ಅರಣ್ಯ ಇಲಾಖೆ ಎಸ್ಕಾರ್ಟ್ ನಡುವೆ ಜೈನ ಮುನಿಗಳ ಪ್ರಯಾಣ

KannadaprabhaNewsNetwork |  
Published : May 03, 2026, 01:45 AM IST
2ಎಚ್ಎಸ್ಎನ್8 : ಚೀಕನಹಳ್ಳಿಯಿಂದ ಕೊಗೋಡು – ನೆರಲಕಟ್ಟೆ – ಅನುಘಟ್ಟ – ಕಿತ್ತಾವರ ಮಾರ್ಗವಾಗಿ ಅರೇಹಳ್ಳಿ ಹಾಗೂ ವಾಟೆಹಳ್ಳಿ ಕಡೆಗೆ ಜೈನ ಮುನಿಗಳು ಪಾದಯಾತ್ರೆ ಕೈಗೊಂಡಿದ್ದು  ಅರಣ್ಯ ಇಲಾಖೆಯಿಂದ ವಿಶೇಷ ಎಸ್ಕಾರ್ಟ್ ನೀಡಲಾಗಿತ್ತು. | Kannada Prabha

ಸಾರಾಂಶ

ಚೀಕನಹಳ್ಳಿಯಿಂದ ಕೊಗೋಡು – ನೆರಲಕಟ್ಟೆ – ಅನುಘಟ್ಟ – ಕಿತ್ತಾವರ ಮಾರ್ಗವಾಗಿ ಅರೇಹಳ್ಳಿ ಹಾಗೂ ವಾಟೆಹಳ್ಳಿ ಕಡೆಗೆ ಜೈನ ಮುನಿಗಳು ಪಾದಯಾತ್ರೆ ಕೈಗೊಂಡಿದ್ದರು. ಉಪ ವಲಯ ಅರಣ್ಯಾಧಿಕಾರಿ ಯತೀಶ್ ಅವರ ನೇತೃತ್ವದಲ್ಲಿ ಈಟಿಎಫ್ (ಎಲಿಫೆಂಟ್ ಟಾಸ್ಕ್‌ಫೋರ್ಸ್‌) ಸಿಬ್ಬಂದಿ ಪಾದಯಾತ್ರೆ ಸಂಪೂರ್ಣ ಅವಧಿಯಲ್ಲೂ ಮುನಿಗಳೊಂದಿಗೆ ತೆರಳಿ, ಮಾರ್ಗದಲ್ಲಿನ ಪ್ರದೇಶಗಳಲ್ಲಿ ಕಾಡಾನೆ ಭೀತಿ ನಡುವೆಯೂ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರು ಚೀಕನಹಳ್ಳಿಯಿಂದ ಕೊಗೋಡು – ನೆರಲಕಟ್ಟೆ – ಅನುಘಟ್ಟ – ಕಿತ್ತಾವರ ಮಾರ್ಗವಾಗಿ ಅರೇಹಳ್ಳಿ ಹಾಗೂ ವಾಟೆಹಳ್ಳಿ ಕಡೆಗೆ ಜೈನ ಮುನಿಗಳು ಪಾದಯಾತ್ರೆ ಕೈಗೊಂಡಿದ್ದು ಅರಣ್ಯ ಇಲಾಖೆಯಿಂದ ವಿಶೇಷ ಎಸ್ಕಾರ್ಟ್ ನೀಡಲಾಗಿತ್ತು.

ಚೀಕನಹಳ್ಳಿಯಿಂದ ಕೊಗೋಡು – ನೆರಲಕಟ್ಟೆ – ಅನುಘಟ್ಟ – ಕಿತ್ತಾವರ ಮಾರ್ಗವಾಗಿ ಅರೇಹಳ್ಳಿ ಹಾಗೂ ವಾಟೆಹಳ್ಳಿ ಕಡೆಗೆ ಜೈನ ಮುನಿಗಳು ಪಾದಯಾತ್ರೆ ಕೈಗೊಂಡಿದ್ದರು. ಉಪ ವಲಯ ಅರಣ್ಯಾಧಿಕಾರಿ ಯತೀಶ್ ಅವರ ನೇತೃತ್ವದಲ್ಲಿ ಈಟಿಎಫ್ (ಎಲಿಫೆಂಟ್ ಟಾಸ್ಕ್‌ಫೋರ್ಸ್‌) ಸಿಬ್ಬಂದಿ ಪಾದಯಾತ್ರೆ ಸಂಪೂರ್ಣ ಅವಧಿಯಲ್ಲೂ ಮುನಿಗಳೊಂದಿಗೆ ತೆರಳಿ, ಮಾರ್ಗದಲ್ಲಿನ ಪ್ರದೇಶಗಳಲ್ಲಿ ಕಾಡಾನೆ ಭೀತಿ ನಡುವೆಯೂ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ಜೈನ ಮುನಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ, ಡಿಸಿಎಫ್ ಹಾಸನ ಹಾಗೂ ಬೇಲೂರು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಸಮಗ್ರ ಭದ್ರತಾ ಕ್ರಮಗಳನ್ನು ಕೈಗೊಂಡಿತು. ಅರೇಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಯತೀಶ್ ಅವರ ನೇತೃತ್ವದಲ್ಲಿ ಈಟಿಎಫ್ (ಎಲಿಫೆಂಟ್ ಟಾಸ್ಕ್‌ಫೋರ್ಸ್) ಸಿಬ್ಬಂದಿ ಪಾದಯಾತ್ರೆ ಸಂಪೂರ್ಣ ಅವಧಿಯಲ್ಲೂ ಮುನಿಗಳೊಂದಿಗೆ ತೆರಳಿ, ಮಾರ್ಗದಲ್ಲಿನ ಅರಣ್ಯ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿದರು.ಪಾದಯಾತ್ರೆಯ ಸಮಯದಲ್ಲಿ ಕಾಡಾನೆಗಳ ಚಲನವಲನ ಇರುವ ಸ್ಥಳಗಳನ್ನು ಮುಂಚಿತವಾಗಿ ಪರಿಶೀಲಿಸಿ, ಮುನಿಗಳು ಹಾಗೂ ಭಕ್ತರಿಗೆ ಯಾವುದೇ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು. ಸಿಬ್ಬಂದಿಗಳು ಜನರಿಗೆ ಜಾಗೃತಿ ಮೂಡಿಸಿ, ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿಸಿ, ಶಾಂತವಾಗಿ ಪಾದಯಾತ್ರೆ ಸಾಗುವಂತೆ ಸಹಕರಿಸಿದರು.ಜೈನ ಮುನಿಗಳೂ ಸಹ ಅರಣ್ಯ ಇಲಾಖೆಯ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ತಮ್ಮ ಪಾದಯಾತ್ರೆ ಸುಗಮವಾಗಿ ನಡೆಯಲು ನೆರವಾದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆ ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳಿ: ಸಿಎಂ
...ಚೇಳೂರಿಗೆ ಡಿಸಿ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ