ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಮಂಜುರವರು ತಾಲೂಕು ಆಡಳಿತದ ಪರವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿದರು. ಇದೇ ಕಾರ್ಯಕ್ರಮದ ಆರಂಭದಲ್ಲಿ ಅರಕಲಗೂಡು ತಾಲೂಕು ದಂಡಾಧಿಕಾರಿಗಳು ತಹಸೀಲ್ದಾರರಾದ ಸ್ವಾಮಿ ಧ್ವಜರೋಹಣ ನೇರವೇರಿಸಿ ಸ್ವಾತಂತ್ರ್ಯೋತ್ಸದ ಶುಭಾಶಯ ತಿಳಿಸಿದರು. ಅರಕಲಗೂಡು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಅಧ್ಯಕ್ಷತೆ ವಹಿಸಿದ ಎ.ಮಂಜುರವರು ಹಲವು ನಾಯಕರು ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಒಗ್ಗಟ್ಟಿನಿಂದ ಹೋರಾಡಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಲ್ಲರೂ ಏಕತೆಯಿಂದ ಒಂದಾಗಿ ಬಾಳಬೇಕು. ದೇಶದ ಐಕ್ಯತೆ ಪ್ರಗತಿಯ ಬಗ್ಗೆ ಯುವಕರು ಸದಾ ಜಾಗೃತರಾಗಿ ಶ್ರಮಿಸಿ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದೆ ದೇಶದ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.
ಇದೇ ವೇಳೆ ತಹಸೀಲ್ದಾರ್ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ, ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ, ಆರಕ್ಷಕ ವೃತ್ತ ನಿರಿಕ್ಷಕ ವಸಂತ್, ಪಟ್ಟಣಪಂಚಾಯ್ತಿ ಅಡಳಿತ ಅಧಿಕಾರಿಗಳು, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಕವರ್ಗ ಸಾರ್ವಜನಿಕರು ಭಾಗವಹಿಸಿದ್ದರು.