ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನೆತ್ತಿ ಸುಡುವ ಬಿರುಬಿಸಿಲಿನಲ್ಲಿ ಆರಂಭವಾದ ಪೈಲ್ವಾನರ ಕಾದಾಟ ಸಂಜೆ ಆಗುತ್ತಿದ್ದಂತೆಯೇ ರಂಗೇರಿತು. ಜಯಶಾಲಿಯಾದ ಪೈಲ್ವಾನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. 25 ಸಾವಿರಕ್ಕೂ ಅಧಿಕ ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು.
ಮಹಾರಾಷ್ಟ್ರ ಕೇಸರಿ ಸಿಕಂದರನ ಚಿತ್ ಮಾಡಿದ ಪಂಜಾಬ್ ಕೇಸರಿ ಹಿತೇಶ್:ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಸಿಕಂದರ್ ಶೇಖ್ ಕ್ಷಣಾರ್ಧದಲ್ಲಿ ಪೇಚ್ ಡಾವ್ ಮೂಲಕ ಹಿಂದಿನಿಂದ ಎತ್ತಿ ಹಾಕಿ ಪಂಜಾಬ್ ಭಾರತ ಕೇಸರಿ ಹಿತೇಶ್ ಕಾಲಾರನ್ನು ಚಿತ್ ಮಾಡಿ ಗೆಲುವಿನ ನಗೆ ಬೀರಿ, ಪ್ರೇಕ್ಷಕರನ್ನು ರಂಜಿಸಿದರು.ಮಹಾರಾಷ್ಟ್ರ ಚಾಂಪಿಯನ್ ಜಯ ಜಾಧವ ಹಾಗೂ ಬೆಳಗಾವಿ ಪೈಲ್ವಾನ್ ಸಂಜು ಇಂಗಳಗಿ ಮಧ್ಯೆ ಜಯಕ್ಕಾಗಿ ತೀವ್ರ ಸೆಣಸಾಟ ನಡೆದರೂ ಕೊನೆಗೆ ಪಂದ್ಯ ಸಮಬಲಗೊಂಡಿತು. ಎಲ್ಲರೂ ಹೆಚ್ಚಿನ ನಿರೀಕ್ಷೆ ಹೊಂದಿದ್ದ ಕಂಗ್ರಾಳಿಯ ಪೈಲ್ವಾನ್ ಪಾರ್ಥ್ ಪಾಟೀಲ ನ್ಯಾಷನಲ್ ಚಾಂಪಿಯನ್ ರಾಮ ಪವಾರ್‌ಗೆ ಸೋಲಿನ ರುಚಿ ತೋರಿಸಿದರು.
ಚಿಕ್ಕಬಾಗೇವಾಡಿಯ ಶಂಕರ ಜೋತೆ ಅಶೋಕ ಇಂಡಿ ಸೆಣಸಾಟ ರೋಮಾಂಚನಕಾರಿಯಾಗಿತ್ತು. ಆದರೆ ಫಲಿತಾಂಶ ಬಾರದೆ ಸಮಬಲವಾಯಿತು. ಶಾಸಕ ಮಹಾಂತೇಶ ಕೌಜಲಗಿ ಸಭೀಕರೊಂದಿಗೆ ಕುಸ್ತಿ ವಿಕ್ಷೀಸಿದರು.
ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಸಣ್ಣಬಸಪ್ಪ ಕುಡಸೋಮಣ್ಣವರ, ಬಾಬು ಕುಡಸೋಮಣ್ಣವರ, ರಾಮಲಿಂಗ ಕುಡಸೋಮಣ್ಣವರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಶಂಕರೆಪ್ಪ ತುರಮರಿ, ಚನ್ನಪ್ಪ ಬೆಟಗೇರಿ, ಮಲ್ಲಿಕಾರ್ಜುನ ಮೊರಬದ, ಶಿವಬಸ್ಸು ಕುಡಸೋಮಣ್ಣವರ, ಶಂಕರೆಪ್ಪ ಕಡಕೋಳ, ಅಶೋಕ ಮತ್ತಿಕೊಪ್ಪ, ಉಳವಪ್ಪ ಉಪ್ಪಿನ, ವೀರಣ್ಣ ಸಾಲಿಮಠ, ಸುನಿಲ ವಳಸಂಗ, ಶಿವು ಬೆಳಗಾಂವಿ, ದುಂಡಪ್ಪ ತುರಮರಿ, ಅಬ್ದುಲ್ ರೆಹಮಾನ್ ನಂದಗಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಗೌರಿ ಇತರರು ಇದ್ದರು. ನಿವೃತ್ತ ಶಿಕ್ಷಕ ದುಂಡಪ್ಪ ಅಕ್ಕಿ ನಿರೂಪಿಸಿದರು.ವರ್ತಿಸಿದ್ಧ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ , ಜಾತ್ರಾ ಕಮಿಟಿ ಸಹಕಾರದಲ್ಲಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯಕ್ಷ ಜಿ.ಎಸ್. ಬೋಳನ್ನವರ ಮಾರ್ಗದರ್ಶನದಲ್ಲಿ ಕುಸ್ತಿ ಪಂದ್ಯಗಳು ನಡೆದವು.