ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಆರಂಭೋತ್ಸವದ ಸವಿ ನೆನಪಿಗೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ನಮ್ಮ ಸುತ್ತ-ಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ ಆರೋಗ್ಯವಂತ ಸಮಾಜ ಕಟ್ಟಲು ಅನೇಕ ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ ಎಂದರು.ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯ. ಲಯನ್ಸ್ ಕ್ಲಬ್ ವತಿಯಿಂದ ಆರೋಗ್ಯ ಉಚಿತ ಶಿಬಿರಗಳನ್ನು, ದುಶ್ಚಟಗಳಿಂದ ಆಗುವ ಪರಿಣಾಮಗಳು, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ, ರಾಸಾಯನಿಕ ವಸ್ತುಗಳು ಬಳಕೆಯಿಂದ ಹೆಚ್ಚುತ್ತಿರುವ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಆನಂದ ಟೋಣಪಿ, ಕಾರ್ಯದರ್ಶಿ ವಿನೋದ ಕನಮಡಿ, ಖಜಾಂಚಿ ಅಶೋಕ ಹೊಸೂರ, ಶಶಿಕಾಂತ ಹುಲಕುಂದ, ಮೋಹನ ಕಾಂಬಳೆ, ವೈಭವ ಐಹೊಳೆ, ರೆಹಾನ್ ಡಾಂಗೆ, ಅನಿಲ ಪಾಟೀಲ, ಬಸವರಾಜ ಬಾವಣ್ಣವರ, ಕಿರಣ ಶಿರಗುಪ್ಪಿ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಮಹೇಶ್ ಕಾಪಸೆ, ಡಾ.ಜಿ.ಎಸ್.ಪಾಟೀಲ, ಡಾ.ಸಂಗಮೇಶ ಮಮದಾಪುರ, ಡಾ.ಸಿ.ಎಸ್.ಪಾಟೀಲ, ಡಾ.ಸಂಜು ಕುಮಾರ ಗುಂಜಿಗಾವಿ ಸೇರಿದಂತೆ ಅಥಣಿ ಲಯನ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು. ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಇರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳನ್ನು ಮತ್ತು ಕಾರ್ಯಕ್ರಮಗಳ ನಡೆಸಲು ಸಹಕಾರಿಯಾಗಿದೆ. ಮುಂಬರುವ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಪರಿಸರ ಸೇರಿದಂತೆ ಇನ್ನಿತರ ವಲಯಗಳಲ್ಲಿ ಲಯನ್ಸ್ ಕ್ಲಬ್ ವಿವಿಧ ಸೇವೆಗಳನ್ನು ಸಲ್ಲಿಸಲಿದೆ.
-ರಮೇಶ ಬುಲಬುಲೆ, ಅಥಣಿ ಲಯನ್ಸ್ ಕ್ಲಬ್ ಅಧ್ಯಕ್ಷರು.