‘ಸೂಪರ್ 36’, ‘ಸ್ಟೇಟ್ ಟಾಪರ್ಸ್ ’ ಬೃಹತ್ ಯೋಜನೆ

KannadaprabhaNewsNetwork |  
Published : Apr 07, 2026, 02:45 AM IST
ಬಿಜೆಪಿ ಸ್ಥಾಪನಾ ದಿನಾಚರಣೆ ಅಂಗವಾಗಿ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು  | Kannada Prabha

ಸಾರಾಂಶ

ರಾಷ್ಟ್ರಮಟ್ಟದ JEE/NEET ಪ್ರವೇಶ ಪರೀಕ್ಷೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆಯುವಂತೆ ಸಜ್ಜುಗೊಳಿಸಲು ಇಲ್ಲಿನ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದ ‘‘ಸ್ಟೇಟ್ ಟಾಪರ್ಸ್ ’ ಬ್ಯಾಚ್’ (State Toppers Batch) ಹಾಗೂ ‘ಸೂಪರ್ 36’ (SUPER 36) ಎಂಬ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ.

ಮೂಡುಬಿದಿರೆ: ರಾಷ್ಟ್ರಮಟ್ಟದ JEE/NEET ಪ್ರವೇಶ ಪರೀಕ್ಷೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆಯುವಂತೆ ಸಜ್ಜುಗೊಳಿಸಲು ಇಲ್ಲಿನ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದ ‘‘ಸ್ಟೇಟ್ ಟಾಪರ್ಸ್ ’ ಬ್ಯಾಚ್’ (State Toppers Batch) ಹಾಗೂ ‘ಸೂಪರ್ 36’ (SUPER 36) ಎಂಬ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ.

ಈ ಯೋಜನೆಗಳು ಪ್ರೌಢಶಾಲೆ (High School) ಹಾಗೂ ಪದವಿಪೂರ್ವ (PU) ಹಂತದ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಅತ್ಯುನ್ನತ ತರಬೇತಿ ವ್ಯವಸ್ಥೆಯಾಗಿದೆ.

‘ಸೂಪರ್ 36’ ರಾಜ್ಯ ಮಟ್ಟದ ಬ್ಯಾಚ್: ರಾಜ್ಯದ ವಿವಿಧ ಮೂಲೆಗಳಿಂದ ಆಯ್ಕೆಯಾಗುವ ಅತ್ಯಂತ ಪ್ರತಿಭಾವಂತ 36 ವಿದ್ಯಾರ್ಥಿಗಳಿಗೆ ಈ ಬ್ಯಾಚ್‌ನಲ್ಲಿ ಅವಕಾಶ ನೀಡಲಾಗುತ್ತದೆ. 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲಾ ಪಠ್ಯದ ಜೊತೆಗೆ, JEE/NEET ಗೆ ಸಂಬಂಧಿಸಿದ ಗಣಿತ ಮತ್ತು ವಿಜ್ಞಾನದ ಸಂಕೀರ್ಣ ವಿಷಯಗಳನ್ನು ಸರಳವಾಗಿ ಬೋಧಿಸಲಾಗುತ್ತದೆ. ಕಾಲೇಜು ಹಂತದ ಅನುಭವಿ ಉಪನ್ಯಾಸಕರು ಈ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಭದ್ರ ಬುನಾದಿ ಹಾಕಿಕೊಡಲಿದ್ದಾರೆ.‘ಸ್ಟೇಟ್‌ ಟಾಪರ್ಸ್’ ಬ್ಯಾಚ್: ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರುವ ರಾಜ್ಯದ ವಿವಿಧ ಜಿಲ್ಲೆಗಳ ಟಾಪ್ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬ್ಯಾಚ್ ರೂಪಿಸಲಾಗಿದೆ. ಈ ಯೋಜನೆಯಡಿ ಎಸ್ಎಸ್ಎಲ್ಸಿ (State Board) ಪರೀಕ್ಷೆಯಲ್ಲಿ ಶೇ. 96ಕ್ಕಿಂತ ಹೆಚ್ಚುಅಂಕ ಅಥವಾ CBSE/ICSE ಪರೀಕ್ಷೆಯಲ್ಲಿ ಶೇ. 94ಕ್ಕಿಂತ ಹೆಚ್ಚುಅಂಕ ಪಡೆದ ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದ ಮೇಲೆ 1 ಲಕ್ಷದಿಂದ 2.75 ಲಕ್ಷ ರು.ವರೆಗೆ ವಿದ್ಯಾರ್ಥಿವೇತನದ ನೆರವು ಸಿಗಲಿದೆ. ಇಲ್ಲಿ ಕೇವಲ ಬೋಧನೆಯಷ್ಟೇ ಅಲ್ಲದೆ, ರಾಷ್ಟ್ರೀಯ ಮಟ್ಟದ JEE/NEET ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ವಿಶೇಷ ಕಾರ್ಯತಂತ್ರಗಳು ಮತ್ತು ನಿರಂತರ ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಆಡಳಿತ ಮಂಡಳಿ ಆಶಯ: ಈ ವಿಶೇಷ ಯೋಜನೆ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ‘ನಮ್ಮ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿಭಾವಂತ ಮಕ್ಕಳುಆರ್ಥಿಕ ಅಥವಾ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಅವಕಾಶ ವಂಚಿತರಾಗಬಾರದು. ಅವರನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧಪಡಿಸುವುದೇ ನಮ್ಮ ಗುರಿ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪ್ರವೇಶಾತಿ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿ ವೇತನದ ಮಾಹಿತಿಗಾಗಿ ಮೊ: 7259573345 ಸಂಪರ್ಕಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10ರಂದು ಕಾರ್ಕಳದಲ್ಲಿ ‘ನಮನ’ ಚಿತ್ರಕಲಾ ಪ್ರದರ್ಶನ
ಸಂಘಟನೆಗಳಿಂದ ಸ್ಥಿರವಾದ ಯಕ್ಷಗಾನ ಕಲೆ: ಎಡನೀರು ಶ್ರೀ