ಜಾವಲಿನ್ ಎಸೆತ: ಡೆಚ್ಚನ್ ಚೋಂದಾಲ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Jan 19, 2025, 02:19 AM IST
18ಕೆಎಂಎನ್ ಡಿ14 | Kannada Prabha

ಸಾರಾಂಶ

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಡೆಚ್ಚನ್ ಚೋಂದಾಲ್ ಅವರನ್ನು ಜ್ಞಾನ ವಿಕಾಸ ಎಜುಕೇಶನ್ ಸಂಸ್ಥೆ ಕಾರ್ಯದರ್ಶಿ ಗಜೇಂದ್ರ ಗೋವಿಂದರಾಜು, ಮುಖ್ಯ ಶಿಕ್ಷಕಿಯರಾದ ಲಕ್ಷ್ಮಿ, ಜ್ಯೋತಿ ಹಾಗೂ ಶಾಲೆಯ ಸಿಬ್ವಂದಿ ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಜ್ಞಾನ ವಿಕಾಸ ವಿಶೇಷ ಶಾಲೆ ವಿಶೇಷಚೇತನ ವಿದ್ಯಾರ್ಥಿನಿ ಡೆಚ್ಚನ್ ಚೋಂದಾಲ್ ರಾಜ್ಯ ಮಟ್ಟದ ಕ್ರೀಡಾಕೂಟದ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿಯಲ್ಲಿ ಕಳೆದ ಜನವರಿ 11 ಹಾಗೂ 12ರಂದು ಎರಡು ದಿನಗಳ ಕಾಲ ನಡೆದ ವಿಶೇಷ ವಿಕಲಚೇತನ ಮಕ್ಕಳ ರಾಜ್ಯ ಮಟ್ಟದ 14 ರಿಂದ 17 ವರ್ಷದೊಳಗಿನ ಮಕ್ಕಳ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಡೆಚ್ಚನ್ ಚೋಂದಾಲ್ ಅವರು ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಡೆಚ್ಚನ್ ಚೋಂದಾಲ್ ಅವರನ್ನು ಜ್ಞಾನ ವಿಕಾಸ ಎಜುಕೇಶನ್ ಸಂಸ್ಥೆ ಕಾರ್ಯದರ್ಶಿ ಗಜೇಂದ್ರ ಗೋವಿಂದರಾಜು, ಮುಖ್ಯ ಶಿಕ್ಷಕಿಯರಾದ ಲಕ್ಷ್ಮಿ, ಜ್ಯೋತಿ ಹಾಗೂ ಶಾಲೆಯ ಸಿಬ್ವಂದಿ ಅಭಿನಂದಿಸಿದ್ದಾರೆ.

ಚೆಲುವನಾರಾಯಣಸ್ವಾಮಿ ರಥಸಪ್ತಮಿ ಉತ್ಸವಕ್ಕೆ ಕಲಾತಂಡಗಳಿಂದ ಆಹ್ವಾನ

ಮೇಲುಕೋಟೆ:

ರಥಸಪ್ತಮಿಯ ರಾಜ್ಯ ಮಟ್ಟದ ಜನಪದ ಕಲಾ ಮೇಳಕ್ಕೆ ಮೆರವಣಿಗೆಯಲ್ಲಿ ಭಾಗವಹಿಸುವ ಜಾನಪದ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ಫೆ.5ರ ಮುಂಜಾನೆ 6ಗಂಟೆಗೆ ನಡೆಯುವ ಚೆಲುವನಾರಾಯಣಸ್ವಾಮಿ ರಥಸಪ್ತಮಿ ವೇಳೆ 26ನೇ ವರ್ಷದ ರಾಜ್ಯ ಮಟ್ಟದ ಜನಪದ ಕಲಾಮೇಳ ನಡೆಯಲಿದೆ.

ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಜಾನಪದ ಕಲಾ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾ ತಂಡಗಳು ಫೆ.4ರಂದೇ ಮೇಲುಕೋಟೆಯಲ್ಲಿ ವಾಸ್ತವ್ಯ ಮಾಡಬೇಕಿದೆ.

ಭಾಗವಹಿಸುವ ಕಲಾ ತಂಡಗಳಿಗೆ ಪ್ರಯಾಣ ವೆಚ್ಚ, ಪ್ರಮಾಣ ಪತ್ರ, ಗೌರವ ಸಂಭಾವನೆ ಊಟ ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಈಗಾಗಲೇ ಆಹ್ವಾನಿತರಾಗಿರುವ ತಂಡಗಳನ್ನು ಹೊರತುಪಡಿಸಿ ಭಾಗವಹಿಸಲು ಇಚ್ಚಿಸುವ ಮಂಡ್ಯ, ಮೈಸೂರು, ಹಾಸನ, ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಕಲಾ ತಂಡಗಳು ಜನಪದ ಕಲಾವಿದ ಆರ್.ಶಿವಣ್ಣಗೌಡ ಮೊ-9902235338, ಮೊ-ಸೌಮ್ಯಸಂತಾನಂ ಮೊ-8123831965, ಮೊ-9482113598 ಸಂಪರ್ಕಿಸಲು ಕೋರಲಾಗಿದೆ.

ವಿದ್ಯಾರ್ಥಿ ಜನಪದ ಪ್ರತಿಭೆಗೂ ಅವಕಾಶ:

ರಥಸಪ್ತಮಿ ಉತ್ಸವದ ಕಲಾ ಮೇಳದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜನಪದ ಕಲಾ ಪ್ರದರ್ಶನಕ್ಕೂ ಅವಕಾಶವಿದೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಪ್ರೌಢಶಾಲಾ ವಿಭಾಗದ ಜನಪದ ಕಲಾ ಪ್ರಕಾರಗಳ ತಂಡಗಳು ಮತ್ತು ಪಿಯು ಮತ್ತು ಪದವಿ ಕಾಲೇಜು ಹಂತದ ವಿದ್ಯಾರ್ಥಿ ತಂಡಗಳೂ ಭಾಗವಹಿಸಬಹು.

ಭಾಗವಹಿಸುವ ತಂಡಗಳಿಗೆ ಪ್ರಯಾಣವೆಚ್ಚ ಹಾಗೂ ತಾತ್ಪೂರ್ವಿಕ ವೆಚ್ಚ ನೀಡಲಾಗುತ್ತದೆ. ಈ ಕಲಾರಾಧನೆ ವೇದಿಕೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲಾ-ಕಾಲೇಜು ಮುಖ್ಯಸ್ಥರು /ಶಿಕ್ಷಕರು ಹೆಚ್ಚಿನ ಮಾಹಿತಿಗೆ ಸಂಘಟಕನ್ನು ಸಂಪರ್ಕಿಸಲು ಕೋರಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ