ಇಂದಿನಿಂದ ಜೆಸಿಐ ಸಪ್ತಾಹ: ಗೌರೀಶ್

KannadaprabhaNewsNetwork |  
Published : Sep 09, 2025, 01:00 AM IST
ಪೋಟೋ: 08ಎಸ್‌ಎಂಜಿಕೆಪಿ03ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಲಯ ಅಧ್ಯಕ್ಷ ಜೆಸಿಐ ಸೆನೆಟರ್ ಸಿ.ಎ.ಗೌರೀಶ್ ಭಾರ್ಗವ ಮಾತನಾಡಿದರು. | Kannada Prabha

ಸಾರಾಂಶ

ನಗರದ ಎಲ್ಲಾ ಜೆಸಿಐ ಒಕ್ಕೂಟಗಳ ಸಹಯೋಗದಲ್ಲಿ ಸೆ.9ರಿಂದ ಸೆ.15ರವರೆಗೆ ಜೆಸಿಐ ಸಪ್ತಾಹವನ್ನು ಆಚರಿಸಲಾಗುವುದು ಎಂದು ವಲಯ ಅಧ್ಯಕ್ಷ ಜೆಸಿಐ ಸೆನೆಟರ್ ಸಿ.ಎ.ಗೌರೀಶ್ ಭಾರ್ಗವ ಹೇಳಿದರು.

ಶಿವಮೊಗ್ಗ: ನಗರದ ಎಲ್ಲಾ ಜೆಸಿಐ ಒಕ್ಕೂಟಗಳ ಸಹಯೋಗದಲ್ಲಿ ಸೆ.9ರಿಂದ ಸೆ.15ರವರೆಗೆ ಜೆಸಿಐ ಸಪ್ತಾಹವನ್ನು ಆಚರಿಸಲಾಗುವುದು ಎಂದು ವಲಯ ಅಧ್ಯಕ್ಷ ಜೆಸಿಐ ಸೆನೆಟರ್ ಸಿ.ಎ.ಗೌರೀಶ್ ಭಾರ್ಗವ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಸಿಐ ಭಾರತ ವಲಯ-24ರ ಜೆಸಿಐ ಸಪ್ತಾಹವನ್ನು ‘ಫ್ರಿಜಂ’ ಎಂಬ ಧ್ಯೇಯವಾಕ್ಯದೊಡನೆ ಆಚರಿಸಲಾಗುತ್ತದೆ. ಈ ಸಪ್ತಾಹದಲ್ಲಿ ನಗರದ ಎಲ್ಲಾ ಘಟಕಗಳು ಕೈಜೋಡಿಸುತ್ತಿವೆ. ಸಪ್ತಾಹದ ಮುಖ್ಯ ಕಾರ್ಯಕ್ರಮಗಳಾದ ಧ್ವಜಾರೋಹಣ, ಒಳಾಂಗಣ ಕ್ರೀಡೆ, ಆರೋಗ್ಯ ತಪಾಸಣೆ, ವಾಕ್ವಾನ್ ಮ್ಯಾರಾಥಾನ್, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಸೆ.9ರಂದು ಬೆಳಗ್ಗೆ 8 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತಾಹ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಚಾಲನೆ ನೀಡುವರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುವುದು. ಜೊತೆಗೆ ನೆಹರೂ ಕ್ರೀಡಾಂಗಣದಿಂದ ಗೋಪಿ ಸರ್ಕಲ್‌ವರೆಗೆ ವಾಕಾಥಾನ್ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.ಜೆಸಿಐ ಭಾವನಾ ಅಧ್ಯಕ್ಷೆ ರೇಖಾರಂಗನಾಥ್ ಮಾತನಾಡಿ, 7 ದಿನಗಳೂ ಕೂಡ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೌಶಲ್ಯಾಧಾರಿತ ಕಾರ್ಯಾಗಾರಗಳು ಮಾನವ ಕರ್ತವ್ಯಗಳ ಅರಿವು, ಅರ್ಜಿ ಸಹಿ ಅಭಿಯಾನ, ಕಾಲೇಜುಗಳು ಮತ್ತು ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಅಭಿಯಾನ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಕೊಡುಗೆದಾರರ ಗುರುತಿಸುವಿಕೆ, ಜೆಸಿಐ ವೀಕ್ ಪ್ರಿಸಮ್ ಇಂಪ್ಯಾಕ್ಟ್ ವರದಿ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಆಯಾ ಜೆಸಿ ಘಟಕಗಳು ನಡೆಸಿಕೊಡಲಿವೆ ಎಂದು ಹೇಳಿದರು. ಪ್ರಮುಖವಾಗಿ ಸೆ.10ರಂದು ಬೆಳಗ್ಗೆ ಜೆಸಿಐ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬ್ಯಾಡ್ಮಿಂಟನ್, ಕೇರಂ, ಚೆಸ್ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಹೆಸರು ನೊಂದಾಯಿಸುವವರು ಮೊಬೈಲ್ ನಂ. 9886187777, 7411879043 ಗೆ ಸಂಪರ್ಕಿಸಬಹುದು ಎಂದರು.ಸೆ.9 ರಿಂದ ಆರಂಭವಾದ ಜೆಸಿಐ ಸಪ್ತಾಹ, ಸೆ.೧೫ರಂದು ಭವ್ಯ ಆಚರಣೆಯ ಮೂಲಕ ಮುಕ್ತಾಯವಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಎಲ್ಲಾ ಘಟಕಗಳ ಅಧ್ಯಕ್ಷರುಗಳಾದ ಸ್ಮಿತಾಮೋಹನ್, ಶಿಲ್ಪಾ, ರುದ್ರೇಶ್‌ಕೋರಿ, ಗಣೇಶ್ ಪೈ, ವಿ.ಗಣೇಶ್ , ಸಂತೋಷ, ನಿವೇದಿತಾ ವಿಕಾಸ್, ಮಂಜುಳಾ ಕೇಶವ್, ನರಸಿಂಹಣ್ಣ, ಶಿಲ್ಪ ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು