ಜೆಎಸ್‌ಎಸ್ ವಿವಾಹ ವೇದಿಕೆಯ ನವೀಕೃತ ವೆಬ್‌ ಸೈಟ್ ಲೋಕಾರ್ಪಣೆ

KannadaprabhaNewsNetwork |  
Published : Oct 21, 2025, 01:00 AM IST
28 | Kannada Prabha

ಸಾರಾಂಶ

ಜೆಎಸ್‌ಎಸ್ ವಿವಾಹವೇದಿಕೆ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನೂತನ ಸಂಬಂಧಗಳನ್ನು ಬೆಸೆಯಲು ಆಯ್ಕೆಗಳಿಗೆ ಅವಕಾಶ ಕಲ್ಪಿಸಲು ನವೀಕೃತ ವೆಬ್‌ ಸೈಟ್‌ ನ್ನು ಸಿದ್ಧಪಡಿಸಲಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ನಗರದ ಜೆಎಸ್‌ಎಸ್‌ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ವಿವಾಹ ವೇದಿಕೆಯ ನವೀಕೃತ ವೆಬ್‌ ಸೈಟ್‌ ಅನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಜೆಎಸ್‌ಎಸ್ ವಿವಾಹವೇದಿಕೆ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೈಸೂರು, ಬೆಂಗಳೂರುಗಳಲ್ಲಿ ವಧು- ವರರ ಸಮಾವೇಶಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರದಲ್ಲಿ ಸದ್ಯದಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ವಿವಾಹದ ಆಯ್ಕೆಯ ವಿಧಾನಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಇಂದಿನ ದಿನಮಾನದಲ್ಲಿ ಸಮಾನ ಮನಸ್ಕರು ಮತ್ತು ಸಮಾನ ಆಲೋಚನೆಗಳನ್ನು ಹೊಂದಿರುವವರನ್ನು ಸಂಗಾತಿಗಳಾಗಿ ಪಡೆಯಲು ಇಚ್ಛಿಸುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಆನ್‌ ಲೈನ್ ವಿವಾಹ ವೇದಿಕೆಯ ಜಾಲತಾಣಗಳ ಸಹಾಯದೊಂದಿಗೆ ವಿವಾಹಗಳು ನಿಶ್ಚಯಗೊಳ್ಳುತ್ತಿವೆ ಎಂದು ಅವರು ಹೇಳಿದರು.ಜೆಎಸ್‌ಎಸ್ ವಿವಾಹ ವೇದಿಕೆಯ ನವೀಕೃತ ವೆಬ್‌ ಸೈಟ್‌ ನಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲ ತರಹದ ಅವಕಾಶಗಳನ್ನು ನೀಡಲಾಗಿದೆ. ಈ ವೆಬ್‌ ಸೈಟ್‌ ಅನ್ನು ಕನ್ನಡ, ತಮಿಳು, ತೆಲಗು ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಳಿಸಿ ಗ್ರಾಮಾಂತರ ಪ್ರದೇಶಗಳಿಗೂ ತಲುಪುವಂತೆ ಮಾಡಲು ಸೂಚಿಸಲಾಗಿದೆ ಎಂದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಮಾತನಾಡಿ, ಮೊದಲೆಲ್ಲ ಸಾಂಪ್ರದಾಯಿಕವಾಗಿ ಜೀವನ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ತಂತ್ರಜ್ಞಾನದ ಆವಿಷ್ಕಾರದಿಂದ ಅದು ಬದಲಾಗಿದೆ. ಆನ್‌ ಲೈನ್ ವಿವಾಹ ಜಾಲತಾಣಗಳ ಮೂಲಕ ಮದುವೆಗಳು ಏರ್ಪಡುತ್ತಿವೆ. ನವೀಕೃತ ವೆಬ್‌ ಸೈಟ್ ಇಂದಿನ ದಿನಮಾನಕ್ಕೆ ಅವಶ್ಯವಿರುವ ಎಲ್ಲ ಆಯ್ಕೆ ಮತ್ತು ವಿಷಯಗಳನ್ನು ಒಳಗೊಂಡಿದೆ. ಅವಶ್ಯಕತೆಯಿರುವ ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಜೆಎಸ್ಎಸ್- ಅಹೆರ್ ಕುಲಪತಿ ಡಾ.ಎಚ್. ಬಸವನಗೌಡಪ್ಪ ಮಾತನಾಡಿ, ಜೀವನದಲ್ಲಿ ವಿವಾಹ ಪ್ರಮುಖವಾದ ಘಟ್ಟ. ಲಿಂಗಾನುಪಾತದಲ್ಲಿ ವ್ಯತ್ಯಾಸವಿರುವುದರಿಂದ ಸರಿಯಾದ ವಯಸ್ಸಿಗೆ ವಿವಾಹಗಳು ಏರ್ಪಡುತ್ತಿಲ್ಲ. ಇಂತಹ ವೆಬ್‌ ಸೈಟ್‌ ಗಳಿಂದ ವಿವಾಹಗಳು ನಿಶ್ಚಯವಾಗಲು ಸಹಾಯಕವಾಗಲಿದೆ. ವಿವಾಹವಾಗಲು ಕಾಯುತ್ತಿರುವವರಿಗೆ ಇದರಿಂದ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.ವೆಬ್‌ ಸೈಟ್‌ ನ ಬಗ್ಗೆ ಮಾಹಿತಿ ನೀಡಿದ ಎಸ್‌ ಜೆಸಿಇ ಸ್ಟೆಪ್‌ ಮುಖ್ಯಕಾರ್ಯನಿರ್ವಾಹಕ ಸಿ. ಶಿವಶಂಕರ್‌ ಅವರು, ಸಂಸ್ಕೃತಿಯೊಂದಿಗೆ ತಂತ್ರಜ್ಞಾನವನ್ನು ಸಮ್ಮಿಳತಗೊಳಿಸಿ ವಿವಾಹ ವೇದಿಕೆಯ ವೆಬ್‌ ಸೈಟ್‌ ಅನ್ನು ನವೀಕೃತಗೊಳಿಸಲಾಗಿದೆ. ಜಗತ್ತಿನ ಎಲ್ಲಾ ಭಾಗಗಳಲ್ಲೂ ಇದಕ್ಕೆ ಪ್ರವೇಶ ಪಡೆದು ವಿವಾಹವಾಗ ಬಯಸುವವರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗದಂತೆ ಜಾಗರೂಕವಾಗಿ ಇರುವಂತೆ ಮಾಡಲಾಗಿದೆ. ಜೀವನ ಸಂಗಾತಿಗಳನ್ನು ಪಡೆಯಲು ಬಯಸುವವರಿಗೆ ಎಲ್ಲ ರೀತಿಯ ಆಯ್ಕೆಗಳನ್ನು ಅಳವಡಿಸಿ ಸುಲಭಗೊಳಿಸಲಾಗಿದೆ. ಸ್ಟೆಪ್‌ ನ ಸ್ಟಾರ್ಟ್‌ ಅಪ್ ಮೂಲಕ ಇದನ್ನು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ನವೀಕೃತಗೊಳಿಸಲಾಗಿದೆ ಎಂದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್‌, ನಿರ್ದೇಶಕ ಆರ್. ಮಹೇಶ್‌ ಇದ್ದರು. ಎಸ್. ಶಿವಕುಮಾರಸ್ವಾಮಿ ಸ್ವಾಗತಿಸಿದರು. ವಿವಾಹ ವೇದಿಕೆಯ ಸ್ವಯಂಸೇವಕರಾದ ಎನ್. ಮಲ್ಲಿಕಾ ಮಾತನಾಡಿದರು. ವೈಶಾಲಿ ಮತ್ತು ಕುಶಲಾ ಪ್ರಾರ್ಥಿಸಿದರು. ಪಲ್ಲವಿ ನಿರೂಪಿಸಿದರು.ಆಸಕ್ತಿಯುಳ್ಳವರು ನವೀಕೃತ ವೆಬ್‌ ಸೈಟ್ https://jssmatrimony.com/login ನೋಂದಾಯಿಸಿಕೊಳ್ಳಬಹುದು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ