ಕನ್ನಡಪ್ರಭ ವಾರ್ತೆ ಬೆಳಗಾವಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 92655 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಕೈ ನಾಯಕರ ಮಾಸ್ಟರ್ ಸ್ಟ್ರೋಕ್‌ಗೆ ಬಿಜೆಪಿ ಶಾಕ್ ಆಗಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪತ್ನಿ ಕ್ಷೇತ್ರದಲ್ಲೇ ಕಾಂಗ್ರೆಸ್ 29,752 ಮುನ್ನಡೆ ಸಾಧಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 92655 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಕೈ ನಾಯಕರ ಮಾಸ್ಟರ್ ಸ್ಟ್ರೋಕ್‌ಗೆ ಬಿಜೆಪಿ ಶಾಕ್ ಆಗಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪತ್ನಿ ಕ್ಷೇತ್ರದಲ್ಲೇ ಕಾಂಗ್ರೆಸ್ 29,752 ಮುನ್ನಡೆ ಸಾಧಿಸಿದ್ದು ಚರ್ಚೆಗೆ ಗ್ರಾಸವಾಗಿದೆ.ಬೆಳಿಗ್ಗೆ 7 ಗಂಟೆಯಿಂದ ಮತ ಏಣಿಕೆ ಆರಂಭವಾಗುತ್ತಿದ್ದಂತೆ ಆರಂಭಗೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿನತ್ತ ಹೆಜ್ಜೆಯ ಮುನ್ನಡೆಯ ನಾಗಾಲೋಟ ಕೊನೆಯ 22ನೇ ಸುತ್ತಿನವರೆಗೂ ಬಿಜೆಪಿಗಿಂತ ಮುನ್ನಡೆ ಸಾಧಿಸಿದ್ದು ಗಮನ ಸೆಳೆಯುವಂತೆ ಮಾಡಿತು. ಅದರಲ್ಲೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯ ಪತ್ನಿ, ಶಾಸಕಿ ಶಶಿಕಲಾ ಜೊಲ್ಲೆಯ ತವರು ಕ್ಷೇತ್ರವಾದ ನಿಪ್ಪಾಣಿ ವಿಧಾನ ಸಭಾ ಕ್ಷೇತ್ರದಲ್ಲೇ ಬಿಜೆಪಿಗಿಂತ ಕಾಂಗ್ರೆಸ್ 29752 ಹೆಚ್ಚಿಗೆ ಮತಗಳು ಬಿದ್ದಿವೆ. ಬಿಜೆಪಿ - 76298 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್ - 106050 ಮತಗಳನ್ನು ಪಡೆದುಕೊಳ್ಳುವ ಮೂಲಕ 29752 ಹೆಚ್ಚಿನ ಮತಗಳನ್ನು ಸೆಳೆದುಕೊಂಡಿರುವುದು ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಅಂಶದಿಂದ ಪರಾವಭಗೊಂಡ ಬಿಜೆಪಿ ಅಭ್ಯರ್ಥಿ ಹಾಗೂ ನಾಯಕರು ಬೇರೆ ಬೇರೆ ಕ್ಷೇತ್ರಗಳ ಶಾಸಕರು ಹಾಗೂ ಮುಖಂಡರ ಮೇಲೆ ಗೂಬೆ ಕುಳಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಮೇ 7 ರಂದು ನಡೆದ ಮತದಾನದಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 13,90,485 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮಂಗಳವಾರ ಪಟ್ಟಣದ ಆರ್‌ಡಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಜರುಗಿತು. ಚುನಾವಣಾ ಆಯೋಗದ ಅಧಿಕಾರಿಗಳ ವ್ಯವಸ್ಥಿತ ಹಾಗೂ ಮುಂಜಾಗ್ರತ ಕಾರ್ಯದಿಂದ ಮತ ಎಣಿಕೆ ಸಮಯದಲ್ಲಿ ಯಾವುದೇ ಲೋಪ, ಅಡೆತಡೆಗಳು ಎದುರಾಗದ ಸರಾಗವಾಗಿ ಮತ ಎಣಿಕೆ ಕಾರ್ಯ ಜರುಗಿತು. ಮತ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಒಟ್ಟು 22 ಸುತ್ತುಗಳ ಮತ ಎಣಿಕೆ ಕಾರ್ಯದಲ್ಲಿ ಸತತ ಮುನ್ನಡೆ ಕಾಯ್ದುಕೊಂಡಿತ್ತು. ಒಂದೇ ಒಂದು ಸುತ್ತಿನಲ್ಲೂ ಬಿಜೆಪಿ ಕನಿಷ್ಠ ಅಂತರದ ಮುನ್ನಡೆಯನ್ನು ಸಾಧಿಸಲಿಲ್ಲ. ಮತ ಎಣಿಕೆ ಮುಕ್ತಾಯವಾಗುತ್ತಿದ್ದಂತೆ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ 7,13,461ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ 6,22,627 ಮತಗಳನ್ನು ಸೆಳೆದುಕೊಂಡು ಪರಭವಗೊಂಡಿದ್ದಾರೆ. 3ನೇ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ 25,466 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಬಾಕ್ಸ್..
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.