ಅರಹುಣಸಿ ಗ್ರಾಮದಲ್ಲಿ ಸಂಭ್ರಮದ ಅಕ್ಕ ತಂಗಿಯರ ಜಾತ್ರೆ

KannadaprabhaNewsNetwork |  
Published : Jul 29, 2026, 02:30 AM IST
ಅರಹುಣಸಿ ಗ್ರಾಮದಲ್ಲಿ ಅಕ್ಕ ತಂಗಿಯರ(ದೇವಮ್ಮ ದೇವಿಯರ) ಜಾತ್ರೆ ಸಂಭ್ರಮದಿಂದ ನೆರವೇರಿತು. | Kannada Prabha

ಸಾರಾಂಶ

ದೇವಮ್ಮನವರು ಇಡುವ ಪ್ರತಿಯೊಂದು ಹೆಜ್ಜೆಗೂ ಒಂದೊಂದು ತೆಂಗಿನ ಕಾಯಿ ಒಡೆಯಲಾಯಿತು. 10 ಸಾವಿರಕ್ಕೂ ಹೆಚ್ಚು ಕಾಯಿ ದೇವರಿಗೆ ಅರ್ಪಿಸಲಾಯಿತು.

ರೋಣ: ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಅಕ್ಕ ತಂಗಿಯರ(ದೇವಮ್ಮ ದೇವಿಯರ) ಜಾತ್ರೆ ಸಕಲ ವಾದ್ಯ ಮೇಳಗಳು, ಸಹಸ್ರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮದಿಂದ ಜರುಗಿತು.

ಗ್ರಾಮದ ಹೊರವಲಯದಲ್ಲಿ ನೆಲೆ ನಿಂತ ದೇವಮ್ಮದೇವಿಯರ ಗದ್ದುಗೆ ಸ್ಥಳದಲ್ಲಿ ಜಾತ್ರೆ ವೈಭವ ವಿಜೃಂಭಣೆಯಿಂದ ನೆರವೇರಿತು.

ಬಳಿಕ ಗದ್ದುಗೆಯಿಂದ ದೇವಮ್ಮ ದೇವತೆಯರು ಪೂರ್ಣಕುಂಭ ಹೊತ್ತು ಪುರ ಪ್ರವೇಶಿಸುವ ದೃಶ್ಯ ಅತ್ಯಂತ ಭಕ್ತಿಪೂರ್ವಕವಾಗಿತ್ತು. ದೇವಮ್ಮನವರು ಇಡುವ ಪ್ರತಿಯೊಂದು ಹೆಜ್ಜೆಗೂ ಒಂದೊಂದು ತೆಂಗಿನ ಕಾಯಿ ಒಡೆಯಲಾಯಿತು. 10 ಸಾವಿರಕ್ಕೂ ಹೆಚ್ಚು ಕಾಯಿ ದೇವರಿಗೆ ಅರ್ಪಿಸಲಾಯಿತು.

ಜಾತ್ರಾ ಸಂಭ್ರಮದಲ್ಲಿ ತಾಲೂಕಿನ ಮೇಲ್ಮಠ ಹಿರೇಮಣ್ಣೂರು, ಹುಲ್ಲೂರು, ಸಂದಿಗವಾಡ, ಮುದೇನಗುಡಿ, ಮಲ್ಲಾಪುರ, ಚಿಕ್ಕಮಣ್ಣೂರು, ಸವಡಿ, ಬೆಳವಣಕಿ, ಡ.ಸ. ಹಡಗಲಿ, ಗಾವರವಾಡ, ಬಾಸಲಾಪುರ, ರೋಣ, ಕೃಷ್ಣಾಪುರ, ಹೊಸಳ್ಳಿ, ಕೊತಬಾಳ, ಕುರಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮದಿಂದ ಜನತೆ ಆಗಮಿಸಿದ್ದರು.ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ ಇಂದು

ರೋಣ: ಬಸಮ್ಮ ಸಂಗನಗೌಡ ಪಾಟೀಲ ಅವರ 22ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಉಚಿತ ನೇತ್ರ ಪರೀಕ್ಷೆ, ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರ, ಮಹಿಳಾ ಗೋಷ್ಠಿ, ನೂತನ ಪಿಯುಸಿ ವಿಜ್ಞಾನ ವಿಭಾಗದ ಹಾಗೂ ಸಿಬಿಎಸ್‌ಇ ಕಾಲೇಜಿನ ಕಟ್ಟಡದ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜು. 29ರಿಂದ ಆ. 1ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪುಣ್ಯಸ್ಮರಣೋತ್ಸವ ಸಮಿತಿ ಅಧ್ಯಕ್ಷ ವೀರಭದ್ರಗೌಡ ಪಾಟೀಲ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು. 29ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ಪರೀಕ್ಷೆ ಹಾಗೂ ಗಾಜುಬಿಂದು ಅಳವಡಿಕೆ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಜು. 30ರ ಸಂಜೆ 4 ಗಂಟೆಗೆ ಪಟ್ಟಣದ ರಾಜೀವ್ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಕಿಟ್ ವಿತರಣಾ ಕಾರ್ಯಕ್ರಮ ನಡೆಯಲಿದೆ. ಜು. 31ರಂದು ಬೆಳಗ್ಗೆ 11 ಗಂಟೆಗೆ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಹಿಳಾ ಗೋಷ್ಠಿ ನಡೆಯಲಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮವನ್ನು ಉದ್ಘಾಟಿಸುವರು.ಆ. 1ರಂದು ಬೆಳಿಗ್ಗೆ 11 ಗಂಟೆಗೆ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಂಸದ ಆರ್‌.ಎಸ್. ಪಾಟೀಲ್, ರಾಜ್ಯ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್, ಶಾಸಕರಾದ ಜಿ.ಎಸ್. ಪಾಟೀಲ, ಎನ್‌.ಎಚ್. ಕೊನರಡ್ಡಿ ಇತರರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಐ.ಬಿ. ಕೊಟ್ರುಶೆಟ್ಟರ, ಡಾ. ಎಸ್‌.ಪಿ. ಕಾತರಕಿ, ಮಲ್ಲಯ್ಯ ಮಹಾಪುರುಷಮಠ, ಹುಚ್ಚೇಶ ಜವಳಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈನಿಕರನ್ನು ಗೌರವಿಸುವ ಕಾರ್ಯವಾಗಲಿ
ಶೆಟ್ಟಿಗೇರಿ: ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ