ತೆಂಕನಿಡಿಯೂರು ಕಾಲೇಜಿನಲ್ಲಿ ಜಾಬ್‌ ಕಾರ್ಡ್ ನೋಂದಣಿ

KannadaprabhaNewsNetwork |  
Published : Oct 20, 2026, 02:15 AM IST
15ಜಾಬ್‌ಕಾರ್ಡ್‌ | Kannada Prabha

ಸಾರಾಂಶ

ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸೆ ಕೋಶ, ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ವಿಭಾಗ ಹಾಗೂ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೋಶದ ಜಂಟಿ ಆಶ್ರಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜಾಬ್ ಕಾರ್ಡ್ ನೋಂದಣಿ ಮಾಡಿಸಿ, ವಿತರಿಸಲಾಯಿತು.

ಉಡುಪಿ: ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸೆ ಕೋಶ, ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ವಿಭಾಗ ಹಾಗೂ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೋಶದ ಜಂಟಿ ಆಶ್ರಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜಾಬ್ ಕಾರ್ಡ್ ನೋಂದಣಿ ಮಾಡಿಸಿ, ವಿತರಿಸಲಾಯಿತು.

ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಲಹೆಗಾರರು ಹಾಗೂ ತರಬೇತುದಾರರಾದ ಲಕ್ಷ್ಮೀ ಸುವರ್ಣ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಾರ್ಡ್ ನೋಂದಣಿ ಪ್ರಕ್ರಿಯೆ, ಅದರ ಪ್ರಾಮುಖ್ಯತೆ ಮತ್ತು ಸರಕಾರದಿಂದ ಲಭ್ಯವಿರುವ ಉದ್ಯೋಗಾವಕಾಶ ಹಾಗೂ ತರಬೇತಿ ಯೋಜನೆಗಳ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯೋಗವಿನಿಮಯ ಕೇಂದ್ರ ಇದರ ಸಹಾಯಕರಾದ ಲತಾ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿಂದು ಟಿ., ಸಹ ಪ್ರಾಧ್ಯಾಪಕರಾದ ಉಮೇಶ್ ಪೈ, ಉಪನ್ಯಾಸಕರಾದ ಚೈತ್ರ ಹಾಗೂ ಉದ್ಯೋಗ ಮಾಹಿತಿ ಅಧಿಕಾರಿಗಳಾದ ಮರ್ವಿನ್ ಡಿಸೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶುಭಲಕ್ಷ್ಮಿ ನಿರೂಪಿಸಿದರು. ಶಿಲ್ಪಪ್ರಿಯ ನೆರೆದವರನ್ನು ಸ್ವಾಗತಿಸಿದರು ಹಾಗೂ ನವೀನ ಜಿ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುರಾಲೋಚನೆಯ ಸಂಹಾರವೇ ನವರಾತ್ರಿ ಸಂದೇಶ: ಜಗದೀಶ ಶೆಟ್ಟರ
ಇಡೀ ಸಮಾಜದ ಪ್ರಗತಿ, ಸೃಜನಶೀಲತೆಯ ಶಕ್ತಿ: ಉಮಾಶ್ರೀ