ಹಾನಗಲ್ಲ: ಸಮಾಜದ ಅಂಕು, ಡೊಂಕು ತಿದ್ದಲು ಅವತರಿಸಿದ ಯೇಸುಕ್ರಿಸ್ತ ಸರ್ವಕಾಲಕ್ಕೂ ಪ್ರಸ್ತುತ. ಪ್ರೀತಿ, ತ್ಯಾಗ ಮತ್ತು ದಯಾಗುಣದ ಕ್ರಿಸ್‌ಮಸ್ ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಹೆಚ್ಚಿಸಲಿ ಎಂದು ಶಾಸಕ ಶ್ರೀನಿವಾಸ ಮಾನೆ ಶುಭ ಹಾರೈಸಿದರು. ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಮತ್ತು ಲೋಯಲ ವಿಕಾಸ ಕೇಂದ್ರದ ಆಶ್ರಯದಲ್ಲಿ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿದ ಅವರು ಜಗತ್ತಿನಲ್ಲಿ ಶಾಂತಿ, ಸಮಾಧಾನ ಸ್ಥಾಪಿಸಲು ಯೇಸುಕ್ರಿಸ್ತನ ಸಂದೇಶಗಳು ಪೂರಕವಾಗಿವೆ. ಕ್ರಿಸ್‌ಮಸ್ ಶುಭ ಸಂದರ್ಭದಲ್ಲಿ ಎಲ್ಲೆಡೆ ಶಾಂತಿ, ಪ್ರೀತಿ, ಸಹೋದರತ್ವ, ಮಾನವೀಯ ಮೌಲ್ಯಗಳು ನೆಲೆಸಲಿ, ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಸದ್ಭಾವನೆಯನ್ನು ಮೂಡಿಸಲಿ ಎಂದರು. ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ, ಫಾದರ್ ವಿನ್ಸಂಟ್ ಜೇಸನ್, ಜೇಸನ್ ಪಾಯ್ಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಕೆಡಿಪಿ ಸದಸ್ಯ ರಜಕುಮಾರ ಜೋಗಪ್ಪನರ, ಮುಖಂಡರಾದ ಭರಮಣ್ಣ ಶಿವೂರ, ವಿರುಪಾಕ್ಷಪ್ಪ ತಳವಾರ, ರವಿ ದೇಶಪಾಂಡೆ, ಉಮೇಶ ಮಾಳಗಿ, ರಾಜಕುಮಾರ ಶಿರಪಂತಿ, ಲಿಂಗರಾಜ ಮಡಿವಾಳರ, ವಸಂತ ವೆಂಕಟಾಪೂರ, ರಾಮಚಂದ್ರ ಕಲ್ಲೇರ, ಶಿವು ಭದ್ರಾವತಿ, ಪರಶುರಾಮ ಮಡಿವಾಳರ, ನಾಗರಾಜ ಗಾಜಿಪೂರ, ಸುರೇಶ ನಾಗಣ್ಣನವರ, ರಾಘವೇಂದ್ರ ಹಾನಗಲ್, ರಫೀಕ್ ಉಪ್ಪುಣಸಿ, ರಾಜಕುಮಾರ ಹಲಸೂರ, ಬಸವರಾಜ ಹುರುಳಿಕುಪ್ಪಿ ಸೇರಿದಂತೆ ಇನ್ನೂ ಹಲವರು ಇದ್ದರು.