- ಹರಿಹರ ನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ
- - - ಕನ್ನಡಪ್ರಭ ವಾರ್ತೆ ಹರಿಹರಹರಿಹರ: ವಿವಿಧ ಕಳವು ಪ್ರಕರಣಗಳನ್ನು ಭೇದಿಸಿದ ಹರಿಹರ ನಗರ ಠಾಣೆ ಪೊಲೀಸರು ₹5,85,000 ಬೆಲೆ ಬಾಳುವ ಬಂಗಾರದ ಆಭರಣ ಹಾಗೂ 9 ಮೊಬೈಲ್ ಫೋನ್‍ಗಳು ಹಾಗೂ 3 ಕುರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪವನ್ ಜೆ., ದಾದಾಪೀರ್, ಮನು ಆರ್., ಜಗನ್ನಾಥ ಎಸ್., ಅಬ್ರಾರ್, ಸುಹೇಲ್ ಖಾನ್, ಜಾನ್ಸನ್ ಸಿ.ಜೆ. ಬಂಧಿತ ಆರೋಪಿಗಳು. ಕಳೆದ ವರ್ಷ ಮೇ ತಿಂಗಳಲ್ಲಿ ಲೋಹಿತ ಪಾಟೀಲ್ ಎನ್.ಜಿ. ಎನ್ನುವವರು ಫ್ಲಿಪ್ ಕಾರ್ಟ್ ಗೋಡೌನ್‌ನಿಂದ ಮೊಬೈಲ್‍ಗಳು ಕಳವಾಗಿದ್ದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ಪವನ್ ಜೆ. ಎಂತಾತನನ್ನು ವಶಕ್ಕೆ ಪಡೆದು, ಆರೋಪಿಯಿಂದ ₹1,66,000 ಬೆಲೆಯ 9 ವಿವೋ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಡಿಸೆಂಬರ್‌ನಲ್ಲಿ ಮಹಲಿಂಗಪ್ಪ ಬಡಾವಣೆಯ ರೇಷ್ಮಾಬಾನು ಎಂಬವರ ಬಂಗಾರದ ಆಭರಣಗಳು ಕಳವಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀಗೆಬಾವಿ ಗ್ರಾಮದ ದಾದಾಪೀರ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು, ₹2,18,000 ಬೆಲೆಯ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಕುರಿಗಳೂ ಪತ್ತೆ:ಅಪರಾಧ ವಿಭಾಗದ ಸಿಬ್ಬಂದಿ ಇತ್ತೀಚೆಗೆ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡುಬಂದ ಶಿವಮೊಗ್ಗ ಮೂಲದ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ 3 ಕುರಿಗಳನ್ನು ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದು ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಮನು ಆರ್., ಜಗನ್ನಾಥ ಎಸ್., ಅಬ್ರಾರ್, ಸುಹೇಲ್ ಖಾನ್ ಎಂಬವರನ್ನು ವಶಕ್ಕೆ ಪಡೆದು, ₹60,000 ಬೆಲೆಯ 3 ಕುರಿಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರಾಣಿ ಡಿಕ್ಸನ್ ಎನ್ನುವವರು ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡ ಪೊಲೀಸರು ನಗರದ ಜಾನ್ಸನ್ ಸಿ.ಜೆ. ಹೆಸರಿನ ಆರೋಪಿಯನ್ನು ಬಂಧಿಸಿ, ₹1,01,000 ಬೆಲೆಯ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.ಹರಿಹರ ನಗರ ಠಾಣೆ ಪಿಐ ಎಸ್.ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐ.ಗಳಾದ ಜಿ.ಎಸ್. ವಿಜಯ್, ಶ್ರೀಪತಿ ಗಿನ್ನಿ, ಅಪರಾಧ ವಿಭಾಗದ ನಾಗರಾಜ ಸುಣಗಾರ, ಸಿದ್ದೇಶ ಎಚ್., ರವಿ ಆರ್., ರುದ್ರಸ್ವಾಮಿ ಕೆ.ಸಿ., ಹನುಮಂತ ಎಸ್. ಗೋಪನಾಳ, ರವಿನಾಯ್ಕ್, ಸಿದ್ದರಾಜು, ರವಿ ಕೆ., ರಂಗನಾಥ ಆರೋಪಿಗಳ ಪತ್ತೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.
- - -(** ಈ ಪೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)-25ಎಚ್‍ಆರ್‍ಆರ್01:
ಹರಿಹರದ ನಗರ ಠಾಣೆಯಲ್ಲಿ ವಿವಿಧ ದೂರುಗಳನ್ನು ಆಧರಿಸಿ, ತನಿಖೆ ನಡೆಸಿದ ಪೊಲೀಸರು ಬಂಗಾರ, ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದರು.