ಐಪಿಎಸ್‌ ಅಧಿಕಾರಿ ಅಮಾನತಿಗೆ ಜೆಡಿಎಸ್‌ ಆಗ್ರಹ

KannadaprabhaNewsNetwork |  
Published : Oct 02, 2024, 01:09 AM ISTUpdated : Oct 02, 2024, 01:10 AM IST
ಐಪಿಎಸ್ ಅಧಿಕಾರಿ ಪದಬಳಕೆ ಖಂಡಿಸಿ ರಾಜ್ಯಪಾಲರಿಗೆ ಜೆಡಿಎಸ್ ಮನವಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಬಳಸಿದ ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಜೆಡಿಎಸ್‌ನಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಬಳಸಿದ ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಜೆಡಿಎಸ್‌ನಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಸಿದ್ದು, ಅವರ ಹೇಳಿಕೆಯಿಂದ ಎಚ್.ಡಿ.ಕುಮಾರಸ್ವಾಮಿ ಅವರ ಲಕ್ಷಾಂತರ ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ. ಎರಡು ಬಾರಿ ಮುಖ್ಯಮಂತ್ರಿಯಾದ್ದ ಕೇಂದ್ರ ಸಚಿವರ ಬಗ್ಗೆ ಮಾತನಾಡುವವರು ಸಾಮಾನ್ಯ ಜನರ ಹಿತ ಹೇಗೆ ಕಾಪಾಡುತ್ತಾರೆ?. ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಮಹತ್ವದ ಗೌರವ ಇದೆ ಅಂತಹ ಕರ್ನಾಟಕದ ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ ಅವರು ಈ ರೀತಿ ಭಾಷೆ ಬಳಸಿರುವುದು ನಿಜಕ್ಕೂ ಆಘಾತಕಾರಿ. ಅಧಿಕಾರಿ ಚಂದ್ರಶೇಖರ ಅವರನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತುಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡರಾದ ಎಸ್.ವಿ.ಪಾಟೀಲ, ರಾಜು ಹಿಪ್ಪರಗಿ, ನಿಂಗನಗೌಡ ಸೋಲಾಪೂರ, ಸಂಜು ಹಿರೇಮಠ, ಸುಭಾಸ ನಾಯಕ, ಪೀರಭಾಷಾ ಗಚ್ಚಿನಮಹಲ, ರವಿ ಚವ್ಹಾಣ, ಸಂಜು ದೊಡಮನಿ, ಸುಜಾತಾ ಕಣಬೂರ, ಬಾಬು ಶಿರಣಗಾರ, ಮಲ್ಲು ತೊರವಿ, ದಿಲೀಪ ರಾಠೋಡ, ಸಂತೋಷ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ