ಕನ್ನಡಪ್ರಭ ವಾರ್ತೆ ಮಂಡ್ಯ
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಮಂಡ್ಯ ವಿವಿಯ ಎಂ.ಸುಶಾಂತ್ ಹಾಗೂ ಅನಿಕೇತನ ಪದವಿ ಪೂರ್ವ ಕಾಲೇಜಿನ ಮನಿಷಾ ಡಿರಾಜ್ ಮತ್ತು ಎನ್ ಸಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ತಾಲೂಕಿನ ಯಲಿಯೂರು ಗ್ರಾಮದ ಅನಿಕೇತ ಪದವಿ ಪೂರ್ವ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು 14 ಕೆಎಆರ್ ಬಿಎನ್ ಎನ್‌ಸಿಸಿಯ ಸುಬೇದಾರ್ ಮೇಜರ್ ಸೆಬಾಸ್ಟಿನ್ ಡೇನಿಯಲ್ ಹಾಗೂ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಮತ್ತು ಪ್ರಾಂಶುಪಾಲ ಡಾ.ರಾಮಲಿಂಗಯ್ಯ ಉದ್ಘಾಟಿಸಿದರು.
ನಂತರ ಡೇನಿಯಲ್ ಅವರು ಆರ್ ಡಿಸಿ ಆಂಡ್ ಟಿಎಸ್‌ಸಿ ಸಾಧನೆ ಬಗ್ಗೆ ವಿವರಿಸಿ, ಇಂದಿನ ಎಲ್ಲಾ ಯುವಕರು ಸೇನೆ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಹಾಗೂ ಶಿಸ್ತಿನ ಜೀವನ ರೂಡಿಸಿಕೊಳ್ಳಲು ಎನ್ ಸಿಸಿ ಸೇರಬೇಕು ಎಂದರು.ಕಾರ್ಯಕ್ರಮದಲ್ಲಿ ಟಿಎಸ್‌ಸಿ ತಲ್ ಸೇನಾ ಕ್ಯಾಂಪ್ ನವದೆಹಲಿ ಭಾಗವಹಿಸಿದ ಸಂಜನಾ, ಭಾನುಪ್ರಿಯಾ ಹಾಗೂ ತೇಜಸ್ವಿನಿ ಅವರನ್ನು ಅಭಿನಂದಿಸಲಾಯಿತು. ದೆಹಲಿ ಕರ್ತವ್ಯ ಪಥ ಹಾಗೂ ರಾಜ್ ಪಥದಲ್ಲಿ ಭಾಗವಹಿಸಿದ ಸುಶಾಂತ್ ಮತ್ತು ಮನಿಷಾ ಡಿ ರಾಜ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ.ರಾಮಲಿಂಗಯ್ಯ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಎನ್ ಸಿಸಿ ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಎನ್ ಸಿಸಿ ತರಬೇತಿ ಹಾಗೂ ವಿವಿಧ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಇದಕ್ಕೆ ಸಂಸ್ಥೆ ಹಾಗೂ ಆಡಳಿತ ಮಂಡಳಿ ಸಹಕಾರವಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಎನ್ ಸಿಸಿ ಅಧಿಕಾರಿ ಕೆ.ಆರ್.ರಾಜು, ದೈಹಿಕ ಶಿಕ್ಷಣ ನಿರ್ದೇಶಕ ಶಿವಕುಮಾರ್ , ಎನ್ ಸಿಸಿ ತರಬೇತುದಾರ ದರ್ಶನ್ ಸೇರಿದಂತೆ ಹಲವರು ಹಾಜರಿದ್ದರು.
11ನೇ ಬಾರಿಗೆ ಅಮೆರಿಕಾಗೆ ತೆರಳಿದ ದರ್ಶನ್ ಪುಟ್ಟಣ್ಣಯ್ಯಪಾಂಡವಪುರ:
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾಗಿ ಎರಡು ವರ್ಷ ಮುಗಿಯುವಷ್ಟರಲ್ಲಿ 11ನೇ ಬಾರಿಗೆ ಅಮೆರಿಕಾಗೆ ತೆರಳಿದ್ದಾರೆ.ಚುನಾವಣೆಗೂ ಮುನ್ನ ದರ್ಶನ್ ಪುಟ್ಟಣ್ಣಯ್ಯ ಅವರು, ಅಮೆರಿಕಾದಲ್ಲಿನ ತನ್ನ ಎಲ್ಲಾ ವ್ಯವಹಾರ ಮುಗಿಸಿ ಭಾರತಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತೇನೆ ಎಂದು ಮತದಾರಿಗೆ ವಾಗ್ದಾನ ಮಾಡಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕಯಾಗಿ ಎರಡು ವರ್ಷ ಕಳೆಯುತ್ತಿದ್ದರೂ ಸಹ ಶಾಸಕರು ತಮ್ಮ ಕುಟುಂಬವನ್ನು ಭಾರತಕ್ಕೆ ಕರೆದುಕೊಂಡು ಬರಲಿಲ್ಲ.
ಹೆಂಡತಿ ಮಕ್ಕಳನ್ನು ನೋಡಲು ಪದೇಪದೇ ಅಮೆರಿಕಾಗೆ ತೆರಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದು ಅವರ ಆರೋಗ್ಯ ವಿಚಾರಿಸಲು ಪದೇಪದೇ ತೆರಳುತ್ತಿದ್ದಾರೆ. ಇದರಿಂದ ಕ್ಷೇತ್ರದಿಂದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಭಾಗವಹಿಸ ಹಾಗೂ ಜನರ ಕಷ್ಟಕಾರ್ಪಣಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.ಶಾಸಕ ದರ್ಶನ್ ಅಮೆರಿಕಾಗೆ ತೆರಳಿರುವುದರಿಂದ ಇದೇ ಫೆ.18ರಂದು ನಡೆಯುವ ಅವರ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೂ ಗೈರಾಗುವ ಸಾಧ್ಯತೆಗಳಿವೆ. ಕ್ಷೇತ್ರದ ಶಾಸಕರು ಪದೇಪದೇ ಅಮೆರಿಕಾ ತೆರಳುತ್ತಿರುವುದಕ್ಕೆ ರೈತಸಂಘದ ಕೆಲವು ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ.