ಜನೌಷಧಿ ಕೇಂದ್ರಗಳು ಬಡವರಿಗೆ ಸಹಕಾರಿ: ಸಂಗಣ್ಣ

KannadaprabhaNewsNetwork |  
Published : Oct 25, 2023, 01:15 AM IST
೨೪ಕೆಎನ್‌ಕೆ-೨                                      ನೂತನ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿದ ಸಂಸದ ಸಂಗಣ್ಣ ಕರಡಿ ಅವರನ್ನು ಕನಕಗಿರಿ ಪಟ್ಟಣದ ಜನತೆ ಸನ್ಮಾನಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕನಕಗಿರಿಬಡವರ ಆರೋಗ್ಯ ಸಮಸ್ಯೆಗೆ ಜನ ಔಷಧಿ ಕೇಂದ್ರಗಳು ಸಹಕಾರಿಯಾಗಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ಅವರು ಪಟ್ಟಣದಲ್ಲಿ ನೂತನ ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ದೇಶಾದ್ಯಂತಹ ಬಡವರ ಆರೋಗ್ಯ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕಡಿಮೆ ದರಕ್ಕೆ ಔಷಧಿ ವಿತರಿಸುವ ವಿನೂತನ ಯೋಜನೆ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಔಷಧಿ ಕೇಂದ್ರ ತೆರೆಯಲಾಗುತ್ತಿದೆ.ಈ ಕೇಂದ್ರಗಳು ಬಡವರಿಗೆ ನೆರವಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ಬಡವರ ಆರೋಗ್ಯ ಸಮಸ್ಯೆಗೆ ಜನ ಔಷಧಿ ಕೇಂದ್ರಗಳು ಸಹಕಾರಿಯಾಗಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ಪಟ್ಟಣದಲ್ಲಿ ನೂತನ ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ದೇಶಾದ್ಯಂತಹ ಬಡವರ ಆರೋಗ್ಯ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕಡಿಮೆ ದರಕ್ಕೆ ಔಷಧಿ ವಿತರಿಸುವ ವಿನೂತನ ಯೋಜನೆ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಔಷಧಿ ಕೇಂದ್ರ ತೆರೆಯಲಾಗುತ್ತಿದೆ.ಈ ಕೇಂದ್ರಗಳು ಬಡವರಿಗೆ ನೆರವಾಗಿವೆ ಎಂದರು.

೨೦೨೪ಕ್ಕೆ ಮೋದಿ ಹ್ಯಾಟ್ರಿಕ್ ಪ್ರಧಾನಿ

೨೦೨೪ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಹ್ಯಾಟ್ರಿಕ್ ಗೆಲುವು ಸಾಧಿಸುವುದರ ಮೂಲಕ ೩ನೇ ಬಾರಿಯೂ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಇಂದಿರಾಗಾಂಧಿ ಗರಿಬಿ ಹಟಾವೋ (ಉಳುವವನೆ ಭೂ ಒಡೆಯ) ಯೋಜನೆಯಿಂದಾಗಿ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಅದರಂತೆ ಕೊರೋನಾ, ತೀವ್ರ ಬರಗಾಲವನ್ನು ಸಮರ್ಥವಾಗಿ ಎದುರಿಸುವ ಮೂಲಕ ಮೋದಿಯವರು ಜನಹಿತ ಸರ್ಕಾರ ನಡೆಸುತ್ತಿದ್ದಾರೆ.ಸಮರ್ಥ ಆಡಳಿತಕ್ಕೆ ದೇಶದ ಶೇ.೭೫ ರಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಬಸವರಾಜ ಗುಗ್ಗಳಶೆಟ್ರ, ವಿರೂಪಾಕ್ಷಪ್ಪ ಭತ್ತದ, ಶ್ರೀಧರ ಕೇಸರಹಟ್ಟಿ, ವಾಗೀಶ ಹಿರೇಮಠ, ಶಿವಾನಂದ ಬೆನಕನಾಳ, ಡಾ. ಸಹನಾ ಸಿದ್ರಾಮೇಶ, ಸಣ್ಣ ಕನಕಪ್ಪ, ವೆಂಕಟೇಶ ನಿರ್ಲೂಟಿ, ಲಿಂಗಪ್ಪ ಪೂಜಾರಿ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ