ಸಂವಿಧಾನದಿಂದ ಜನರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ

KannadaprabhaNewsNetwork |  
Published : Oct 10, 2025, 01:00 AM IST
೯ಶಿರಾ೧: ಶಿರಾ ನಗರದ ಸರಕಾರಿ ಪ್ರಥಮ ದರ್ಜೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಾಂವಿಧಾನಿಕ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರಪ್ಪ.ಡಿ, ಡಾ.ಶ್ರೀನಿವಾಸ್, ಡಾ. ಹೊನ್ನಾಂಜಿನಯ್ಯ.ಡಿ. ಆರ್. ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಭಾರತದ ಸಂವಿಧಾನವು ದೇಶದ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡಿದೆ. ಪ್ರಸ್ತುತ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಯುವ ನಾಗರಿಕರ ಪಾತ್ರ ಮಹತ್ತರವಾದುದು ಎಂದು ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರಪ್ಪ.ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಭಾರತದ ಸಂವಿಧಾನವು ದೇಶದ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡಿದೆ. ಪ್ರಸ್ತುತ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಯುವ ನಾಗರಿಕರ ಪಾತ್ರ ಮಹತ್ತರವಾದುದು ಎಂದು ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರಪ್ಪ.ಡಿ ಹೇಳಿದರು. ಅವರು ಗುರುವಾರ ನಗರದ ಸರಕಾರಿ ಪ್ರಥಮ ದರ್ಜೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ (ಐಕ್ಯೂಎಸಿ) ಮತ್ತು ತಿಪಟೂರಿನ ಜನಸ್ಪಂದನ ಟ್ರಸ್ಟ್ ಜಂಟಿಯಾಗಿ ಪದವಿ ವಿದ್ಯಾರ್ಥಿಗಳಲ್ಲಿ ಆಳವಾದ ನಾಗರಿಕ ಜವಾಬ್ದಾರಿಯನ್ನು ಬೆಳೆಸುವ ಪ್ರಯತ್ನದಲ್ಲಿ, ಏರ್ಪಡಿಸಿದ್ದ ಸಾಂವಿಧಾನಿಕ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಸಂವಿಧಾನವು ಒಂದು ದಾಖಲೆಗಿಂತ ಹೆಚ್ಚಿನದಾಗಿದೆ. ಬೇರೆ ದೇಶಗಳ ಸಂವಿಧಾನಕ್ಕಿಂತ ಅತಿ ದೊಡ್ಡ ಸಂವಿಧಾನವಾಗಿದೆ ಎಂದರು. ಕ್ರೈಸ್ಟ್ ಅಕಾಡೆಮಿ ಕಾನೂನು ಸಂಸ್ಥೆಯ ಪ್ರಾಧ್ಯಾಪಕರಾದ ಮತ್ತು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ.ಶ್ರೀನಿವಾಸ್ ಮುಖ್ಯ ಭಾಷಣ ಮಾಡಿ ನಾಗರಿಕರು ಸಾಂವಿಧಾನಿಕ ತತ್ವಗಳನ್ನು ಅರ್ಥಮಾಡಿಕೊಂಡು ಅನ್ವಯಿಸಿದಾಗ ಮಾತ್ರ ಕಾನೂನು ನಿಬಂಧನೆಗಳು ಅಧಿಕಾರವನ್ನು ಪಡೆಯುತ್ತವೆ. ಸಂವಿಧಾನದ ಜ್ಞಾನವು ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಮ್ಮನ್ನು ಸಜ್ಜುಗೊಳಿಸುತ್ತದೆ, ಸಂವಿಧಾನದ ಪೀಠಿಕೆಯಲ್ಲಿ ಕಲ್ಪಿಸಲಾದ ಎಲ್ಲರನ್ನೂ ಒಳಗೊಂಡ ಸಮಾಜವನ್ನು ಪೋಷಿಸುತ್ತದೆ ಎಂದ ಅವರು ವಿದ್ಯಾರ್ಥಿಗಳು ಸಾಂವಿಧಾನಿಕ ಆದರ್ಶಗಳ ಕ್ರಿಯಾಶೀಲ ದೀಕ್ಷಾಧಾರಿಗಳಾಗ ಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್‌ನ ಅಧ್ಯಕ್ಷರಾದ ಶಶಿಧರ್ ಸಿ.ಬಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೊನ್ನಾಂಜಿನಯ್ಯ.ಡಿ. ಆರ್., ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಾಳಪ್ಪ ಎ.ಬಿ., ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟನಾರಾಯಣ್.ಎಸ್., ಐಕ್ಯೂಎಸಿ ಸಂಚಾಲಕರಾದ ಪ್ರಭಾಸ್ ಪಂಡಿತ್ ಟಿ.ಎಸ್., ಜನಸ್ಪಂದನ ಟ್ರಸ್ಟ್‌ನ ಶ್ರೀಕಾಂತ್, ಅಧ್ಯಾಪಕರಾದ ಸುನಿಲ್ ಕುಮಾರ್‌ಆರ್., ಮಂಜುನಾಥ್ ಸಿ. ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ