ಮಾಗಡಿಗೆ ನೀರು ಹರಿಸಲು ಜೆಡಿಎಸ್‌ ವಿರೋಧ

KannadaprabhaNewsNetwork |  
Published : Dec 10, 2024, 12:31 AM IST
ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ  ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಕುಣಿಗಲ್ ಪಾಲಿನ ನೀರನ್ನು ಬಳಕೆ ಮಾಡಲು ಯಾವುದೇ ಕಾಲುವೆ ಅಭಿವೃದ್ಧಿ ಮಾಡದ ಕಾಂಗ್ರೆಸ್ಸಿಗರು ರಾಮನಗರ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದು ಸರಿ ಅಲ್ಲ ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ತಿಳಿಸಿದ್ದಾರೆ,

ಕನ್ನಡಪ್ರಭ ವಾರ್ತೆ ಕುಣಿಗಲ್

ಕುಣಿಗಲ್ ಪಾಲಿನ ನೀರನ್ನು ಬಳಕೆ ಮಾಡಲು ಯಾವುದೇ ಕಾಲುವೆ ಅಭಿವೃದ್ಧಿ ಮಾಡದ ಕಾಂಗ್ರೆಸ್ಸಿಗರು ರಾಮನಗರ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದು ಸರಿ ಅಲ್ಲ ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ತಿಳಿಸಿದ್ದಾರೆ, ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈ ಕೆ ರಾಮಯ್ಯ ಅವರ ಹೋರಾಟದ ಫಲವಾಗಿ ಕುಣಿಗಲ್ ಗೆ ನೀರು ಬಂದಿತ್ತು. ನಮ್ಮ ಪಾಲಿನ ನೀರನ್ನು ಇದುವರೆಗೂ ಕೂಡ ಬಳಸಿಕೊಳ್ಳಲು ಆಗಿಲ್ಲ. ಅದಕ್ಕಾಗಿ ಡಿ ನಾಗರಾಜಯ್ಯ, ಬಿಬಿ ರಾಮಸ್ವಾಮಿಗೌಡ ಕುಣಿಗಲ್‌ ನಲ್ಲಿ ನಿರ್ಮಾಣ ಮಾಡುತ್ತಿದ್ದ ಹಲವಾರು ಕಾಲುವೆಗಳ ಕಾಮಗಾರಿಯನ್ನು ಇತ್ತೀಚೆಗೆ ಬಂದ ಶಾಸಕ ರಂಗನಾಥ್ ಮುಂದುವರಿಸಿಲ್ಲ ಇದರಿಂದ ಕುಣಿಗಲ್ ಗೆ ನೀರಿಲ್ಲದಂತಾಗಿದೆ. ಆದರೆ ರಾಮನಗರ ಮಾಗಡಿ ಭಾಗಕ್ಕೆ ಕಾಲುವೆ ಲಿಂಕ್ ಮಾಡಿ ನೀರು ತೆಗೆದುಕೊಂಡು ಹೋಗುವ ತಯಾರಿ ನಡೆಯುತ್ತಿದೆ. ಇದರಿಂದ ಕುಣಿಗಲ್ ಜನತೆಗೆ ದ್ರೋಹ ಆಗುತ್ತಿದೆ ಎಂದರು.

ಹೀರೆಕೆರೆ ಬಳಿ ನಿರ್ಮಾಣ ಮಾಡಿರುವ ನೀರಿನ ಶೇಖರಣ ಘಟಕ ಅವೈಜ್ಞಾನಿಕವಾಗಿದ್ದು ಬೃಹತಾಕಾರದ ಪಂಪು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿ ಸಂಗ್ರಹವಾದ ನೀರನ್ನು ಕೆಲವೇ ಗಂಟೆಗಳಲ್ಲಿ ಲಿಫ್ಟ್ ಮಾಡುವ ಮುಖಾಂತರ ಹುತ್ರಿ ಬೆಟ್ಟದಿಂದ ಮಾಗಡಿಗೆ ಗುರುತ್ವಾಕರ್ಷಣ ಶಕ್ತಿಯಲ್ಲಿ ನೀರು ಹರಿಸುವ ಯೋಜನೆಯನ್ನು ಮಾಡುತ್ತಿದ್ದಾರೆ ಇಂತಹ ಕೆಲಸ ಮಾಡುವ ಮೊದಲು ಕುಣಿಗಲ್ಲಿಗೆ ಇದ್ದ ನೀರನ್ನು ಕುಣಿಗಲ್ ಜನತೆಗೆ ಅನುಕೂಲ ಮಾಡಲು ಬಿಡಿ. ಮಾಗಡಿ ರಾಮನಗರಕ್ಕೆ ಪ್ರತ್ಯೇಕ ನೀರನ್ನು ಕಾಯ್ದಿರಿಸಬೇಕಾಗಿತ್ತು. ಆದರೆ ಆ ಕೆಲಸವನ್ನು ಈ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆಎಲ್ ಹರೀಶ್, ವಾಸು ರಂಗಸ್ವಾಮಿ ಪ್ರಕಾಶ್ ದೀಪು ನಾಗರಾಜ್ ಕೃಷ್ಣೇಗೌಡ ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ