ಅರ್ಜಿ ಆಹ್ವಾನ

KannadaprabhaNewsNetwork |  
Published : Feb 19, 2025, 12:48 AM IST
ಅರ್ಜಿ ಆಹ್ವಾನ | Kannada Prabha

ಸಾರಾಂಶ

ಅನುಪಯುಕ್ತ ಪೀಠೋಪಕರಣ ಮತ್ತು ಯಂತ್ರೋಪಕರಣ ಯಥಾಸ್ಥಿತಿಯಲ್ಲಿ ಹರಾಜು ಮೂಲಕ ವಿಲೇ ಮಾಡಲು ತೀರ್ಮಾನಿಸಲಾಗಿದೆ.

ಮಡಿಕೇರಿ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿರುವ ಸೈನಿಕ ವಿಶ್ರಾಂತಿ ಗೃಹಕ್ಕೆ ಹೊರಗುತ್ತಿಯ ಆಧಾರದ ಮೇಲೆ ಒಬ್ಬ ಮೇಟಿ ಕ0-ವಾಚ್ ಮೆನ್ ಹುದ್ದೆ ಖಾಲಿ ಇದ್ದು, ಆಸಕ್ತ ಮಾಜಿ ಸೈನಿಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರ್ಯಾಲಯ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

-----------------

ಅನುಪಯುಕ್ತ ಪೀಠೋಪಕರಣ, ಯಂತ್ರೋಪಕರಣ ಹರಾಜುಮಡಿಕೇರಿ : ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಯಲ್ಲಿರುವ ಅನುಪಯುಕ್ತ ಪೀಠೋಪಕರಣ ಮತ್ತು ಯಂತ್ರೋಪಕರಣ ಯಥಾಸ್ಥಿತಿಯಲ್ಲಿ ಹರಾಜು ಮೂಲಕ ವಿಲೇ ಮಾಡಲು ತೀರ್ಮಾನಿಸಲಾಗಿದೆ.ಹರಾಜನ್ನು ಫೆಬ್ರವರಿ 28 ರಂದು ಮಧ್ಯಾಹ್ನ 12.30 ಕ್ಕೆ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಹರಾಜದಾರರು ಮುಂಚಿತವಾಗಿ ಅನುಪಯುಕ್ತ ವಸ್ತುಗಳ ಸ್ಥಿತಿಗಳನ್ನು ಕಚೇರಿ ಸಮಯದಲ್ಲಿ ಪರಿಶೀಲಿಸಬಹುದಾಗಿದೆ. ಪೀಠೋಪಕರಣ/ ಯಂತ್ರೋಪಕರಣಗಳ ವಿವರ ಇರುತ್ತದೆ.ವಿಸಿಟರ್ ಚೇರ್ ಪಿಕಾಕ್ 2, ಎಕ್ಸಿಕ್ಯೂಟಿವ್ ರಿವಾಲ್ವಿಂಗ್ ಚೇರ್ 1, ‘ಎಸ್’ ಟೈಪ್ ಚೇರ್ 10, ಕಂಪ್ಯೂಟರ್ 5, ಯು.ಪಿ.ಎಸ್ ವಿತ್ 6 ಬ್ಯಾಟರಿಸ್ 1, ಬಜಾಜ್ ಏರ್ ಕೂಲರ್ 2, ಎ.ಸಿ. ವೋಟಾಸ್ 1, ಶಾರ್‌ಪ್ ಜೆರಾಕ್ಸ್ ಮಿಷನ್ 1. ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸಬಹುದಾಗಿದೆ.

----------------------------------

ಇಂದು ಸಹಕಾರ ಕಾಯ್ದೆ, ಕಾನೂನು ಕುರಿತು ಕಾರ್ಯಾಗಾರಮಡಿಕೇರಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಹಯೋಗದೊಂದಿಗೆ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು. ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗಳಿಗೆ ಲೆಕ್ಕಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಸಹಕಾರ ಕಾಯ್ದೆ ಕಾನೂನು ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮ ಫೆ.19 ರಂದು ಬೆಳಗ್ಗೆ 11 ಗಂಟೆಗೆ ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್‌ ಮತ್ತು ಮುದ್ರಣಾಲಯದಲ್ಲಿ ನಡೆಯಲಿದೆ.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಲಯದ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಲಯದ ಉಪಾಧ್ಯಕ್ಷರಾದ ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಲಯದ ನಿರ್ದೇಶಕರಾದ ಎನ್.ಎ.ರವಿ ಬಸಪ್ಪ, ಕೆ.ಎಂ.ತಮ್ಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಎಂ.ಕೆ ರೋಹಿತ್, ಕೆ.ಐ.ಸಿ.ಎಂ ಮೈಸೂರು ಉಪನ್ಯಾಸಕರಾದ ಎಸ್. ಮಹದೇವಪ್ಪ, ಇತರರು ಪಾಲ್ಗೊಳ್ಳಲಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''