ರಾಮನಗರ: ಬಿಡದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಎಸ್.ಜೀವನ್ ಅಧ್ಯಕ್ಷರಾಗಿ ಮತ್ತು ಕೆ.ಪಿ.ಬಾಲಕೃಷ್ಣ ಉಪಾಧ್ಯಕ್ಷರಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಜೀವನ್ ಬಾಬು, ಬಾಲಕೃಷ್ಣ, ವಿ.ಆರ್.ಮಹೇಶ್, ಸಂತೋಷ್, ದೊಡ್ಡರೇವಯ್ಯ, ಸತ್ಯಮೂರ್ತಿ ಮಧುಕುಮಾರ್, ಆರ್.ರಮೇಶ್, ಕೆಂಗಲ್ ಹನುಮಂತಯ್ಯ, ಅನ್ನಪೂರ್ಣೇಶ್ವರಿ, ಶೋಭಾ, ನಿತ್ಯಾನಂದ ಭಾಗವಹಿಸಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎಸ್. ಜೀವನ್, ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ ಸ್ಥಾನ ಜವಾಬ್ದಾರಿಯ ಹುದ್ದೆಯಾಗಿದೆ. ಅದನ್ನರಿತು ಎಲ್ಲ ನಿರ್ದೇಶಕರ ಸಹಕಾರದಲ್ಲಿ ಸಂಘದ ಪ್ರಗತಿ ಮತ್ತು ರೈತರಿಗೆ ಸಾಲ, ರಸಗೊಬ್ಬರ ಸೌಲಭ್ಯ ಕಲ್ಪಿಸುವ ಮೂಲಕ ರೈತಸ್ನೇಹಿ ಆಡಳಿತ ನೀಡುತ್ತೇವೆ. ನನ್ನನ್ನು ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ಪಕ್ಷದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಒಗ್ಗಟ್ಟಿದ್ದರೆ ಬಲ ಇರುತ್ತದೆ ಎಂಬುದನ್ನು ಬಿಡದಿ ಸೊಸೈಟಿ ಚುನಾವಣೆ ಸಾಬೀತು ಪಡಿಸಿದೆ. ಸೊಸೈಟಿಗಾಗಿ ನಾವೇನು ಮಾಡಿದ್ದೇವೆ ಎಂಬುದನ್ನು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕಿದೆ. ಮತದಾರರ ವಿಶ್ವಾಸದ ಮೇಲೆ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ ಎಂದು ಹೇಳಿದರು.
27ಕೆಆರ್ ಎಂಎನ್ 2.ಜೆಪಿಜಿ