ಕಾರು ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೆ ಸಾವು

KannadaprabhaNewsNetwork |  
Published : Sep 22, 2026, 03:15 AM IST
65 | Kannada Prabha

ಸಾರಾಂಶ

ಉದ್ಯೋಗ ಸಂದರ್ಶನಕ್ಕಾಗಿ ಕಾಲೇಜಿನಿಂದ ಪ್ರಮಾಣ ಪತ್ರ ಪ

- ವಿದ್ಯಾರ್ಥಿಗಳ ದಿಡೀರ್‌ ಪ್ರತಿಭಟನೆ-----------ಕನ್ನಡಪ್ರಭ ವಾರ್ತೆ ನಂಜನಗೂಡು ಕಾಲೇಜಿಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇಯೇ ಮೃತಪಟ್ಟಿರುವ ಘಟನೆ ಪುಟ್ಟಣದ ಜೆಎಸ್ಎಸ್ ಪಾಲಿಟೆಕ್ನಿಕ್ ಮುಂಭಾಗ ನಡೆದಿದೆ.ಕಾಲೇಜಿನ ಮುಂಭಾಗ ಆಗಾಗ ಅಪಘಾತ ಸಂಭವಿಸಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ನೂರಾರು ಮಂದಿ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗಳ ಕಾಲ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟಿಸಿದರು.ನಂಜನಗೂಡಿನ ಜೆಎಸ್ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿ ಪ್ರಿತೀಶ್ ಜೈನ್ (19) ಮೃತ ದುರ್ದೈವಿ. ಈತ ಚಾಮರಾಜನಗರದ ಧರ್ಮೇಂದ್ರ ಬಾಬು ಹಾಗೂ ಛಾಯಾ ಎಂಬವರ ಪುತ್ರನಾಗಿದ್ದು, ಕಾಲೇಜಿನಲ್ಲಿ ಮೆಕಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದ ಈತ ಉದ್ಯೋಗ ಸಂದರ್ಶನಕ್ಕಾಗಿ ಕಾಲೇಜಿನಿಂದ ಪ್ರಮಾಣ ಪತ್ರ ಪಡೆದುಕೊಳ್ಳಲು ಸೋಮವಾರ ಕಾಲೇಜಿಗೆ ಆಗಮಿಸಿದ್ದ ಎನ್ನಲಾಗಿದ್ದು, ಮಧ್ಯಾಹ್ನದ ಊಟ ಮಾಡಿಕೊಂಡು ಪುನಃ ಕಾಲೇಜಿಗೆ ತೆರಳುವ ಸಲುವಾಗಿ ರಸ್ತೆ ದಾಟುವ ಉದ್ದೇಶದೊಂದಿಗೆ ರಸ್ತೆಯಂಚಿನಲ್ಲಿ ನಿಂತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು, ವಿದ್ಯಾರ್ಥಿ ಪ್ರೀತೇಶ್ ಜೈನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆಕಾಲೇಜಿನ ವಿದ್ಯಾರ್ಥಿಯೋರ್ವ ರಸ್ತೆ ಅಪಘಾತದಿಂದಾಗಿ ಕಾಲೇಜಿನ ಮುಂಭಾಗದಲ್ಲೇ ಸಾವಿಗೀಡಾಗಿರುವುದರಿಂದ ಆಕ್ರೋಶಗೊಂಡ ಜೆಎಸ್ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ತರಗತಿಯಿಂದ ಹೊರ ಬಂದು ಮೈಸೂರು- ನಂಜನಗೂಡು ಮುಖ್ಯರಸ್ತೆಯಲ್ಲಿ ವಾಹನ ಗಳನ್ನು ತಡೆಗಟ್ಟಿ ಮೃತ ವಿದ್ಯಾರ್ಥಿಗೆ ಹೆಚ್ಚಿನ ಪರಿಹಾರ ನೀಡಬೇಕು ಹಾಗೂ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನಗಳ ವೇಗ ನಿಯಂತ್ರಿಸಬೇಕು ಎಂದು ಆಗ್ರಹಿಸಿ ರಸ್ತೆಯಲ್ಲಿಯೇ ಪ್ರತಿಭಟನೆ ಮುಂದುವರೆಸಿದರು.ಸ್ಥಳಕ್ಕಾಗಮಿಸಿದ ಸಂಚಾರ ಠಾಣೆ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಸುಮಾರು ಎರಡು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಹೆದ್ದಾರಿ ತಡೆ ಆಗಿದ್ದರಿಂದಾಗಿ ವಾಹನಗಳ ದಟ್ಟಣೆ ಅಧಿಕವಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.ಪಟ್ಟಣದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾಗಿರುವ ವಾಹನವನ್ನು ವಶಕ್ಕೆ ಪಡೆದು ನಾಪತ್ತೆಯಾಗಿರುವ ಕಾರಿನ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆ ಬಳಿ ಬಾರ್‌ಗೆ ಅನುಮತಿ ಬೇಡ : ದಸಂಸ ಆಗ್ರಹ
ಜೀವಜಲವೇ ಹಾಲಾಹಾಲ: ಪ್ರಯೋಗಾಲಯ ವರದಿ !