ಹೊಸಕೋಟೆ: ಪ್ರಸ್ತುತ ಜಗತ್ತಿನಲ್ಲಿ ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸುವುದು ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರು ಹಬ್ಬ ಹರಿದಿನಗಳಲ್ಲಿ ಮನೆಯ ಹಿತ್ತಲು, ಸುತ್ತಮುತ್ತ ಇರುವ ಖಾಲಿ ಸ್ಥಳಗಳಲ್ಲಿ ಬಳಿ ಗಿಡ ನೆಟ್ಟು ಮನೆಯಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿ ಎಂದು ಕಾಳಪ್ಪನಹಳ್ಳಿ ಭದ್ರಕಾಳಿ ದೇವಾಲಯದ ಧರ್ಮದರ್ಶಿ ನಾಗರಾಜಶಾಸ್ತ್ರಿ ತಿಳಿಸಿದರು.

ತಾಲೂಕಿನ ಕಾಳಪ್ಪನಹಳ್ಳಿ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಅಮಾವಾಸ್ಯೆ ವಿಶೇಷ ಪೂಜಾ ಕಾರ‍್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಗಿಡಗಳನ್ನು ನೆಟ್ಟು ಬೆಳೆಸಿದರೆ ಸಾಕಾಗುವುದಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಪೋಷಿಸಬೇಕು. ಇರುವ ಮರಗಳನ್ನು ಕಡಿಯದೇ ಉಳಿಸಿ ಬೆಳೆಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚಾಗಿ ಮರಗಳನ್ನು ಕಡೆಯಲಾಗುತ್ತಿದೆ ಎಂದು ವಿಷಾದಿಸಿದರು.ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯವಾಗಿದೆ. ಪ್ರಸ್ತುತ ರಾಜ್ಯವಷ್ಟೇ ಅಲ್ಲದೆ ದೇಶ ಕೂಡ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮರಗಳಿದ್ದರೆ ಮೋಡಗಳನ್ನು ಆಕರ್ಷಣೆ ಮಾಡಿ ಮಳೆ ಸುರಿಯಲು ಸಾಧ್ಯವಾಗುತ್ತದೆ. ಆದ್ದರಿಂದ ದುಂದುವೆಚ್ಚ ಮಾಡಿ ಮನೆಮಂದಿಯೆಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಅಂತಹ ಸಮಯದಲ್ಲಿ ಪ್ರತಿ ಮನೆಗೆ ಎರಡೆರಡು ಗಿಡಗಳನ್ನು ನೆಟ್ಟರೆ ಪ್ರಕೃತಿಯನ್ನು ಉಳಿಸಿ ಸಕಾಲಕ್ಕೆ ಮಳೆ ಬೆಳೆ ನಿರೀಕ್ಷಣೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಬಸವರಾಜಾರಾಧ್ಯ, ಮಹೇಶ್, ವಿನಯ್ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.