ಕನ್ನಡಪ್ರಭ ವಾರ್ತೆ ರಾಯಚೂರು
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಶೇ.27.8ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನರಿದ್ದಾರೆ. ಈ ಯುವಜನತೆಗಾಗಿ ಉದ್ಯೋಗ ಆವಿಷ್ಕಾರ ಮತ್ತು ಕಲಿಕ ಜೊತೆ ಕೌಶಲ್ಯ ಕಾರ್ಯಕ್ರಮಗಳಡಿ ಸುಮಾರು 25,000 ಯುವಕರಿಗೆ ಹಾಗೂ ಸಿಡಾಕ್ ಮೂಲಕ 1,000 ಜನರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.
ಸರ್ಕಾರವು ಮೇ 23ರವರೆಗೆ ಜೋಳ ಖರೀದಿಗೆ ಈಗಾಗಲೇ 358 ಕೋಟಿ ರು. ಪಾವತಿಸಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ 1,000 ಕೋಟಿ ಬಾಕಿ ಅನುದಾನ ಬಿಡುಗಡೆಯಾಗದಿರುವುದರಿಂದ ಇಡೀ ರಾಜ್ಯ ಮಟ್ಟದಲ್ಲಿ ₹109 ಕೋಟಿ ಪಾವತಿ ಬಾಕಿಯಾಗಿದೆ. ಆಹಾರ ಸಚಿವರು ದೆಹಲಿಗೆ ತೆರಳಿ ಕೇಂದ್ರ ದೊಂದಿಗೆ ಮಾತುಕತೆ ನಡೆಸುತ್ತಿದ್ದು, ರಾಜ್ಯ ಸರ್ಕಾರದಿಂದಲೂ ರೈತರ ಬಾಕಿ ಹಣವನ್ನು ಶೀಘ್ರ ಪಾವತಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಏಮ್ಸ್ ಮಂಜೂರು ವಿಚಾರದಲ್ಲಿಯೂ ಶೀಘ್ರದಲ್ಲಿಯೇ ಕೇಂದ್ರಕ್ಕೆ ನಿಯೋಗವನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.ಅಕ್ರಮ ನೀರಾವರಿ ಕಡಿವಾಣಕ್ಕೆ ವಿಶೇಷ ಮಸೂದೆ: ಭೋಸರಾಜು
ಕೊನೆಭಾಗದ ರೈತರಿಗೆ ನಿರೋಧಗಿಸಲು ನಿರಂತರ ಮುನ್ನಚ್ಚರಿಕೆ ಕ್ರಮವಹಿಸುತ್ತಿದ್ದರೂ ಸಹ ಅಕ್ರಮ ನೀರಾವರಿಯಿಂದಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ, ಟಿಎಲ್‌ಬಿಸಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶವನ್ನು ಅಕ್ರಮ ನೀರಾವರಿ ಮಾಡಿಕೊಂಡು ಬಲಭಾಗಕ್ಕೂ ವಿಸ್ತರಿಸಲಾಗಿದೆ, ಅನಧಿಕೃತವಾಗಿ ಕೆರೆಗಳ ನಿರ್ಮಾಣ, ಪೈಪ್‌ಲೈನ್, ಪಂಪ್‌ಸೆಟ್‌ಗಳ ಮುಖಾಂತರ ಲಕ್ಷಾಂತರ ಎಕರೆಯಲ್ಲಿ ಅಕ್ರಮ ನೀರಾವರಿ ಪ್ರದೇಶವನ್ನಾಗಿಸಲಾಗಿದೆ ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಅಕ್ರಮ ತಡೆಯುವ ಮಸೂದೆಯನ್ನು ರೂಪಿಸಿ ಜಾರಿಗೊಳಿಸುವುದರ ಕುರಿತು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದ್ದು, ಅಕ್ರಮ ನೀರಾವರಿಯಿಂದ ನೀರು ಸಮರ್ಪಕ ತಲುಪಿಸಲು ಸಾಧ್ಯವಾಗದಕ್ಕೆ ವಿಶೇಷ ಕಾಯ್ದೆ ರೂಪಿಸಿ ತಡೆಯಲು ಸಿಎಂಗೆ ಮನವಿ ಮಾಡಲಾಗಿದೆ ಎಂದದು ಹೇಳಿದರು.