ಮಳೆ, ಬೆಳೆ ಹೊತ್ತು ತರುವ ಜೋಕುಮಾರ ಸ್ವಾಮಿ

KannadaprabhaNewsNetwork |  
Published : Sep 22, 2026, 02:30 AM IST
ಪೊಟೊ- ಲಕ್ಷ್ಮೇಶ್ವರ ಪಟ್ಟಣದಲ್ಲಿ ಜೋಕುಮಾರ ಸ್ವಾಮಿಯ ಸೇವೆಯಲ್ಲಿ ನಿರತರಾಗಿರುವ ರೇಣುಕಾ ಸುಣಗಾರ ಕುಟುಂಬ ವರ್ಗ | Kannada Prabha

ಸಾರಾಂಶ

ಕನ್ನಡ ನಾಡಿನ ಜಾನಪದ ಸಾಹಿತ್ಯ ವಿಶಿಷ್ಟವಾಗಿದೆ. ಶಿವನ ಕುಮಾರ ಜೋಕುಮಾರ ಸ್ವಾಮಿಯು ಮಳೆ, ಬೆಳೆ ಬರುವಂತೆ ಮಾಡುವ ಸ್ವಾಮಿಯಾಗಿ ಜನಪದ ಸಾಹಿತ್ಯವು ಗುರುತಿಸುತ್ತದೆ. ಗಣೇಶನ ಹಬ್ಬ ಮುಗಿದ ತಕ್ಷಣವೇ ಬರುವ ಜೋಕುಮಾರ ಸ್ವಾಮಿಯು ಭೂಮಿಯಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಹೊತ್ತು ದೇವರಲ್ಲಿಗೆ ಹೋಗಿ ಭಿನ್ನವಿಸುವ ವಿಶಿಷ್ಟ ಕಥಾನಕದ ಪುರುಷನೇ ಜೋಕುಮಾರ ಸ್ವಾಮಿ.

ಭೂಮಿಯಲ್ಲಿನ ಕಷ್ಟಗಳನ್ನು ದೇವರಲ್ಲಿ ಭಿನ್ನವಿಸುವ ವಿಶಿಷ್ಟ ಕಥಾನಕದ ಪುರುಷ

ಅಶೋಕ ಡಿ. ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಕನ್ನಡ ನಾಡಿನ ಜಾನಪದ ಸಾಹಿತ್ಯ ವಿಶಿಷ್ಟವಾಗಿದೆ. ಶಿವನ ಕುಮಾರ ಜೋಕುಮಾರ ಸ್ವಾಮಿಯು ಮಳೆ, ಬೆಳೆ ಬರುವಂತೆ ಮಾಡುವ ಸ್ವಾಮಿಯಾಗಿ ಜನಪದ ಸಾಹಿತ್ಯವು ಗುರುತಿಸುತ್ತದೆ. ಗಣೇಶನ ಹಬ್ಬ ಮುಗಿದ ತಕ್ಷಣವೇ ಬರುವ ಜೋಕುಮಾರ ಸ್ವಾಮಿಯು ಭೂಮಿಯಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಹೊತ್ತು ದೇವರಲ್ಲಿಗೆ ಹೋಗಿ ಭಿನ್ನವಿಸುವ ವಿಶಿಷ್ಟ ಕಥಾನಕದ ಪುರುಷನೇ ಜೋಕುಮಾರ ಸ್ವಾಮಿ.

ದೈವಿಪುರುಷ ಜೋಕುಮಾರ ಸ್ವಾಮಿಯು ಕೇವಲ 7 ದಿನಗಳ ಆಯುಸ್ಸನ್ನು ಪಡೆದು ಭೂಮಿಗೆ ಬರುತ್ತಾನೆ. ಅತ್ಯಂತ ಸುರದ್ರುಪಿಯಾದ ಜೋಕುಮಾರ ಸ್ವಾಮಿಯು ಬಾಲ್ಯದಲ್ಲಿ ಬೆಣ್ಣೆಯನ್ನು ತಿನ್ನುತ್ತ ಸುಖದಿಂದ ಬೆಳೆಯುತ್ತಾನೆ. ಯೌವ್ವನದಲ್ಲಿ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗುತ್ತಾನೆ. ಹೀಗೆ ಯೌವ್ವನದಲ್ಲಿ ಅಲೆದಾಡುತ್ತಿರುವ ಜೋಕುಮಾರ ಸ್ವಾಮಿಯು ಭೂಮಿಯ ಮೇಲಿನ ಜನರ ಕಡು ಕಷ್ಟಗಳನ್ನು ನೋಡುತ್ತಾ ಲೋಕ ಸಂಚಾರ ಮಾಡಿ ಕೊನೆಗೆ ದುರಂತ ಅಂತ್ಯ ಕಾಣುವ ಮೂಲಕ ಜಾನಪದ ಕಥೆಯು ಕೊನೆಗೊಳ್ಳುತ್ತದೆ. ಹೀಗೆ ಜೋಕುಮಾರ ಸ್ವಾಮಿಯ ಚರಿತ್ರೆಯು ಇತಿಹಾಸ ಪುರಾಣಗಳಿಂದ ತಿಳಿದು ಬರುತ್ತದೆ. ಲೋಕ ಸಂಚಾರ ಮಾಡಿ ದೇವ ಲೋಕಕ್ಕೆ ಪ್ರಯಾಣ ಬೆಳೆಸಿ ಲೋಕದೊಡೆಯ ಶಿವನಿಗೆ ಭೂಮಿಯ ಮೇಲಿನ ಕಷ್ಟಗಳನ್ನು ಚಿತ್ರಿಸಿ, ರೈತರು, ಪಶು ಪಕ್ಷಿಗಳು ಮಳೆ ಇಲ್ಲದೆ ಪಡುವ ಪಾಡು ಚಿತ್ರಿಸುತ್ತಾನೆ. ರೈತರ ಹಾಗೂ ಪ್ರಾಣಿಗಳ ಕಷ್ಟ ನೀಗಿಸಲು ಶಿವನು ಮಳೆ, ಬೆಳೆ ಬರುವಂತೆ ಮಾಡುತ್ತಾನೆ, ಗೊಡ್ಡುಗಳು ಹೈನಾಗುತ್ತವೆ. ದೊಡ್ಡ ಮಳೆಗಳು ಬಂದು ಒಡ್ಡುಗಳು ಒಡೆದು ರೈತರ ಬದುಕು ಹಸನಾಗಲಿ ಎನ್ನುವ ಜಾನಪದ ಕಥೆಯು ಜೋಕುಮಾರ ಸ್ವಾಮಿಯ ಕಥೆ ಹೇಳುತ್ತದೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ರೇಣವ್ವ ಸುಣಗಾರ, ಗಿರಿಜವ್ವ ಬಾರಕೇರ, ರೇಣುಕಾ ಸುಣಗಾರ ಹಾಗೂ ಗೀತಾ ಬಾರಕೇರ ಜೋಕುಮಾರ ಸ್ವಾಮಿಯ ಸೇವೆ ಮಾಡುತ್ತಾ ಜನಪದ ಕತೆಗೆ ಜೀವ ತುಂಬುವ ಕಾಯಕ ಮಾಡುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಬಸ್ತಿಬಣದ ನಾಗರಿಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ