ಕುಣಿಕೇರಿ ಗ್ರಾಮಸ್ಥರ ಹೋರಾಟಕ್ಕೆ ಜೆಡಿಎಸ್. ಬಿಜೆಪಿ ಬೆಂಬಲ

KannadaprabhaNewsNetwork |  
Published : May 06, 2025, 12:21 AM IST
5ಕೆಪಿಎಲ್25 ಕುಣಿಕೇರಿ ಗ್ರಾಮಸ್ಥರ ಹೋರಾಟಕ್ಕೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಬೆಂಬಲಿಸಿರುವುದು. | Kannada Prabha

ಸಾರಾಂಶ

ಕೃಷಿಯೇತರ ಚಟುವಟಿಕೆಗೆ ಹೊರತುಪಡಿಸಿ ಕೆರೆಯ ಮಣ್ಣನ್ನು ಬಳಸುವಂತಿಲ್ಲ ಎಂಬ ಕಾನೂನಿದ್ದರೂ ಕಾನೂನು ಉಲ್ಲಂಘಿಸಿ ಫಲವತ್ತಾದ ಕೆರೆಯ ಮಣ್ಣು ಸಾಗಾಣಿಕೆಗೆ ಅನುಮತಿ ನೀಡಿದ ಪಂಚಾಯಿತಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕೊಪ್ಪಳ:

ಕುಣಿಕೇರಿ ಗ್ರಾಮದ ಕೆರೆಯ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಧರಣಿ ನಡೆಸುತ್ತಿರುವುದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಜಂಟಿ ಬೆಂಬಲ ನೀಡಿವೆ.

ತಾಲೂಕಿನ ಕುಣಿಕೇರಿ ಗ್ರಾಮದ ದೊಡ್ಡ ಕೆರೆಯ ಮಣ್ಣನ್ನು ಅಕ್ರಮ ಮಾರಾಟ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ವಿರೋಧಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್, ಜೆಡಿಎಸ್‌ನ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ವಿಪ‌ ಸದಸ್ಯೆ ಹೇಮಲತಾ ನಾಯಕ ಭೇಟಿ ನೀಡಿ, ಬೆಂಬಲ ಸೂಚಿಸಿ, ಅಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿಯೇತರ ಚಟುವಟಿಕೆಗೆ ಹೊರತುಪಡಿಸಿ ಕೆರೆಯ ಮಣ್ಣನ್ನು ಬಳಸುವಂತಿಲ್ಲ ಎಂಬ ಕಾನೂನಿದ್ದರೂ ಕಾನೂನು ಉಲ್ಲಂಘಿಸಿ ಫಲವತ್ತಾದ ಕೆರೆಯ ಮಣ್ಣು ಸಾಗಾಣಿಕೆಗೆ ಅನುಮತಿ ನೀಡಿದ ಪಂಚಾಯಿತಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಸ್ಥಳಕ್ಕೆ ಪಿಡಿಒ, ತಾಪಂ ಇಒ ಕರೆಯಿಸಿ ಪಂಚಾಯಿತಿ ಸದಸ್ಯರೆಲ್ಲ ಸೇರಿಸಿ ತುರ್ತು ಸಭೆ ಆಯೋಜಿಸಿ ಸೋಮವಾರವೇ ಪಂಚಾಯಿತಿಯಿಂದ ಠರಾವು ಪಾಸ್ ಮಾಡಿ ಅಕ್ರಮ ಮಣ್ಣು ಮಾರಾಟ ತಡೆಗಟ್ಟಲು ನಿರ್ಧರಿಸಲಾಯಿತು.

ವಿಪ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ಮುಖಂಡರಾದ ಸಿ.ವಿ. ಚಂದ್ರಶೇಖರ, ಗ್ರಾಪಂ ಸದಸ್ಯರಾದ ಹುಚ್ಚಪ್ಪ ಚೌದ್ರಿ, ಈರಮ್ಮ ಮಡಿವಾಳ, ರವಿ ಮೋಚಿ, ಮಹಾದೇವಕ್ಕ ಹಲಗಿ, ಮುಖಂಡರಾದ ಮೂರ್ತೆಪ್ಪ, ರಮೇಶ ಡಂಬ್ರಹಳ್ಳಿ, ಚನ್ನವೀರಯ್ಯ, ಮಲ್ಲೇಶಪ್ಪ ಸೋಂಪುರ, ರಾಮಣ್ಣ ಬೆಳವಿನಾಳ, ಮಂಜಮ್ಮ ಸಚಿಮಠ, ಗಿರಿಯಮ್ಮ ಗೌಡ್ರು, ಹನುಮಮ್ಮ ಕುರುಬರ, ರುದ್ರಮ್ಮ ಮೂಲಿಮನಿ, ತಿಪ್ಪಣ್ಣ ಚೌದ್ರಿ, ಮಾದೇಗೌಡ, ಉದಯ ನಾಯಕ, ಗವಿ ಅಲಗಿ, ಬಸವರಾಜ್ ಮಡಿವಾಳ, ರಮೇಶ ವಾಲಿಕಾರ, ರಮೇಶ ಕನ್ಯಾಳ, ಬಸವರಾಜ ಹಳ್ಳಿಕೇರಿ, ಗದಿಗೆಪ್ಪ ಚೌದ್ರಿ, ಗಿರಿಯಪ್ಪ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ