ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಲಾಶಯದ ನೀರು 1 ಅಡಿ ಏರಿಕೆ
ಮಳೆ ಇಲ್ಲದೆ ಬರ ಕಾಡುತ್ತಿರುವುದು ಒಂದು ಕಡೆಯಾದರೆ, ಎರಡೂ ನಗರಗಳಿಗೆ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದರಿಂದಾಗಿ ಜಲಾಶಯದ ನೀರನ್ನ ಅವಲಂಬಿತ ಎರಡು ನಗರಗಳ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ವರುಣನ ಕೃಪೆಯಿಂದ ವಾರದಿಂದ ಸುರಿಯುತ್ತಿರುವ ಮಳೆಯಿಂದ 25 ಅಡಿಗೆ ಏರಿಕೆಯಾಗಿದ್ದು, ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಲ್ಲಿರುವ ತಲಾ 31 ವಾರ್ಡ್‌ಗಳಿಗೆ ಬಡಾವಣೆ ವಾರು ವಾರಕ್ಕೆ ಒಮ್ಮೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಂದಾಜು 90 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಚಿಕ್ಕಬಳ್ಳಾಪುರ ನಗರಕ್ಕೆ ಸುಮಾರು 9500 ಕೊಳಾಯಿ ಸಂಪರ್ಕಗಳು ಇವೆ. ಇಷ್ಟು ದೊಡ್ಡ ಪ್ರಮಾಣದ ಜನರಿಗೆ ನಿತ್ಯ 5 ಎಂಎಲ್‌ಡಿ ಪ್ರಮಾಣದಲ್ಲಿ ಜಕ್ಕಲ ಮಡುಗು ಜಲಾಶಯದ ನೀರನ್ನು ಪೂರೈಸಲಾಗುತ್ತಿದೆ.5- 6 ದಿನಕ್ಕೊಮ್ಮೆ ನೀರು
ಜಲಾಶಯದ ನೀರು ಪೂರೈಕೆ ಆಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ನಗರದ ವಾರ್ಡ್‌ಗಳಿಗೆ ಈಗ ಪೂರೈಸುತ್ತಿರುವಂತೆಯೇ ಮುಂದೆಯೂ ವಾರಕ್ಕೆ ಒಮ್ಮೆ ನೀರು ಪೂರೈಸಿದರೆ ಚಿಕ್ಕಬಳ್ಳಾಪುರಕ್ಕೆ ಸಂಗ್ರಹದಲ್ಲಿರುವ ನೀರನ್ನು ಕನಿಷ್ಠ 45 ದಿನಗಳು ಮತ್ತು ದೊಡ್ಡಬಳ್ಳಾಪುರಕ್ಕೆ30 ದಿನಗಳು ಬಳಸಬಹುದು ಎಂದು ಜಲಮಂಡಳಿಯು ನಗರಸಭೆಗಳಿಗೆ ತಿಳಿಸಿದೆ.
ಮಳೆಯಿಲ್ಲದೆ ಎರಡು ನಗರಗಳು ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ಇತ್ತು, ಈಗ ಬಂದಿರುವ ನೀರು ಮತ್ತು ಜಲಾಶಯದಲ್ಲಿರುವ ನೀರು ಚಿಕ್ಕಬಳ್ಳಾಪುರ ನಗರಕ್ಕೆ 45 ದಿನಗಳಿಗಾಗುವಷ್ಟು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ 30 ದಿನಗಳಿಗಾಗುವಷ್ಟು ಬಳಕೆಗೆ ಸಿಗುತ್ತಿರುವುದರಿಂದ ಕೊಂಚ ಸಮಾಧಾನ ತಂದಿದೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ್ ಹೇಳಿದ್ದಾರೆ.ಉತ್ತಮೆ ಮಳೆಯಾಗುವ ನಿರೀಕ್ಷೆ2022ರ ಆಗಸ್ಟ್‌ನಲ್ಲಿ ಜಕ್ಕಲಮೊಡಗು ಜಲಾಶಯ ನಾಲ್ಕು ಬಾರಿ ತುಂಬಿ ಕೋಡಿ ಹರಿದಿತ್ತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ, ಉತ್ತಮ ಮಳೆಯಾದಲ್ಲಿ ಮತ್ತಷ್ಟು ನೀರು ಜಲಾಶಯಕ್ಕೆ ಹರಿದು ಬರಲಿದೆ.ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ನಕಾಶೆಯಂತೆ ನಿರ್ಮಿಸಿದ್ದ ಈ ಜಲಾಶಯದ ಮಟ್ಟವನ್ನು 2007 ರಲ್ಲಿ ಸಮ್ಮಿಶ್ರ ಸರ್ಕಾರ 48.75 ಅಡಿ ಎತ್ತರಕ್ಕೆ ಏರಿಸಲು ಅನುಮೋದನೆ ನೀಡಿ ಕಾಮಗಾರಿ ಆರಂಭಿಸಿತ್ತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಪೂರ್ಣಗೊಂಡಿತು. ಜಕ್ಕಲಮಡುಗು ಜಲಾಶಯದ ನೀರನ್ನು ಚಿಕ್ಕಬಳ್ಳಾಪುರ ನಗರಕ್ಕೆ ಶೇ 65ರಷ್ಟು ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಶೇ 35ರಷ್ಟು ಬಳಸಿಕೊಳ್ಳಲಾಗುತ್ತಿದೆ.