ಬರೀ ನನ್ನ ರಾಜಕೀಯ ನಡೆಯ ಬಗ್ಗೆ ಮಾತು ಸಲ್ಲ: ಹೆಬ್ಬಾರ್‌

KannadaprabhaNewsNetwork |  
Published : Apr 18, 2024, 02:21 AM IST
ಶಿವರಾಮ ಹೆಬ್ಬಾರ್ | Kannada Prabha

ಸಾರಾಂಶ

ಹರಿಪ್ರಕಾಶ ಕೋಣೆಮನೆ ಅವರಿಗೆ ನನ್ನ ರಾಜಕೀಯದ ನಡೆಯ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಯಲ್ಲಾಪುರ: ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡರಾದ ಹರಿಪ್ರಕಾಶ ಕೋಣೆಮನೆ ಹಾಗೂ ಪ್ರಮೋದ ಹೆಗಡೆ ಅವರು ಪಕ್ಷದ ಅಭ್ಯರ್ಥಿಯ ಗೆಲುವಿನ ಕಾರ್ಯತಂತ್ರದ ಬಗ್ಗೆ ಮಾತನಾಡುವ ಬದಲು ಕೇವಲ ನನ್ನ ರಾಜಕೀಯದ ನಡೆಯ ಬಗ್ಗೆ ಮಾತನಾಡಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಶಾಸಕ ಶಿವರಾಮ ಹೆಬ್ಬಾರ ಪ್ರತಿಕ್ರಿಯಿಸಿದ್ದಾರೆ.

ಹುದ್ದೆಯ ಆಸೆಗಾಗಿ ಬಿಜೆಪಿ ನಾಯಕರ ದುಂಬಾಲು ಬಿದ್ದು ಕೆಲವು ತಿಂಗಳಿನ ಇಚ್ಛೆಗೆ ರಾಜ್ಯ ವಕ್ತಾರ ಹುದ್ದೆಯನ್ನು ಅಲಂಕರಿಸಿರುವ ಹರಿಪ್ರಕಾಶ ಕೋಣೆಮನೆ ಅವರಿಗೆ ನನ್ನ ರಾಜಕೀಯದ ನಡೆಯ ಬಗ್ಗೆ ಮಾತನಾಡುವ ಯಾವುದೇ ಅಧಿಕಾರವಿಲ್ಲ.

ಮುಂದೆ ಯಲ್ಲಾಪುರ ಕ್ಷೇತ್ರದ ಶಾಸಕರಾಗಬೇಕು ಎಂದು ಪ್ರಯತ್ನ ನಡೆಸುತ್ತಿರುವ ಕೋಣೆಮನೆ ಅವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ ಇದರೆ ಮೊದಲು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಸಾವಿರಾರು ರುಪಾಯಿ ಡೋನೆಷನ್ ಸಂಪೂರ್ಣ ರದ್ದು ಮಾಡಲಿ ಹಾಗೂ ಸಮಾಜದ ಬಗ್ಗೆ ಮಾತನಾಡುವ ತಾವು ನಿಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಾವತಿಯನ್ನು ನೀಡದೆ ಸಾವಿರಾರು ರುಪಾಯಿ ಹಣವನ್ನು ಪಡೆಯುತ್ತಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕಲ್ಪನೆಗೆ ವಿರುದ್ಧವಾಗಿದೆ.

ಕಾಂಗ್ರೆಸ್ ಪಕ್ಷದಿಂದ ಅಧಿಕಾರವನ್ನು ಅನುಭವಿಸುತ್ತಿರುವ ಪ್ರಮೋದ ಹೆಗಡೆ ಅವರು ಬೇರೆ ಅವರಿಗೆ ಅಪ್ಪ ಬೇರೆ ಮಗ ಬೇರೆ ಪಕ್ಷ ಎನ್ನುವ ಮೊದಲು, ತಾವು ಕಾಂಗ್ರೆಸ್ ಸರ್ಕಾರ ನೀಡಿರುವ ಹುದ್ದೆಗೆ ರಾಜೀನಾಮೆಯನ್ನು ನೀಡಿ ತಾವು ಅಪ್ಪ- ಮಗ ಒಂದೇ ಪಕ್ಷದಲ್ಲಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಡಬೇಕು ಎಂದು ಹೆಬ್ಬಾರ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ. ಅಂಜಲಿ ತಮ್ಮ ನಿಲುವು ಸ್ಪಷ್ಟಪಡಿಸಲಿ: ಸದಾನಂದ ಭಟ್

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಮಾಧ್ಯಮದ ಮುಂದೆ ಕಾರವಾರ, ಜೋಯಿಡಾ ಹಳಿಯಾಳ, ಬೆಳಗಾವಿ, ಬೀದರನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಕನ್ನಡ ರಾಜ್ಯವನ್ನು ವಿಭಜಿಸುವ ಹೇಳಿಕೆಯ ಕುರಿತು ತಮ್ಮ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಲಿ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸದಾನಂದ ಭಟ್ಟ ನಿಡಗೋಡ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯ ವಿಭಜನೆಯ ವಿಷಯದ ಕುರಿತು ಉತ್ತರ ಕನ್ನಡ ಮತದಾರರ ಮುಂದೆ ತಮ್ಮ ಸ್ಪಷ್ಟ ನಿಲುವನ್ನು ಅಭ್ಯರ್ಥಿ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಅಖಂಡ ಕನ್ನಡ ನಾಡಿನ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಸ್ತಾವನೆಯ ಹೇಳಿಕೆಯನ್ನು ಸ್ಪಷ್ಟವಾಗಿ ವಿರೋಧಿಸುವ ನಿಲುವನ್ನು ಅವರು ಯಾಕೆ ಹೊಂದಿಲ್ಲ? ಇದು ಯಾರನ್ನು ಓಲೈಸುವ ತಂತ್ರವಾಗಿದೆ? ಕಾಂಗ್ರೆಸ್ಸಿನ ಲೋಕಸಭೆ ಅಭ್ಯರ್ಥಿಗಳು ಸ್ಪಷ್ಟವಾಗಿ ಈ ವಿಷಯದ ಕುರಿತು ತಮ್ಮ ನಿರ್ಧಾರವನ್ನು ಜನರ ಮುಂದೆ ಪ್ರಕಟಿಸಿ ಉತ್ತರ ಕನ್ನಡ ಜಿಲ್ಲೆಯ ಜನರ ಮತವನ್ನು ಕೇಳಲಿ.2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಮತಗಟ್ಟೆಯ ಬಳಿ ಕೇಸರಿ ಶಾಲನ್ನು ಹಾಕಿಕೊಂಡು ಬಂದಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ತಕರಾರನ್ನು ಮಾಡಿ ದೂರು ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇಸರಿ ಬಣ್ಣದ ಮೇಲೆ ಪ್ರೀತಿ ಉಕ್ಕಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!