ರಂಗಭೂಮಿಗೆ ಆಧುನಿಕ ವ್ಯಾಕರಣ ನೀಡಿದ ಜಂಬೆ, ಸ್ವಾಮಿ. : ಡಾ. ಶ್ರೀಪಾದ ಭಟ್

KannadaprabhaNewsNetwork |  
Published : Sep 23, 2026, 03:00 AM IST
ಉಡುಪಿಯಲ್ಲಿ ಚಿದಂಬರ ರಾವ್ ಜಂಬೆ ಮತ್ತು ಪಿ ಗಂಗಾಧರ ಸ್ವಾಮಿ ಸಂಸ್ಮರಣೆ ನಡೆಯಿತು | Kannada Prabha

ಸಾರಾಂಶ

ಬಿ. ವಿ. ಕಾರಂತರು ಭಾರತೀಯ ರಂಗಭೂಮಿಯ ಅಧಿಕೃತ ಪ್ರತಿನಿಧಿ ಎನಿಸಿದರೆ ಅವರ ಶಿಷ್ಯರಾದ ಚಿದಂಬರ ರಾವ್ ಜಂಬೆ ಮತ್ತು ಪಿ ಗಂಗಾಧರ ಸ್ವಾಮಿ ಅವರು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಶ್ರೇಷ್ಠ ಮಾದರಿಗಳಾಗಿ ಕನ್ನಡ ರಂಗಭೂಮಿ ಸಮೃದ್ಧಗೊಳಿಸಿದ್ದಾರೆ ಎಂದು ಹಿರಿಯ ರಂಗಕರ್ಮಿ ಡಾ. ಶ್ರೀಪಾದ ಭಟ್ ಹೇಳಿದರು.

ಉಡುಪಿ : ಬಿ. ವಿ. ಕಾರಂತರು ಭಾರತೀಯ ರಂಗಭೂಮಿಯ ಅಧಿಕೃತ ಪ್ರತಿನಿಧಿ ಎನಿಸಿದರೆ ಅವರ ಶಿಷ್ಯರಾದ ಚಿದಂಬರ ರಾವ್ ಜಂಬೆ ಮತ್ತು ಪಿ ಗಂಗಾಧರ ಸ್ವಾಮಿ ಅವರು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಶ್ರೇಷ್ಠ ಮಾದರಿಗಳಾಗಿ ಕನ್ನಡ ರಂಗಭೂಮಿ ಸಮೃದ್ಧಗೊಳಿಸಿದ್ದಾರೆ ಎಂದು ಹಿರಿಯ ರಂಗಕರ್ಮಿ ಡಾ. ಶ್ರೀಪಾದ ಭಟ್ ಹೇಳಿದರು.ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ರವೀಂದ್ರ ಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಇತ್ತೀಚಿಗೆ ಅಗಲಿದ ಹಿರಿಯ ರಂಗಕರ್ಮಿಗಳಾದ ಗಂಗಾಧರಸ್ವಾಮಿ ಮತ್ತು ಚಿದಂಬರ ರಾವ್ ಜಂಬೆ ಸಂಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಜಂಬೆ ರಂಗಶಾಲೆಯ ಪ್ರತಿನಿಧಿಯಾಗಿ ಗಂಗಾಧರ ಸ್ವಾಮಿ ಸಮಾಜರಂಗದ ಪ್ರತಿನಿಧಿಯಾಗಿ ಕಾಣಿಸಿಕೊಂಡರು. ಇವತ್ತಿನ ಕನ್ನಡ ರಂಗಭೂಮಿ ವ್ಯಾಕರಣ ಕಟ್ಟಿದ ಈ ಎರಡು ರಂಗಚೇತನಗಳು ಮರೆಯಲಾಗದ ಮಹಾತ್ಮರು ಎಂದರು.ನುಡಿನಮನ ಸಲ್ಲಿಸಿ ಮಾತನಾಡಿದ ರಂಗಕರ್ಮಿಗಳಾದ ಬಾಸುಮ ಕೊಡಗು, ಜೀವನರಾಮ್ ಸುಳ್ಯ, ಜಂಬೆಯವರ ಶಿಷ್ಯ ವಾಸುದೇವ ಗಂಗೇರ, ಪ್ರಾಧ್ಯಾಪಕಿ ಡಾ. ನಿಕೇತನ, ನಟ ಪ್ರದೀಪ್ ಚಂದ್ರ ಕುತ್ಪಾಡಿ ನುಡಿನಮನ ಸಲ್ಲಿಸಿದರು.ಧ್ಯಕ್ಷತೆಯನ್ನು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ರಂಗಭೂಮಿಯ ವಿವೇಕ ಪಾಂಗಣ್ಣಾಯ ಸ್ವಾಗತಿಸಿದರು. ಪೂರ್ಣಿಮಾ ಸುರೇಶ ವಂದಿಸಿದರು. ಸಂಯೋಜಕ ಜಿ.ಪಿ. ಪ್ರಭಾಕರ್ ತುಮರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತನ್ಯ ಮಹಿಳಾ ಬ್ಯಾಂಕ್‌; ಶೇ.6ರಷ್ಟು ಲಾಭಾಂಶ ವಿತರಣೆ
ಬರ ಘೋಷಣೆಗೆ ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ