)
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಯನಗರ ನಿವಾಸಿ ವಜ್ರಕುಮಾರ್ (48) ಆತ್ಮಹತ್ಯೆಗೆ ಶರಣಾದವರು. ವಜ್ರಕುಮಾರ್ ಗ್ರೂಪ್-ಸಿ ನಲ್ಲಿ ಜೂನಿಯರ್ ಅಸಿಸ್ಸ್ಟೆಂಟ್ ಆಗಿ ಗ್ರ್ಯಾಚ್ಯೂಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು. ಸಂಜೆ 5 ಗಂಟೆಯ ಸುಮಾರಿಗೆ ರೇಸ್ಕೋರ್ಸ್ ರಸ್ತೆಯಲ್ಲಿರುವ ಇಂಧನ ಭವನದ 12ನೇ ಮಹಡಿಗೆ ತೆರಳಿ ಏಕಾಏಕಿ ಹಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೈಗ್ರೌಂಡ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಮೈದ ಸಾವಿನಿಂದ ನೊಂದಿದ್ದರು!:ವಜ್ರಕುಮಾರ್ ಮಾನಸಿಕ ಖಿನ್ನತೆಯಿಂದ ಬಳಯುತ್ತಿದ್ದರು. ಇದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇತ್ತೀಚೆಗೆ ಇವರ 30 ವರ್ಷದ ಬಾಮೈದ ತೀರಿ ಹೋಗಿದ್ದರು ಇದರಿಂದಾಗಿ ವಜ್ರಕುಮಾರ್ ಮಾನಸಿಕವಾಗಿ ತುಂಬಾ ನೊಂದಿದ್ದರು. ಇದೇ ಚಿಂತೆಯಲ್ಲಿದ್ದ ವಜ್ರಕುಮಾರ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ವಜ್ರಕುಮಾರ್ ಕೌಟುಂಬಿಕ ಕಾರಣದಿಂದಾಗಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಸ್ವಯಂ ನಿವೃತ್ತಿಗೆ (ವಿಆರ್ಎಸ್) ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಮೋದನೆ ಬಾಕಿ ಇತ್ತು ಎಂದು ತಿಳಿದುಬಂದಿದೆ.