ಕನ್ನಡಪ್ರಭ ವಾರ್ತೆ ಶಿರಾ ಜಾತ್ರಾ ಮಹೋತ್ಸವ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಸಾಕ್ಷಿಕರಿಸುತ್ತವೆ. ಹಸಿದವರಿಗೆ ಅನ್ನ ನೀಡುವುದಕ್ಕಿಂತ ಉತ್ತಮ ಸೇವೆ ಮತ್ತೊಂದಿಲ್ಲ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ಗ್ರಾಮದ ಶ್ರೀ ಬಂಡಿರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು, ಜಾತ್ರೆಯಲ್ಲಿ ಪಾಲ್ಗೊಂಡ ರೈತರಿಗೆ ಊಟ ವಿತರಣೆ ಮಾಡಿ ಮಾತನಾಡಿದರು. ತಾವರೆಕೆರೆ ಜಾತ್ರೆಯಲ್ಲಿ ಉತ್ತಮ ರಾಸುಗಳು ಪಾಲ್ಗೊಂಡಿರುವ ಕಾರಣ ರಾಜ್ಯದ ನಾನಾ ಮೂಲೆಗಳಿಂದ ರಾಸುಗಳನ್ನು ಕೊಳ್ಳಲು ರೈತರು ಈ ಜಾತ್ರೆಗೆ ಬರುತ್ತಾರೆ, ಇವರಿಗೆ ಊಟ ನೀಡುತ್ತಿರುವ ಎಂಆರ್ ಶಶಿಧರ್ ಗೌಡ ಮತ್ತು ಸ್ನೇಹಿತರ ಸೇವೆ ಜನ ಮೆಚ್ಚುವಂತದ್ದು, ಧಾರ್ಮಿಕ ಉತ್ಸವಗಳು ಪರಸ್ಪರ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸಿ ಒಗ್ಗಟ್ಟನ್ನು ತಂದುಕೊಡುತ್ತವೆ. ಶ್ರೀ ಬಂಡಿರಂಗನಾಥ ಸ್ವಾಮಿ ರಥ ಸುಗಮವಾಗಿ ಸಾಗಿದ ರೀತಿ ಪ್ರತಿಯೊಬ್ಬರ ಜೀವನ ದಲ್ಲಿರುವ ಕಷ್ಟಗಳು ದೂರವಾಗಿ ಪ್ರತಿಯೊಬ್ಬರ ಜೀವನ ಸುಭಿಕ್ಷೆ ಮೂಡಲಿ ಆಶಿಸಿದರು.