ಹಾಸನದಿಂದ ಜೆಡಿಎಸ್ ಸತ್ಯಯಾತ್ರೆ ಪ್ರಾರಂಭ

KannadaprabhaNewsNetwork |  
Published : Sep 01, 2025, 01:03 AM IST
ಫೋಟೋ: ಕಂದಲಿ ಬಳಿ ಜೆಡಿಎಸ್ ಸತ್ಯಯಾತ್ರೆ ಪ್ರಾರಂಭವಾದ ಬಳಿಕ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಂದಲಿ ಬಳಿ ಜೆಡಿಎಸ್ ಸತ್ಯಯಾತ್ರೆ ಪ್ರಾರಂಭಗೊಂಡು ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಅವರು, “ಧರ್ಮಸ್ಥಳ ದೇಶ ಹಾಗೂ ವಿದೇಶಗಳಲ್ಲಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಕೇಂದ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ವಿರುದ್ಧ ದುರುದ್ದೇಶಿತ ಪ್ರಚಾರ ನಡೆಯುತ್ತಿದೆ. ಇದು ಕೇವಲ ಆಂತರಿಕ ವಿಚಾರವಲ್ಲ, ಇದರ ಹಿಂದೆ ವಿದೇಶಿ ಬಂಡವಾಳ ಹಾಗೂ ಸಂಘಟಿತ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಅನುಮಾನಗಳಿವೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು” ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸಂಘಟಿತ ಷಡ್ಯಂತ್ರವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ನಗರದ ಸಮೀಪ ಕಂದಲಿ ಬಳಿ ಜೆಡಿಎಸ್ ಸತ್ಯಯಾತ್ರೆ ಪ್ರಾರಂಭಗೊಂಡು ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಅವರು, “ಧರ್ಮಸ್ಥಳ ದೇಶ ಹಾಗೂ ವಿದೇಶಗಳಲ್ಲಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಕೇಂದ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ವಿರುದ್ಧ ದುರುದ್ದೇಶಿತ ಪ್ರಚಾರ ನಡೆಯುತ್ತಿದೆ. ಇದು ಕೇವಲ ಆಂತರಿಕ ವಿಚಾರವಲ್ಲ, ಇದರ ಹಿಂದೆ ವಿದೇಶಿ ಬಂಡವಾಳ ಹಾಗೂ ಸಂಘಟಿತ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಅನುಮಾನಗಳಿವೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು” ಎಂದು ಹೇಳಿದರು.ವಿದೇಶಿ ಬಂಡವಾಳದ ಅನುಮಾನ:

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿದ ಅವರು, “ತಲೆಬುರುಡೆ ತಂದ ಆರೋಪಿ ಹಾಗೂ ಕೆಲವು ಯೂಟ್ಯೂಬ್ ಚಾನೆಲ್‌ಗಳ ಮಾಲೀಕರು ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಬಗ್ಗೆ ಗಂಭೀರ ಆರೋಪಗಳಿವೆ. ಇವರ ಮೇಲೆ ನಿಖರ ತನಿಖೆ ಅಗತ್ಯವಿದೆ” ಎಂದು ಒತ್ತಾಯಿಸಿದರು.ಎಸ್‌ಐಟಿ ತನಿಖೆಯ ವಿರುದ್ಧ ಟೀಕೆ:

ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿಖಿಲ್, ಕೇವಲ ಇಬ್ಬರು ದೂರು ನೀಡಿದ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಲಾಗಿದೆ. ಆದರೆ ಎಸ್‌ಐಟಿ ತನಿಖೆಯಿಂದ ಯಾವುದೇ ತತ್ವಾಧಾರಿತ ಸತ್ಯ ಹೊರಬಂದಿಲ್ಲ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನೋಡಿದರೆ ಮಾತ್ರ ನಿಜವಾದ ಮಾಹಿತಿ ಹೊರಬರುವುದು ಎಂದು ಹೇಳಿದರು. ರಾಜಕೀಯ ಉದ್ದೇಶವಿಲ್ಲ:

ಸತ್ಯಯಾತ್ರೆಯ ಉದ್ದೇಶವನ್ನು ವಿವರಿಸಿದ ಅವರು, ಈ ಯಾತ್ರೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಧರ್ಮಸ್ಥಳದ ಧರ್ಮರಕ್ಷಣೆಗಾಗಿ, ಸತ್ಯಕ್ಕೆ ಬೆಂಬಲ ನೀಡಲು ಮತ್ತು ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದೊಂದಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ಈ ಸತ್ಯಯಾತ್ರೆ ಹಮ್ಮಿಕೊಂಡಿದ್ದೇವೆ. ಇದು ಧರ್ಮದ ಪರವಾದ ಯಾತ್ರೆ, ಸತ್ಯದ ಪರವಾದ ಹೋರಾಟ ಎಂದು ಹೇಳಿದರು.ಭಕ್ತರ ತೀವ್ರ ಪ್ರತಿಕ್ರಿಯೆ:

ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರದಿಂದ ಭಕ್ತಾದಿಗಳಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಜೆಡಿಎಸ್ ಸತ್ಯಯಾತ್ರೆ ಅವರಿಗೆ ಧ್ವನಿಯಾಗುತ್ತಿದೆ ಎಂದು ನಿಖಿಲ್ ಅಭಿಪ್ರಾಯಪಟ್ಟರು. ಸತ್ಯವನ್ನು ಮರೆಮಾಚಲು ಸಮಾಜಘಾತುಕ ಶಕ್ತಿಗಳು ಎಷ್ಟೇ ಯತ್ನಿಸಿದರೂ ಸತ್ಯವೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಪಿ. ಸ್ವರೂಪ್, ಸಿ ಎನ್. ಬಾಲಕೃಷ್ಣ, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್, ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ಕಾರ್ಯಕರ್ತರು, ಭಕ್ತಾದಿಗಳು ಹಾಗೂ ಸ್ಥಳೀಯ ಮುಖಂಡರು ಸತ್ಯಯಾತ್ರೆಯಲ್ಲಿ ಭಾಗವಹಿಸಿ ಧರ್ಮಸ್ಥಳದ ಪರವಾಗಿ ಬೆಂಬಲ ಘೋಷಿಸಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ