯಡಿ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜೈನ ಸಮುದಾಯ ಭವನ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜೈನ ಸಮುದಾಯದ ಬಂಧುಗಳು ನೀಡಿದ ಮನವಿಯನ್ನು ನಾನು ಮುಖ್ಯಮಂತ್ರಿಗಳಿಗೆ ನೀಡಿ ಮನವಿ ಮಾಡಿದ್ದೇನೆ. ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈಗಾಗಲೇ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಕೂಡ ಸಹಿ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಿಗೆ ಕಳುಹಿಸಿದ್ದಾರೆ. ಸಚಿವ ಯು.ಟಿ.ಖಾದರ ಜೊತೆಗೆ ನಾನು ಮಾತನಾಡಿದ್ದೇನೆ. ಬರುವ ಬೆಳಗಾವಿ ಅಧಿವೇಶನದಲ್ಲಿ ಜೈನ ಸಮುದಾಯದ ಪ್ರತ್ಯೇಕ ನಿಗಮ ಸ್ಥಾಪನೆ ಆಗುವ ಮೂಲಕ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಿ:
ವಿವಿಧ ಸಮುದಾಯದ ಬಡ ಮಕ್ಕಳ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧರಾಗಲು ಅಥಣಿ ಪಟ್ಟಣದಲ್ಲಿ ಹೈಟೆಕ್ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು. ಗ್ರಂಥಾಲಯದ ಮೇಲ್ಭಾಗದಲ್ಲಿ ಉನ್ನತ ಅಧಿಕಾರಿಗಳಾಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸುವ ಸಂಕಲ್ಪ ಹೊಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರು ಸಚಿವ ಲಕ್ಷ್ಮಣ ಸವದಿಯವರನ್ನು ಸನ್ಮಾನಿಸಿದರು. ಈ ವೇಳೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುತ್ತಣ್ಣ ಕಾತ್ರಾಳ, ಅಶೋಕ ಪಡನಾಡ, ಡಾ.ಪದ್ಮಜೀತ ನಾಡಗೌಡ, ರಾಜೇಂದ್ರ ಪಾಟೀಲ, ಆರ್.ಡಿ.ಪಾಟೀಲ, ಕಲ್ಲಪ್ಪ ವನಜೋಳ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ, ಸಿಎ ಸಂತೋಷ ಲಟ್ಟೆ, ಶ್ವೇತಾಂಬರ ಜೈನ ಸಮಾಜದ ಮುಖಂಡರಾದ ರಾಜು ರಾಠೋಡ, ಅಶೋಕ ಜೈನ, ಅಭಯ ಕೊಪ್ಪ, ಡಾ.ಸತೀಶ ಮುಗ್ಗನವರ, ರಾಜೇಂದ್ರ ಮಧುಬಾವಿ, ರವಿ ಶಿರಗುಪ್ಪಿ, ನಿಂಗಣ್ಣ ಹಳಕಿ, ಪುಷ್ಪಕ ಕಿರಣಪಾಟೀಲ, ರಾವಸಾಬ್ ನಂದಿಗೋಣ, ಶೀತಲ ಪಾಟೀಲ ಜುಂಜರವಾಡ, ಸಂಜೀವ ಮದಬಾವಿ, ಪರಗುಂಡ ಶಿರಗುಪ್ಪಿ, ಜಯರಾಜ ಜಕನೂರ ಗುತ್ತಿಗೆದಾರ ರಾಜು ಆಲಬಾಳ, ಅಭಿಯಂತರ ವೀರಣ್ಣ ವಾಲಿ, ಶಾಖಾಧಿಕಾರಿ ಅರವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೋಟ್..
-ಲಕ್ಷ್ಮಣ ಸವದಿ, ಸಹಕಾರ ಸಚಿವರು.