ಬಳಿಘಟ್ಟ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಣ್ಣಯ್ಯ ಆಯ್ಕೆ

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ಬಳಿಘಟ್ಟ ಗ್ರಾಪಂನ ಒಟ್ಟು 10 ಸದಸ್ಯ ಬಲದಲ್ಲಿ ಹಿಂದಿನ ಉಪಾಧ್ಯಕ್ಷ ನಾಗೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್ ಬೆಂಬಲಿತ ಆಶಾ, ಜೆಡಿಎಸ್ ಬೆಂಬಲಿತ ಅಣ್ಣಯ್ಯ ನಾಮಪತ್ರ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಬಳಿಘಟ್ಟ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯ ಅಣ್ಣಯ್ಯ ಆಯ್ಕೆಯಾಗಿದರು.

ಗ್ರಾಪಂನ ಒಟ್ಟು 10 ಸದಸ್ಯ ಬಲದಲ್ಲಿ ಹಿಂದಿನ ಉಪಾಧ್ಯಕ್ಷ ನಾಗೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಕಾಂಗ್ರೆಸ್ ಬೆಂಬಲಿತ ಆಶಾ, ಜೆಡಿಎಸ್ ಬೆಂಬಲಿತ ಅಣ್ಣಯ್ಯ ನಾಮಪತ್ರ ಸಲ್ಲಿಸಿದ್ದರು.

ಈ ವೇಳೆ ನಡೆದ ಚುನಾವಣೆಯಲ್ಲಿ ಅಣ್ಣಯ್ಯ ಪರ 7 ಮತಗಳು, ಆಶಾ ಪರ 3 ಮತಗಳು ಚಲಾವಣೆಯಾದವು. ನಂತರ ಚುನಾವಣೆಯಲ್ಲಿ ಅಣ್ಣಯ್ಯ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ತಾಪಂ ಇಒ ಲೋಕೇಶಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಅಭಿನಂದನೆ ಸ್ವೀಕರಿಸಿದ ಉಪಾಧ್ಯಕ್ಷ ಅಣ್ಣಯ್ಯ ಮಾತನಾಡಿ, ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಬಳಿಘಟ್ಟ ಗ್ರಾಪಂ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಏತನೀರಾವರಿ ಯೋಜನೆ ತಂದು ಗ್ರಾಮಗಳ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಮಾಜಿ ಸಚಿವ ಸಿಎಸ್ಪಿಯವರ ಮಾರ್ಗದರ್ಶನದಲ್ಲಿ ನಾವು ಜನರಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಈ ವೇಳೆ ಸದಸ್ಯರಾದ ಪವಿತ್ರ ವಾಸು, ಚಂದ್ರಮ್ಮ ನಾಗರಾಜು, ವೆಂಕಟೇಶ್, ನಾಗೇಶ್, ಸೋಮಾಚಾರಿ, ಜೆಡಿಎಸ್ ಮುಖಂಡರಾದ ತಾಳೆಕೆರೆ ಯೋಗಣ್ಣ, ಚಲ್ಲರಹಳ್ಳಿ ಕೊಪ್ಪಲು ನಾಗರಾಜು, ಮೇಲುಕೋಟೆ ಈಶಮುರುಳಿ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಪುಟ್ಟರಾಜು, ಸಿಂಗಾಪುರ ವಾಸು, ಕನಗೋನಹಳ್ಳಿ ಕಾಂತರಾಜು ಮತ್ತಿತರರು ಇದ್ದರು.

ಇಂದು ಬೃಹತ್ ಕಾಲ್ನಡಿಗೆ ಜಾಥಾ

ಮಂಡ್ಯ: ರಾಷ್ಟ್ರೀಯ ರಸ್ತೆ, ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಬೃಹತ್ ಕಾಲ್ನಡಿಗೆ ಜಾಥಾ (ವಾಕಥಾನ್) ಮಾ.21 ರಂದು ಬೆಳಗ್ಗೆ 8.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಿಂದ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದವರೆಗೆ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಾಲ್ನಡಿಗೆಗೆ ಚಾಲನೆ ನೀಡಲಿದ್ದು ಜಿಪಂ ಸಿಇಒ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಶ್ರೀಧರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಾಡ್‌ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಕಾರ್ಯದರ್ಶಿ ಎಚ್‌.ಆರ್‌.ಹರ್ಷ ಅವರು ಉಪಸ್ಥಿತರಿರುವರು.

Share this article