ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾನೂನು ಸೇವಾ ಸಮಿತಿ ಹಾಗೂ ಭಾರತ್ ವಿಕಾಸ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು, ಈ ವರ್ಷ 10 ಸಾವಿರ ಗಿಡ ನೆಟ್ಟು ಪೋಷಿಸಲು ಪರಿಸರ ದಿನಾರಣೆ ದಿನದಿಂದಲೇ ಗಿಡ ನೆಡುವ ಕಾರ್ಯಕ್ರಮ ಆರಂಭಿಸಿದ್ದು ಹಲವು ಇಲಾಖೆಗಳು ಹಾಗೂ ಸಂಸ್ಥೆಗಳು ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾಘೀಸಿದರು.
ಭಾರತ್ ವಿಕಾಸ್ ಪರಿಷತ್ತ್ ಸಹಯೋಗದೊಂದಿಗೆ ಆದರ್ಶ ಶಾಲೆಯಲ್ಲಿ ಗಿಡ ನೆಟ್ಟು ಳಿಸಿ ಬೆಳಸುವ ಜವಬ್ದಾರಿಯನ್ನು ಮಕ್ಕಳು ಕರ್ತವ್ಯವೆಂದು ಭಾವಿಸಿ ಗಿಡಗಳನ್ನು ಪೋಷಿಸಬೇಕು ಎಂದು ಕರೆ ನೀಡಿದರು.ನಂತರ ನ್ಯಾಯಾಧೀಶರು ಶಾಲೆ ಕೊಠಡಿ, ಅಡುಗೆ ಮನೆ ಹಾಗೂ ಶೌಚಾಲಯವನ್ನು ಪರಿಶೀಲಿಸಿ ಅಶುಚಿತ್ವನ್ನು ಕಂಡು ಸ್ಥಳದಲ್ಲಿಯೇ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡರು.
ಎಸ್.ಡಿ.ಎಂ.ಸಿ ಅಧ್ಯಕ್ಷ ತಳಗವಾದಿ ಪ್ರಕಾಶ್ ಹಾಗೂ ಸದಸ್ಯರು ಶಾಲೆಯ ಪಕ್ಕದ ಪಿ.ಡಬ್ಲ್ಯು.ಡಿ ಇಲಾಖೆಗೆ ಸೇರಿದ ಶಿಥಿಲ ಕಟ್ಟಡ ಹಾಗೂ ನೀರಿನ ಟ್ಯಾಂಕ್ ನೆಲಸಮ ಮಾಡಿ ಮಕ್ಕಳಿಗೆ ಆಟದ ಮೈದಾನ ಮಾಡಲು ಅವಶಕಾಶ ನೀಡುವಂತೆ ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ನ್ಯಾಯಾಧೀಶರು ಕಾನೂನು ಸೇವಾ ಸಮಿತಿಗೆ ಮನವಿ ಪತ್ರ ನೀಡಿದ ಬಳಿಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು ಎಂದರು.ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜ ಶಂಕರಸ್ವಾಮಿ, ಹೆಚ್ಚುವರಿ ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ನಿಂಗರಾಜುಗೌಡ, ಪ್ರಾಂಶುಪಾಲ ಶಿವರಾಜು, ಸಾಲು ಮರದ ನಾಗರಾಜು ಭಾಗವಹಿಸಿದ್ದರು.