ಜೋಶಿ ೨೦ ವರ್ಷಗಳ ಕೊಡುಗೆ ಶೂನ್ಯ-ಶಾಸಕ ವಿನಯ ಕುಲಕರ್ಣಿ

KannadaprabhaNewsNetwork |  
Published : May 03, 2024, 01:04 AM IST
ಪೊಟೋ ಪೈಲ್ ನೇಮ್ ೨ಎಸ್‌ಜಿವಿ೩   ಪಟ್ಟಣದ ಕಾಂಗ್ರೆಸ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಶಾಸಕ ವಿನಯ ಕುಲಕರ್ಣಿ ಮಾತನಾಡಿದರು. | Kannada Prabha

ಸಾರಾಂಶ

ನಿರಂತರ ೨೦ ವರ್ಷಗಳಿಂದ ಧಾರವಾಡ ಕ್ಷೇತ್ರದ ಸಂಸದರಾಗಿರುವ ಜೋಶಿಯವರ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳ ಹಿಂದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಕೆಲಸವನ್ನು ಮಾಡದೆ, ಗರದಿ ಗಮ್ಮತ್ತಿನ ಶೋದಂತೆ ರಾಮಮಂದಿರ ನೋಡ, ಮೋದಿ ನೋಡ ಎಂದು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಶಿಗ್ಗಾವಿ: ನಿರಂತರ ೨೦ ವರ್ಷಗಳಿಂದ ಧಾರವಾಡ ಕ್ಷೇತ್ರದ ಸಂಸದರಾಗಿರುವ ಜೋಶಿಯವರ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳ ಹಿಂದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಕೆಲಸವನ್ನು ಮಾಡದೆ, ರಾಮಮಂದಿರ ನೋಡ, ಮೋದಿ ನೋಡ ಎಂದು ಗರದಿ ಗಮ್ಮತ್ತಿನ ಶೋದಂತೆ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಕಿಡಿಕಾರಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಹ್ಲಾದ ಜೋಶಿಯವರ ಆಶೀರ್ವಾದದಿಂದ ನಾಲ್ಕು ವರ್ಷಗಳಿಂದ ನಾನು ಧಾರವಾಡ ಕ್ಷೇತ್ರಕ್ಕೆ ಕಾಲಿಡದಂತ ಸ್ಥಿತಿ ಎದುರಾಗಿದ್ದರೂ ನನ್ನ ಜನತೆ ನನ್ನನ್ನು ಗೆಲ್ಲಿಸಿದ್ದಾರೆ, ದ್ವೇಷದ ರಾಜಕಾರಣಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಮುಗಿಯುವವರಗೆ ವಿಶ್ರಾಂತಿ ಪಡೆಯದೆ ಮನೆ ಮನೆಗೆ ತೆರಳಿ ಜನರನ್ನು ಮನವೊಲಿಸಬೇಕು, ಜಾತಿ ಮತ ಎಂಬ ವಿಷ ಬೀಜಕ್ಕೆ ತುತ್ತಾಗದೆ ಯುವಜನಾಂಗ ಬಹಳ ಎಚ್ಚರಿಕೆಯಿಂದ ಮತದಾನ ಮಾಡಬೇಕು, ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಮಹಿಳೆಯರು ಆತ್ಮ ಸಂತೋಷದಿಂದ ವಿನೋದ ಅಸೂಟಿಯವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಯಾಸೀರಖಾನ ಪಠಾಣ, ಸೋಮಣ್ಣಾ ಬೇವಿನಮರದ, ತಾಲೂಕು ಅಧ್ಯಕ್ಷ ಬಿ.ಸಿ.ಪಾಟೀಲ, ವೀರೇಶ ಅಜೂರ, ಎಜೆ ಮುಲ್ಲಾ. ಎಸ್.ವಿ. ಪಾಟೀಲ, ಮಲ್ಲಮ್ಮಾ ಸೋಮನಕಟ್ಟಿ, ಸುಧೀರ ಲಮಾಣಿ, ಗುಡ್ಡಪ್ಪಾ ಜಲದಿ, ಬಾಬರ ಬಾವೋಜಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ